/newsfirstlive-kannada/media/post_attachments/wp-content/uploads/2024/12/SUVARNA_SOUDHA-1.jpg)
ಬೆಳಗಾವಿ: ಪ್ರತಿ ವರ್ಷದಂತೆ ಈ ವರ್ಷವು ಡಿಸೆಂಬರ್ 9 ರಿಂದ 19ರವರೆಗೆ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಅಧಿವೇಶನ ನಡೆದ್ರೆ ಉತ್ತರ ಕರ್ನಾಟಕದ ಸಮಸ್ಯೆಗಳು ಪರಿಹಾರ ಆಗುತ್ತವೆ ಎಂದು ಹೇಳಲಾಗುತ್ತೆ. ಆದರೆ ಅಲ್ಲಿನ ಸಮಸ್ಯೆಗಳಿಗಿಂತ ಅಧಿವೇಶನದ ಹೆಸರಲ್ಲಿ ಸರ್ಕಾರದ ಕೋಟಿ ಕೋಟಿ ಹಣವನ್ನ ಖರ್ಚು ಮಾಡಲಾಗುತ್ತೆ ಎಂದು ಆರ್ಟಿಐ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.
2023ರ ಚಳಿಗಾಲದ ಅಧಿವೇಶನದಲ್ಲಿ 10 ಕೋಟಿ, 15 ಕೋಟಿ ಅಲ್ಲ ಬರೋಬ್ಬರಿ 24.89 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಕೇವಲ 10 ದಿನಕ್ಕೆ ಈ ಮಟ್ಟದಲ್ಲಿ ಹಣ ವ್ಯಯ ಮಾಡಲಾಗಿದೆ. ವಿಧಾನಸಭೆಯ ಕಾರ್ಯಕಲಾಪಗಳು 66 ಗಂಟೆ 11 ನಿಮಿಷ ನಡೆದಿದೆ. ಇದರಂತೆ ವಿಧಾನ ಪರಿಷತ್ ಕಾರ್ಯಕಲಾಪ 57 ಗಂಟೆ, 29 ನಿಮಿಷ ನಡೆದಿದೆ. ಒಟ್ಟು 123 ಗಂಟೆಗಳ ಸರ್ಕಾರದ ಈ ಕೆಲಸಕ್ಕೆ 24.89 ಕೋಟಿ ಹಣವನ್ನು ಖರ್ಚು ಮಾಡಲಾಗಿದೆ. ಅಂದರೆ ಪ್ರತಿ ಒಂದು ಗಂಟೆಗೆ 20 ಲಕ್ಷದ 8 ಸಾವಿರ ರೂಪಾಯಿ ಖರ್ಚು ಆದಂತೆ ಆಗಿದೆ.
[caption id="attachment_100096" align="alignnone" width="800"] ಭೀಮಪ್ಪ ಗಡಾದ್[/caption]
ಇನ್ನು ಈ ಹಣದಲ್ಲಿ ಇನ್ನು 15 ಕೋಟಿ ರೂಪಾಯಿಯನ್ನು ಯಾವುದಕ್ಕೆ ಖರ್ಚು ಮಾಡಲಾಗಿದೆ ಎಂದು ಲೆಕ್ಕವೇ ಇಲ್ಲವಂತೆ. ಈ ಸುವರ್ಣಸೌಧದಲ್ಲಿ ನಡೆಯುವ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆ ಮಾಡಿದರೂ ಪರಿಹಾರ ಮಾತ್ರ ಕಾಣಲ್ಲ. ಅಲ್ಲಿನ ಯಾವುದೇ ಕೆಲಸಗಳು ಈ ಅಧಿವೇಶನದಿಂದ ಆಗಲ್ಲ. ಸದ್ಯ ಈ ಎಲ್ಲ ಖರ್ಚು ಸಂಬಂಧ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ಅವರು ಮಾಹಿತಿ ಹಕ್ಕಿನಡಿ ರಾಜ್ಯ ಸರ್ಕಾರದಿಂದ ಪಡೆದಿರುವ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
10 ದಿನದ ಅಧಿವೇಶನದಲ್ಲಿ ಯಾವುದಕ್ಕೆ ಎಷ್ಟು ಖರ್ಚು..?
- ಅಧಿವೇಶನಕ್ಕೆ ಆಗಮಿಸುವ ಗಣ್ಯರ ವಸತಿಗಾಗಿ ₹6.82 ಕೋಟಿ ಖರ್ಚು
- ಊಟ ಉಪಹಾರಕ್ಕಾಗಿ- ₹2.35 ಕೋಟಿ ಖರ್ಚು
- ಭದ್ರತೆಗೆ ಆಗಮಿಸಿದ ಪೊಲೀಸ್ ಇಲಾಖೆಗೆ ₹7.32 ಕೋಟಿ ವ್ಯಯ
- ಮೂಲ ಸೌಲಭ್ಯಕ್ಕಾಗಿ ಲೋಕೋಪಯೋಗಿ ಇಲಾಖೆಯಿಂದ ₹5.71 ಖರ್ಚು
- ಫ್ರೂಟ್ ಸಾಲಾಡ್ಗೆ 1,13,700 ರೂಪಾಯಿ ವೆಚ್ಚ
- ಸಲಗರ್ ಟೀ, ಹಟ್ಟಿ ಕಾಫಿಗೆ 3,40,058 ರೂಪಾಯಿ ವೆಚ್ಚ
- ಕಲಾಪ ವೀಕ್ಷಣೆಗೆ ಬರುವ ಮಕ್ಕಳಿಗೆ ಅರೇಬಿಯನ್ ಜ್ಯೂಸ್- 4,01,715 ರೂ. ಖರ್ಚು
- ಮಾಧ್ಯಮದವರ ಊಟ ಉಪಾಹಾರಕ್ಕಾಗಿ 27,86,000 ರೂ. ಖರ್ಚು
- ಮಧ್ಯಾಹ್ನದ ಊಟ ಉಪಹಾರ- 92,39,875 ರೂ. ಖರ್ಚು
- ಪೆಂಡೆಲ್, ಬ್ಯಾರಿಕೇಡ್ ಆಸನದ ಸಲುವಾಗಿ- 22,98,2054 ರೂ. ಖರ್ಚು
- ಸುವರ್ಣಸೌಧದ ಒಳಗೆ-ಹೊರಗೆ ಸುಣ್ಣ-ಬಣ್ಣ, ಕುಡಿಯುವ ನೀರು- 1,55,86,783 ರೂ.
- ಪೊಲೀಸ್ ಸಿಬ್ಬಂದಿ ವಸತಿಗಾಗಿ- 2,89,99,857 ರೂಪಾಯಿ ವ್ಯಯ
- ಪೋಲಿಸ್ ಸಿಬ್ಬಂದಿ ಊಟ ಉಪಾಹಾರ- 3,37,35,000 ರೂಪಾಯಿ ಖರ್ಚು
- ಸಿಸಿ ಟಿವಿ ಅಳವಡಿಸಲು 69,48,503 ರೂಪಾಯಿ ಖರ್ಚು
- ತಾತ್ಕಾಲಿಕ ಶೌಚಾಲಯಕ್ಕಾಗಿ 36,00,000 ರೂಪಾಯಿ
- ಸಚಿವರು, ಶಾಸಕರು ಅಧಿಕಾರಿಗಳ ವಾಹನಗಳ ಇಂಧನ- 40,30,813 ರೂಪಾಯಿ ಖರ್ಚು
- ಸಚಿವರು ಶಾಸಕರ ವಾಸ್ತವ್ಯದ ಖರ್ಚು- 6,82,08,057 ರೂಪಾಯಿ
- ಗಣ್ಯರು, ಮಾರ್ಷಲ್ ಅಧಿಕಾರಿಗಳ ಉಪಾಹಾರ, ಕಾಫಿ, ಟೀ ಫ್ರೂಟ್ ಸಾಲಾಡ್- 2,35,94,238 ರೂಪಾಯಿ ಖರ್ಚು
- ಪರಿಷತ್ತಿನ ಸದಸ್ಯರ ಪ್ರಯಾಣ ಭತ್ಯೆಗಾಗಿ 38,10,640 ರೂಪಾಯಿ ವೆಚ್ಚ
- ವಿಧಾನ ಸಭೆ ಅಧಿಕಾರಿಗಳ ಸಿಬ್ಬಂದಿ ಭತ್ಯೆಗಾಗಿ- 82,94,000 ರೂಪಾಯಿ ಖರ್ಚು
- ವಿಧಾನ ಸಭೆ ಸಿಬ್ಬಂದಿ, ಅಧಿಕಾರಿಗಳ ರಾತ್ರಿ ಊಟಕ್ಕೆ 15,86,500 ರೂ. ಖರ್ಚು
ಇದನ್ನು ಓದಿ:Shivanna; ತಿರುಪತಿ ತಿಮ್ಮಪ್ಪಗೆ ಮುಡಿಕೊಟ್ಟ ಶಿವರಾಜ್ ಕುಮಾರ್ ದಂಪತಿ
ಈ ಮೇಲಿನ ಅಂಕಿ ಅಂಶಗಳೆಲ್ಲ ಕಳೆದ ವರ್ಷದ್ದು ಆಗಿವೆ. 2023ರ ಸದನದ ಸಮಯದಲ್ಲಿ 24.89 ಕೋಟಿ ರೂಪಾಯಿ ಖರ್ಚು ಆಗಿದೆ ಎಂದರೆ ಈ ಸಲ ಅಂದರೆ 2024ರ ಅಧಿವೇಶನದಲ್ಲಿ ಇದಕ್ಕಿಂತ ಹೆಚ್ಚು ಖರ್ಚು ಆಗುವ ಸಾಧ್ಯತೆ ಇರಬಹುದು. ಏಕೆಂದರೆ ಕಳೆದ ವರ್ಷಕ್ಕಿಂತ ಈ ಬಾರಿ ವಸ್ತುಗಳ ಬೆಲೆ ಸೇರಿ ಎಲ್ಲವು ಬದಲಾವಣೆ ಆಗಿರುತ್ತವೆ. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳು ಪರಿಹಾರ ಕಾಣುವುದು ಶೂನ್ಯ. ಆದರೆ ಅಧಿವೇಶನ ಹೆಸರಲ್ಲಿ ಸಾರ್ವಜನಿಕ ತೆರಿಗೆಯ ಹಣ ಮಾತ್ರ ನೀರಿನಂತೆ ಪೋಲಾಗುತ್ತದೆ ಎಂಬುದು ಮಾತ್ರ ದಿಟ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ