newsfirstkannada.com

ಜ್ವರ ಬಂದು ಕೇವಲ ನಾಲ್ಕೇ ದಿನ.. ಕಣ್ಣು ಮುಚ್ಚಿದ ಯುವತಿ; ಡೆಂಘೀ ಮಹಾಮಾರಿಗೆ 5 ವರ್ಷದ ಕಂದಮ್ಮ ಬಲಿ!

Share :

Published July 7, 2024 at 1:46pm

Update July 7, 2024 at 1:58pm

  ಯುವತಿಗೆ ನಾಲ್ಕು ದಿನದ ಹಿಂದಷ್ಟೇ ತೀವ್ರ ಜ್ವರ ಕಾಣಿಸಿಕೊಂಡಿತ್ತು

  ಚಿಕಿತ್ಸೆ ಪಡೆಯುತ್ತಿರುವಾಗಲೇ ಬಹುಅಂಗಾಗ ವೈಫಲ್ಯದಿಂದ ಸಾವು

  ಗದಗ ಜಿಲ್ಲೆಯಲ್ಲಿ ಮಹಾಮಾರಿ ಡೆಂಘೀಗೆ ಮೊದಲ ಬಲಿಯಾಗಿದೆ

ರಾಜ್ಯದಲ್ಲಿ ದಿನ ಕಳೆದಂತೆ ಡೆಂಘೀ ಮಹಾಮಾರಿಯ ಅಬ್ಬರ ಜೋರಾಗುತ್ತಿದೆ. ಪ್ರತಿದಿನ ನೂರಾರು ಮಂದಿ ಡೆಂಘೀ ಜ್ವರಕ್ಕೆ ತುತ್ತಾಗುತ್ತಿದ್ದರೆ, ಸಾವಿನ ಸಂಖ್ಯೆ ಕೂಡ ನಿಧಾನವಾಗಿ ಏರಿಕೆಯಾಗುತ್ತಿದೆ.

ಹಾಸನ ಜಿಲ್ಲೆಯಲ್ಲಿ ಡೆಂಘೀ ವೈರಸ್‌ ಆತಂಕ ಸೃಷ್ಟಿಸಿದೆ. ಶಂಕಿತ ಡೆಂಘೀ ಜ್ವರಕ್ಕೆ 23 ವರ್ಷದ ಸುಪ್ರಿತಾ ಎಂಬ ಯುವತಿ ಸಾವನ್ನಪ್ಪಿದ್ದಾರೆ. ಸುಪ್ರಿತಾಗೆ ಕಳೆದ ನಾಲ್ಕು ದಿನದ ಹಿಂದಷ್ಟೇ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಜ್ವರದಿಂದ ಬಳಲಿದ ಸುಪ್ರಿತಾ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆಯುತ್ತಿರುವಾಗಲೇ ಬಹುಅಂಗಾಗ ವೈಫಲ್ಯ ಕಂಡು ಬಂದಿತ್ತು.

ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಡೆಂಗ್ಯೂಗೆ ಮೊದಲ ಬಲಿ.. 18 ವರ್ಷದ ಕಾಲೇಜು ವಿದ್ಯಾರ್ಥಿನಿ ಸಾವು 

ಸುಪ್ರಿತಾ ಪೋಷಕರು ಜಿಲ್ಲಾಸ್ಪತ್ರೆಯಿಂದ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ನಿನ್ನೆ ರಾತ್ರಿ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಯುವತಿ ಪ್ರಾಣ ಬಿಟ್ಟಿದ್ದಾರೆ. ಅರಸೀಕೆರೆ ತಾಲ್ಲೂಕಿನ, ಮುದುಡಿ ತಾಂಡ್ಯ ಗ್ರಾಮದ ಸುಪ್ರಿತಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಗದಗದಲ್ಲಿ ಡೆಂಘೀಗೆ ಮೊದಲ ಬಲಿ
ಹಾಸನದಲ್ಲಿ 23 ವರ್ಷದ ಯುವತಿ ಸಾವನ್ನಪ್ಪಿದ್ರೆ ಗದಗ ಜಿಲ್ಲೆಯಲ್ಲಿ ಮಹಾಮಾರಿ ಡೆಂಘೀಗೆ ಮೊದಲ ಬಲಿಯಾಗಿದೆ. ಗದಗ ತಾಲೂಕಿನ ಶಿರುಂಜ ಗ್ರಾಮದ ಐದು ವರ್ಷದ ಮಗು ಕೊನೆಯುಸಿರೆಳೆದಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಹೆಚ್ಚಾಯ್ತು ಡೆಂಗ್ಯೂ ಭಯ; 7ನೇ ತರಗತಿ ವಿದ್ಯಾರ್ಥಿನಿ ದಾರುಣ ಸಾವು 

ಡೆಂಘೀಗೆ ಸಾವನ್ನಪ್ಪಿದ ಮಗುವನ್ನು ಚಿರಾಯಿ ಮಂಜುನಾಥ ಹೊಸಮನಿ‌ ಎಂದು ಗುರುತಿಸಲಾಗಿದೆ. ತೀವ್ರವಾದ ಜ್ವರದಿಂದ ಬಳಲುತ್ತಿದ್ದ ಚಿರಾಯಿ ಹೊಸಮನಿಯನ್ನು ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಅಲ್ಲಿಂದ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎಸ್‌ಡಿಎಂ ಆಸ್ಪತ್ರೆಯಲ್ಲಿ ಚಿರಾಯಿ ಮಂಜುನಾಥ ಹೊಸಮನಿ ಚಿಕಿತ್ಸೆ ಫಲಕಾರಿಯಾದ ಸಾವನ್ನಪ್ಪಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜ್ವರ ಬಂದು ಕೇವಲ ನಾಲ್ಕೇ ದಿನ.. ಕಣ್ಣು ಮುಚ್ಚಿದ ಯುವತಿ; ಡೆಂಘೀ ಮಹಾಮಾರಿಗೆ 5 ವರ್ಷದ ಕಂದಮ್ಮ ಬಲಿ!

https://newsfirstlive.com/wp-content/uploads/2024/07/Karnataka-Dengue-Death.jpg

Load More