ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಅಮಾನುಷ ಹಲ್ಲೆ, ಜನಾಂಗೀಯ ನಿಂದನೆ

author-image
Ganesh
Updated On
ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಅಮಾನುಷ ಹಲ್ಲೆ, ಜನಾಂಗೀಯ ನಿಂದನೆ
Advertisment
  • ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್‌ ನಗರದಲ್ಲಿ ಗಲಾಟೆ
  • ಚರಣ್ ಪ್ರೀತ್ ಸಿಂಗ್ ಮೇಲೆ ಸ್ಥಳೀಯ ಗುಂಪು ಅಟ್ಯಾಕ್
  • ಹಲ್ಲೆ ಮಾಡ್ತಿರುವ ವಿಡಿಯೋ ಭಾರೀ ವೈರಲ್ ಆಗ್ತಿದೆ

ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಯ ಮೇಲೆ ತೀವ್ರ ಹಲ್ಲೆಯಾಗಿದೆ. ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್‌ ನಗರದಲ್ಲಿ ಕಾರ್ ಪಾರ್ಕಿಂಗ್ ವಿಚಾರದಲ್ಲಿ ಜಗಳವಾಗಿ ಭಾರತೀಯ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿ, ಜನಾಂಗೀಯ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕಿನಟೋರೆ ಅವೆನ್ಯೂ ಬಳಿ ಭಾರತದ ವಿದ್ಯಾರ್ಥಿ ಚರಣ್ ಪ್ರೀತ್ ಸಿಂಗ್ ಜೊತೆಗೆ ಆಸ್ಟ್ರೇಲಿಯಾದ ಜನರ ಗುಂಪೊಂದು ಜಗಳವಾಡಿ ಹಲ್ಲೆ ಮಾಡಿದ್ದಾರೆ.

ಚರಣ್ ಪ್ರೀತ್ ಸಿಂಗ್​​ಗೆ ವಿವಾಹವಾಗಿದ್ದು ತನ್ನ ಪತ್ನಿ ಜೊತೆ ಕಾರಿನಲ್ಲಿ ಹೊರಗೆ ಸುತ್ತಾಡಲು ಹೋಗಿದ್ದರು. ಜನರ ಗುಂಪು ತನ್ನ ಬಳಿ ಬಂದು, ಜನಾಂಗೀಯ ನಿಂದನೆ ಮಾಡಿದ್ದರು. ಯಾವುದೇ ಪ್ರಚೋದನೆ ಇಲ್ಲದೆ ನನ್ನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದರು. ಇಂಡಿಯನ್ ಎಂದು ಬೈದರು. ಬಳಿಕ ಪಂಚ್ ಮಾಡಿ ಹೊಡೆದರು. ನಾನು ತಿರುಗಿಸಿ ಹೊಡೆಯಲು ಯತ್ನಿಸಿದೆ, ಆದರೆ ಅವರೇ ನಾನು ಪ್ರಜ್ಞೆ ಕಳೆದುಕೊಳ್ಳುವವರೆಗೂ ಹೊಡೆದರು ಎಂದು ಚರಣ್ ಪ್ರೀತ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಪತಿ ವಿರುದ್ಧ ಸುಳ್ಳು ಕೇಸ್ ಹಾಕಿ ಕಿರುಕುಳ ನೀಡಿದ IPS ಪತ್ನಿ.. ಪೋಷಕರಿಗೆ ಬಹಿರಂಗ ಕ್ಷಮಾಪಣೆಗೆ ಸುಪ್ರೀಂ ಆದೇಶ

ಆಸ್ಟ್ರೇಲಿಯಾದಲ್ಲಿ ಈ ರೀತಿಯ ಘಟನೆಗಳು ನಡೆದರೆ ನಮಗೆ ನಮ್ಮ ದೇಶಕ್ಕೆ ವಾಪಸ್ ಹೋಗಬೇಕು ಎಂಬ ಭಾವನೆ ಬರುತ್ತೆ. ನೀವು ನಿಮ್ಮ ದೇಹದಲ್ಲಿ ಏನನ್ನೂ ಬೇಕಾದರೂ ಬದಲಿಸಬಹುದು. ದೇಹದ ಬಣ್ಣ ಬದಲಿಸಲು ಸಾಧ್ಯವಿಲ್ಲ ಎಂದು ಭಾರತದ ವಿದ್ಯಾರ್ಥಿ ಚರಣ್ ಪ್ರೀತ್ ಸಿಂಗ್ ಹೇಳಿದ್ದಾರೆ.

ಜಾಗತಿಕ ಮಾಧ್ಯಮಗಳು ಚರಣ್ ಪ್ರೀತ್ ಸಿಂಗ್ ಮೇಲೆ ಐದು ಮಂದಿಯ ಗುಂಪು ಹಲ್ಲೆ ನಡೆಸುತ್ತಿರುವ ವಿಡಿಯೋವನ್ನು ಪ್ರಸಾರ ಮಾಡಿವೆ. ಆರೋಪಿಗಳು ಚರಣ್ ಪ್ರೀತ್ ಸಿಂಗ್ ಮುಖಕ್ಕೆ ಪಂಚ್ ಮಾಡಿದ್ದಾರೆ. ಹೊಟ್ಟೆಗೆ ಹೊಡೆದಿದ್ದಾರೆ. ನಿರಂತರವಾಗಿ ಒದಿದ್ದಾರೆ. ಚರಣ್ ಪ್ರೀತ್ ಸಿಂಗ್ ಪತ್ನಿಯೂ ಭಯದಿಂದ ಕಿರುಚಾಡುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಬಳಿಕ ಆರೋಪಿಗಳು ತಮ್ಮ ವಾಹನದ ಕಡೆಗೆ ಹೋಗಿದ್ದಾರೆ. ಈ ವೇಳೆಗೆ ಚರಣ್ ಪ್ರೀತ್ ಸಿಂಗ್ ಅಸ್ವಸ್ಥರಾಗಿದ್ದರು.

ಈ ಹಲ್ಲೆಯಿಂದ ಚರಣ್ ಪ್ರೀತ್ ಸಿಂಗ್ ಗೆ ಮೆದುಳುಗೆ ಗಾಯವಾಗಿದೆ. ಮುಖಕ್ಕೂ ತೀವ್ರ ಗಾಯವಾಗಿದೆ. ಬಳಿಕ ಎಮರ್ಜೆನ್ಸಿ ಸೇವೆಯ ಅಧಿಕಾರಿಗಳು ಬಂದು ಚರಣ್ ಪ್ರೀತ್ ಸಿಂಗ್ ರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಹಲ್ಲೆ ಕೇಸ್ ನಲ್ಲಿ 20 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಸಹಕಾರ ನೀಡುವಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೆಜಿಎಫ್ ಬಾಬುಗೆ RTO ಶಾಕ್; ಬಿಗ್​​ಬಿ, ಅಮೀರ್​​​ ಖಾನ್​ರಿಂದ ಖರೀದಿಸಿದ್ದ ಕಾರುಗಳು ಸೀಜ್..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment