ಇನ್​ಸ್ಟಾಗ್ರಾಮ್​ಗೆ ಶೇರ್ ಮಾಡಿದ ಒಂದೇ ಒಂದು ರೀಲ್ಸ್​ನಿಂದ ಯುವತಿ ದುರಂತ ಅಂತ್ಯ

author-image
Veena Gangani
Updated On
ಇನ್​ಸ್ಟಾಗ್ರಾಮ್​ಗೆ ಶೇರ್ ಮಾಡಿದ ಒಂದೇ ಒಂದು ರೀಲ್ಸ್​ನಿಂದ ಯುವತಿ ದುರಂತ ಅಂತ್ಯ
Advertisment
  • ಒಂದು ಫೋಟೋಶೂಟ್​ನಿಂದ ಹೋಗೇ ಬಿಡ್ತು ಜೀವ
  • ಚೈತನ್ಯ ಮನೆ ಬಳಿ ಬಂದಿದ್ದ ವಿಜಯ್ ಕುಮಾರ್ ಗಲಾಟೆ
  • ಪ್ರಿಯಕರನ ಜೊತೆ ಜಗಳ ಮಾಡಿ ಯುವತಿ ದಾರುಣ ಅಂತ್ಯ

ತುಮಕೂರು: ಬಾಯ್ ಫ್ರೆಂಡ್ ಜೊತೆಗೆ ಗಲಾಟೆ ಮಾಡಿಕೊಂಡು ಯುವತಿಯೊಬ್ಬಳು ಸಾವಿಗೆ ಶರಣಾಗಿರೋ ಘಟನೆ
ಗ್ರಾಮಾಂತರ ಹೊಸಹಳ್ಳಿಯಲ್ಲಿ ನಡೆದಿದೆ. ಚೈತನ್ಯ (22) ಮೃತ ಯುವತಿ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಇದನ್ನೂ ಓದಿ: ಕಾರು ಓವರ್​ ಟೇಕ್ ಗಲಾಟೆ.. ಅನಂತ್ ಕುಮಾರ್ ಹೆಗಡೆ ವಿರುದ್ಧ ಎಫ್​ಐಆರ್..!

publive-image

ಅಸಲಿಗೆ ಆಗಿದ್ದೇನು..?

22 ವರ್ಷದ ಯುವತಿ ಚೈತನ್ಯ ಫೈನಲ್ ಇಯರ್ ಡಿಗ್ರಿ ವ್ಯಾಸಂಗ ಮಾಡುತ್ತಿದ್ದಳು. ಅಲ್ಲದೇ ಮೇಕಪ್ ಆರ್ಟಿಸ್ಟ್ ಸಹ ಆಗಿದ್ದ ಚೈತನ್ಯ ತಾಯಿ ಜೊತೆಗೆ ವಾಸವಾಗಿದ್ದಳು. ತುಮಕೂರು ಗ್ರಾಮಾಂತರದ ಹೊಸಹಳ್ಳಿ ನಿವಾಸಿಯಾದ ಚೈತನ್ಯ ಪಕ್ಕದ ಊರಿನ ವಿಜಯ್ ಕುಮಾರ್ ಎಂಬಾತನ ಜೊತೆಗೆ ಪ್ರೀತಿ ಮಾಡುತ್ತಿದ್ದಳಂತೆ. ಚೈತನ್ಯಳನ್ನು ಪ್ರೀತಿಸುತ್ತಿದ್ದ ಯುವಕ ವಿಜಯ್ ಕುಮಾರ್ ಕಾರು ಚಾಲಕನಾಗಿದ್ದ.

publive-image

ಇತ್ತೀಚೆಗೆ ಸ್ಟ್ರೀಟ್ ಫೋಟೋಗ್ರಾಫರ್​ ಒಬ್ಬ ಚೈತನ್ಯ ಫೋಟೋ ತೆಗೆದಿದ್ದ. ಹೀಗೆ ತೆಗೆದಿದ್ದ ಫೋಟೋಗಳ ರೀಲ್ಸ್ ಅನ್ನು ಚೈತನ್ಯ ತನ್ನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಳಂತೆ. ಈ ರೀಲ್ಸ್ ಸ್ಟೇಟಸ್ ಹಾಕಿದ್ದಕ್ಕೆ ಲವರ್​ ವಿಜಯ್ ಕುಮಾರ್ ಕೋಪಗೊಂಡಿದ್ದಾನೆ. ಇದೇ ವಿಚಾರ ಪ್ರಶ್ನಿಸಲು ನಿನ್ನೆ ರಾತ್ರಿ ಚೈತನ್ಯ ಮನೆ ಬಳಿ ವಿಜಯ್ ಬಂದಿದ್ದನಂತೆ. ಆಗ ರೂಂನಲ್ಲಿದ್ದರೂ ಬಾಗಿಲು ಚಿಲಕ ಹಾಕಿ, ಕಿಟಕಿ ಬಳಿ ಇಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಅಲ್ಲದೇ ವಿಜಯ್ ಈ ವಿಚಾರ ಚೈತನ್ಯ ಸಂಬಂಧಿಗೆ ಕರೆ ಮಾಡಿ ವಿಚಾರ ತಿಳಿಸಿದ್ದನಂತೆ.

publive-image

ಇದಾದ ಕೆಲವು ಗಂಟೆಗಳ ಬಳಿಕ ಚೇತನ್ಯ ನೇಣಿ ಹಾಕಿಕೊಂಡು ಜೀವಬಿಟ್ಟಿದ್ದಾಳೆ. ಸದ್ಯ ಈ ಘಟನೆ ಸಂಬಂಧ ತುಮಕೂರು ಗ್ರಾ.ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚೈತನ್ಯ ಸಾವಿಗೆ ವಿಜಯ್ ಕುಮಾರ್ ಕಾರಣ ಎಂದು ದೂರು ದಾಖಲಾಗಿದೆ. ಸದ್ಯ ವಿಜಯ್​ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment