Advertisment

ಕೇದಾರನಾಥ ದೇವಸ್ಥಾನದಲ್ಲಿ 228kg ಚಿನ್ನ ನಾಪತ್ತೆ! ಈ ಗಂಭೀರ ಆರೋಪ ಮಾಡಿದ್ಯಾರು ಗೊತ್ತಾ?

author-image
AS Harshith
Updated On
ಕೇದಾರನಾಥ ದೇವಸ್ಥಾನದಲ್ಲಿ 228kg ಚಿನ್ನ ನಾಪತ್ತೆ! ಈ ಗಂಭೀರ ಆರೋಪ ಮಾಡಿದ್ಯಾರು ಗೊತ್ತಾ?
Advertisment
  • ದೇಶಾದ್ಯಂತ ಸಂಚಲನ ಸೃಷ್ಟಿಸಿದೆ ಸ್ವರ್ಣ ಕಾಣೆ ಆಗಿರೋ ಸುದ್ದಿ
  • ಕೇದಾರನಾಥನ ಒಡವೆ ಎಲ್ಲೋಯ್ತು? ಕದ್ದಿದ್ದು ಯಾರು?
  • ದೇವಾಲಯದ 228 ಕೆ.ಜಿ ಚಿನ್ನ! ಇದಕ್ಕೆ ಯಾರು ಜವಾಬ್ದಾರಿ?

ಮೊನ್ನೆಯಷ್ಟೇ ಜಗನ್ನಾಥನ ರತ್ನಭಂಡಾರ ರಹಸ್ಯ ಕೊಠಡಿ ತೆರೆಯಲಾಗಿದೆ. ಬಿಜೆಡಿ ಸರ್ಕಾರದ ಮೇಲೆ ಕಳ್ಳತನದ ಆರೋಪ ಹೊರಿಸಿ ಗೆದ್ದು ಬಂದ ಬಿಜೆಪಿ, ತನ್ನ ಮಾತು ಉಳಿಸಿಕೊಂಡಿದೆ. ಈ ಬೆನ್ನಲ್ಲೇ ಪವಿತ್ರ ಕೇದಾರನಾಥ ದೇವಾಲಯದ ಸುದ್ದಿಯೊಂದು ಸಂಚಲನ ಎಬ್ಬಿಸಿದೆ. 228 ಕೆ.ಜಿ ಚಿನ್ನ ನಾಪತ್ತೆಯಾಗಿದೆ ಅಂತ ಜ್ಯೋತಿರ್ಮಠದ ಶಂಕರಾಚಾರ್ಯರು ಆರೋಪಿಸಿದ್ದಾರೆ.

Advertisment

ಉತ್ತರಾಖಂಡದ ಕೇದಾರನಾಥ ದೇವಾಲಯದ ಸ್ವರ್ಣ ಕಾಣೆ ಆಗಿದೆ ಅನ್ನೋ ಗಂಭೀರ ಆರೋಪ ಒಂದು ಕೇಳಿ ಬಂದಿದೆ. ಈ ಆರೋಪವನ್ನ ಯಾರೋ ಹಾದಿ-ಬಿದಿಯ ವ್ಯಕ್ತಿ ಮಾಡಿಲ್ಲ. ಹಿಂದೂಗಳ ಆರಾಧ್ಯ ಜ್ಯೋತಿರ್ಮಠದ ಶಂಕರಾಚಾರ್ಯರು ಸಿಡಿಸಿದ ಬಾಂಬ್​​.

publive-image

ಜ್ಯೋತಿರ್ಮಠ ಶಂಕರಾಚಾರ್ಯರ ಗಂಭೀರ ಆರೋಪ!

ಕೇದಾರನಾಥ. ಶಿವನ 12 ಜ್ಯೋತಿರ್ಲಿಂಗಗಳಲ್ಲೇ ಪರಮ ಪವಿತ್ರ ಕ್ಷೇತ್ರ. ಉತ್ತರಾಖಂಡದ ಗರ್ವಾಲ್ ಹಿಮಾಲಯ ಶ್ರೇಣಿಯಲ್ಲಿ ಆದಿಶಂಕರನೇ ನೆಲೆ ನಿಂತ ಪುಣ್ಯಭೂಮಿ. ಈಗ ಇದೇ ಕೇದರನಾಥ ದೇಗುಲದ ರಹಸ್ಯವೊಂದನ್ನ ಜ್ಯೋತಿರ್ಮಠದ ಅವಿಮುಕ್ತೇಶ್ವರಾನಂದ ಶಂಕರಾಚಾರ್ಯ ಸ್ವಾಮೀಜಿ ಬಿಚ್ಚಿಟ್ಟಿದ್ದಾರೆ. ದೇವಾಲಯದ 228 ಕೆ.ಜಿ ಚಿನ್ನ ನಾಪತ್ತೆಯಾಗಿದೆ ಅಂತ ಹೇಳಿದ್ದಾರೆ.

ಇದನ್ನೂ ಓದಿ: ಡ್ರಗ್ಸ್​​ ಕೇಸ್​​ನಲ್ಲಿ ನಟಿ ರಕುಲ್ ಪ್ರೀತ್ ಸಿಂಗ್ ಸಹೋದರ ಅರೆಸ್ಟ್! 2 ಕೋಟಿ ಮೌಲ್ಯದ ಮಾದಕ ವಸ್ತು ಸೀಜ್

Advertisment

publive-image

ಇನ್ನು, 12 ಜ್ಯೋತಿರ್ಲಿಂಗಗಳು ಮತ್ತು ಅವುಗಳ ನಿಗದಿತ ಸ್ಥಳಗಳನ್ನ ಹೊಂದಿರುವ ಮಹತ್ವ ಪ್ರಸ್ತಾಪಿಸಿದ ಸ್ವಾಮೀಜಿ, ದೆಹಲಿಯಲ್ಲಿ ಕೇದಾರನಾಥ ದೇವಾಲಯ ನಿರ್ಮಾಣ ವಿರೋಧಿಸಿದ್ದಾರೆ.

ಇದನ್ನೂ ಓದಿ: ವಿಪರೀತ ಮಳೆ, ಹಳ್ಳದಂತಾದ ಬಸ್ ನಿಲ್ದಾಣ.. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಕೇದಾರಾಥನಲ್ಲಿನ 228 ಕೆ.ಜಿ ಚಿನ್ನ ನಾಪತ್ತೆ ಮಾಡಿದ್ದಾರೆ. ಯಾರು ಈ ಬಗ್ಗೆ ಮಾತ್ನಾಡ್ತಿಲ್ಲ ಯಾಕೆ? ಈವರೆಗೆ ಯಾವುದೇ ತನಿಖೆಯೂ ಆಗಿಲ್ಲ. 228 ಕೆ.ಜಿ ಚಿನ್ನದ ಹಗರಣ ಕೇದಾರನಾಥನಲ್ಲಿ ಆಗಿದೆ. ಇದಕ್ಕೆ ಯಾರು ಜವಾಬ್ದಾರಿ? ಯಾಕೆ ತನಿಖೆ ಆಗ್ತಿಲ್ಲ. ಯಾಕೆ ಈ ಬಗ್ಗೆ ನಿರ್ಣಯ ಆಗ್ತಿಲ್ಲ.
- ಅವಿಮುಕ್ತೇಶ್ವರಾನಂದ ಶಂಕರಾಚಾರ್ಯರು, ಜ್ಯೋತಿರ್ಮಠ

Advertisment

ಒಟ್ಟಾರೆ, ದೆಹಲಿಯಲ್ಲಿ ಕೇದಾರನಾಥ ದೇವಾಲಯದ ನಿರ್ಮಾಣದ ಸುದ್ದಿ ಗದ್ದಲದ ನಡುವೆ ಜ್ಯೋತಿರ್ಮಠದ ಶಂಕರಾಚಾರ್ಯರ ಚಿನ್ನದ ಹಗರಣದ ಹೇಳಿಕೆ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment