/newsfirstlive-kannada/media/post_attachments/wp-content/uploads/2024/07/Wayanad-landslide.jpg)
ಮಳೆಯ ರಣಾರ್ಭಟಕ್ಕೆ ಕೇರಳ ತತ್ತರಿಸಿದೆ. ಮಂಗಳವಾರ ಮುಂಜಾನೆ ಸುರಿದ ಭಾರೀ ಮಳೆಗೆ ವಯನಾಡಿನಲ್ಲಿ ಭೂಕುಸಿತ ಸಂಭವಿಸಿದೆ. ಪರಿಣಾಮ 24 ಜನರು ಸಾವನ್ನಪ್ಪಿದ್ದು, ಮಣ್ಣಿನಡಿಯಲ್ಲಿ ನೂರಾರು ಜನರು ಸಿಲುಕಿದ್ದಾರೆ ಎನ್ನಲಾಗುತ್ತಿದೆ.
ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶವು ಅಕ್ಷರಶಃ ಗುರುತೇ ಸಿಗದಂತಾಗಿದೆ. ರಕ್ಕಸ ಮಳೆಯಾರ್ಭಟಕ್ಕೆ ಸ್ಮಶಾನವಾಗಿದೆ. ಭೂಕುಸಿತದ ಪರಿಣಾಮ ಮರಗಳು, ಮಣ್ಣು, ಮನೆಗಳನ್ನು ತೊಯ್ದುಬಿಟ್ಟಿವೆ. ಸದ್ಯ ಸ್ಥಳದಲ್ಲಿ ರಕ್ಷಣಾ ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಅಗ್ನಿಶಾಮಕ ದಳ, ಎನ್ಡಿಆರ್ಎಫ್ ಮತ್ತು ಸ್ಥಳೀಯ ತಂಡಗಳು ಸೇರಿ ಸುಮಾರು 250 ಜನರು ರಕ್ಷಣೆ ಮಾಡಲು ಮುಂದಾಗಿದ್ದಾರೆ.
ಇದನ್ನೂ ಓದಿ: ಭೀಕರ ಭೂಕುಸಿತ.. ಮೃತರ ಸಂಖ್ಯೆ 24ಕ್ಕೆ ಏರಿಕೆ.. ನೂರಾರು ಮಂದಿ ಜೀವಂತ ಸಮಾಧಿ ಆಗಿರುವ ಆತಂಕ..
ಮುಂಡಕ್ಕೈ ಮತ್ತು ಚೂರಲ್ಮಲಾ ಪ್ರದೇಶದಲ್ಲಿ ಮುಂಜಾನೆ ಭೂಕುಸಿತ ಸಂಭವಿಸಿದೆ. ಬೆಳಗ್ಗಿನ ಜಾವ 2-4 ಗಂಟೆಯ ನಡುವೆ ಭೂಕುಸಿತ ಸಂಭವಿಸಿದೆ. ಸದ್ಯ ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಪಿಣರಾಯಿಗೆ ಕರೆ ಮಾಡಿದ್ದಾರೆ. ಘಟನೆ ಬಗ್ಗೆ ಆಲಿಸಿದ್ದಾರೆ.
ಇದನ್ನೂ ಓದಿ: ಶಿರೂರು ಘಟನೆ ಮಾಸುವ ಮುನ್ನವೇ ಮತ್ತೊಂದು ಭೂಕುಸಿತ.. ಒಂದು ಮಗು ಸೇರಿ 7 ಜನರು ಸಾವು
ಇನ್ನು ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಮೋದಿ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಕುಟುಂಬಗಳಿಗೆ 50 ಸಾವಿರ ಪರಿಹಾರ ಘೋಷಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ