newsfirstkannada.com

ಪ್ಯಾಂಟ್​ ಒಳಗೆ ಬರೋಬ್ಬರಿ 22 ಲಕ್ಷ ಮೌಲ್ಯದ ಚಿನ್ನ ಸಾಗಾಣಿಕೆ; ಕೆಂಪೇಗೌಡ ಏರ್ಪೋರ್ಟ್​ನಲ್ಲಿ ವ್ಯಕ್ತಿ ಅಂದರ್​

Share :

Published February 22, 2024 at 10:55am

  ಶಾರ್ಜಾದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿ ಅರೆಸ್ಟ್​

  ಪ್ಯಾಂಟ್​ ಒಳಗೆ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

  ಅಕ್ರಮವಾಗಿ ಬರೋಬ್ಬರಿ 22 ಲಕ್ಷ ಮೌಲ್ಯದ ಚಿನ್ನ ಸಾಗಾಣಿಕೆ

ಬೆಂಗಳೂರು: ಪ್ಯಾಂಟ್ ಒಳಗಡೆ ಚಿನ್ನವನ್ನು ಅಡಗಿಸಿ ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳ ಬಂಧಿಸಿದ್ದಾರೆ. ಪ್ರಯಾಣಿಕನ ಕೈಯಿಂದ ಸುಮಾರು 22.5 ಲಕ್ಷ ಮೌಲ್ಯದ 367 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಶಾರ್ಜಾದಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕನು ಕೆಂಪೇಗೌಡ ಏರ್ಪೋಟ್ ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈಯಲ್ಲಿ ಲಾಕ್​ ಆಗಿದ್ದಾನೆ. ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಲು ವ್ಯಕ್ತಿ ಡಿಸೈನ್ ಪ್ಯಾಂಟ್ ಧರಿಸಿದ್ದನು. ಪ್ಯಾಂಟ್ ಒಳಗಡೆ ಹಲವು ಲೇಯರ್​ಗಳನ್ನ ಮಾಡಿ ಅದರಲ್ಲಿ ಚಿನ್ನ ಅಡಗಿಸಿಟ್ಟಿದ್ದನು.

ಪೌಡರ್ ರೂಪದ ಚಿನ್ನವನ್ನ ಅಡಗಿಸಿ ಸಾಗಾಟ ಮಾಡಲು ಯತ್ನಿಸಿದ ವೇಳೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಪ್ಯಾಂಟ್ ಕಟ್ ಮಾಡಿ ಚಿನ್ನದ ಪೌಡರ್ ಅನ್ನು ಕಸ್ಟಮ್ಸ್ ಅಧಿಕಾರಿಗಳು ಪಡೆದಿದ್ದಾರೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ಯಾಂಟ್​ ಒಳಗೆ ಬರೋಬ್ಬರಿ 22 ಲಕ್ಷ ಮೌಲ್ಯದ ಚಿನ್ನ ಸಾಗಾಣಿಕೆ; ಕೆಂಪೇಗೌಡ ಏರ್ಪೋರ್ಟ್​ನಲ್ಲಿ ವ್ಯಕ್ತಿ ಅಂದರ್​

https://newsfirstlive.com/wp-content/uploads/2024/02/Gold-1.jpg

Load More