/newsfirstlive-kannada/media/post_attachments/wp-content/uploads/2025/05/SPICEJET.jpg)
ಭಾರತ ಮತ್ತು ಪಾಕಿಸ್ತಾನದ ನಡುವೆ ಘರ್ಷಣೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ದೇಶದ ಒಟ್ಟು 24 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ತಿಳಿಸಲಾಗಿದೆ.
ಜಮ್ಮುಕಾಶ್ಮೀರ, ಪಂಜಾಬ್, ರಾಜಸ್ಥಾನ್ ಸೇರಿದಂತೆ ಕೆಲವು ಪ್ರದೇಶಗಳನ್ನು ಟಾರ್ಗೆಟ್ ಮಾಡಿ ಪಾಕಿಸ್ತಾನವೂ ಡ್ರೋಣ್, ಕ್ಷಿಪಣಿಗಳನ್ನು ಉಡಾಯಿಸಲು ಯತ್ನಿಸಿತ್ತು. ಇದಕ್ಕೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆ ದಾಳಿಗೆ ಯತ್ನಿಸಿದ್ದ ಪಾಕಿಸ್ತಾನದ ಡ್ರೋಣ್, ಕ್ಷಿಪಣಿಗಳನ್ನು ಹೊಡೆದುರಳಿಸಿದೆ. ಇದರಿಂದ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಭಾರತದ ಗಡಿ ಭಾಗಗಳಲ್ಲಿ ಬರುವಂತಹ 24 ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚವಂತೆ ತಿಳಿಸಲಾಗಿದೆ.
ಇದನ್ನೂ ಓದಿ: IPL ಮ್ಯಾಚ್ ರದ್ದು.. ವಂದೇ ಭಾರತ್ ರೈಲಿನಲ್ಲಿ ಪಂಜಾಬ್, ಡೆಲ್ಲಿ ಆಟಗಾರರ ಸ್ಥಳಾಂತರ
ಇದರ ಜೊತೆಗೆ ವಿಮಾನ ಪ್ರಯಾಣ ಮಾಡುವಂತಹ ಪ್ರಯಾಣಿಕರು 3 ಗಂಟೆ ಮುಂಚಿತವಾಗಿಯೇ ವಿಮಾನ ನಿಲ್ದಾಣಕ್ಕೆ ಬರುವಂತೆ ಸೂಚಿಸಿದೆ. ದೇಶದ್ಯಾಂತ ಇರುವ ಏರ್ಪೋರ್ಟ್ಗಳಲ್ಲಿ ಭದ್ರತೆಯನ್ನು ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಮುಂಚಿತವಾಗಿಯೇ ಬರಬೇಕೆಂದು ತಿಳಿಸಲಾಗಿದೆ. ನೆರೆಯ ರಾಷ್ಟ್ರಗಳ ಮಧ್ಯ ಘರ್ಷಣೆ ಮತ್ತಷ್ಟು ಬಿಗಡಾಯಿಸುತ್ತಿದ್ದಂರಿಂದ 100ಕ್ಕೂ ಅಧಿಕ ವಿಮಾನಗಳ ಹಾರಾಟವನ್ನು ಸ್ಥಗಿತ ಮಾಡಲಾಗಿದೆ.
ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಸೆಕೆಂಡರಿ ಲ್ಯಾಡರ್ ಪಾಯಿಂಟ್ ಚೆಕ್ (ಎಸ್ಎಲ್ಪಿಸಿ)ಗೆ ಒಳಪಡಿಸಲಾಗುತ್ತದೆ. ಹೀಗಾಗಿ ಮೊದಲೇ ವಿಮಾನ ನಿಲ್ದಾಣಕ್ಕೆ ಬರಬೇಕಾಗುತ್ತದೆ. ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ. ಪಂಜಾಬ್ನ ಅಮೃತಸರ್, ಲೂಧಿಯಾನ, ಪಾಟಿಯಾಲ, ಬಥಿಂದಾ, ಹಲ್ವಾರಾ, ಪಠಣ್ಕೋಟ್, ಹಿಮಾಚಲ ಪ್ರದೇಶದ ಭೂಂತರ್, ಶಿಮ್ಲಾ ಹಾಗೂ ಕಂಗ್ರಾ-ಗಗ್ಗಲ್ ಸೇರಿದಂತೆ ಅನೇಕ ಅನೇಕ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂದು ಹೇಳಲಾಗುತ್ತಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ