newsfirstkannada.com

ಕೆಲಸ ಸಿಕ್ಕಿಲ್ಲ ಅಂತಾ ಬೇಸರಗೊಂಡು ಮಾರ್ಕ್ಸ್​ ಕಾರ್ಡ್ಸ್​​ ಸುಟ್ಟು ಸಾವಿಗೆ ಶರಣಾದ 24 ವರ್ಷದ ಯುವಕ

Share :

Published February 24, 2024 at 7:50am

    ಆಘಾತಕಾರಿ ವಿಚಾರ, ಬದುಕು ಮುಗಿಸಿದ 24 ವರ್ಷದ ಯುವಕ

    ಪೊಲೀಸ್ ನೇಮಕಾತಿ ಪರೀಕ್ಷೆಯನ್ನೂ ಬರೆದಿದ್ದ ಎಂದ ಪೋಷಕರು

    ರಾಜಕೀಯ ಸ್ವರೂಪ ಪಡೆದುಕೊಂಡ ಆತ್ಮಹತ್ಯೆ ಕೇಸ್, ಸರ್ಕಾರಕ್ಕೆ ವಿಪಕ್ಷ ಕ್ಲಾಸ್

ಕೆಲಸ ಎಲ್ಲಿಯೂ ಸಿಕ್ಕಿಲ್ಲ ಅಂತಾ ನೊಂದು 24 ವರ್ಷದ ಯುವಕನೊಬ್ಬ ಸಾವಿಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಯುವಕ ಇತ್ತೀಚೆಗೆ ನಡೆದ ಪೊಲೀಸ್​ ನೇಮಕಾತಿ ಪರೀಕ್ಷೆ ಬರೆದಿದ್ದ. ಈಗ ನೋಡಿದ್ರೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಆತನ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಉತ್ತರ ಪ್ರದೇಶದ ಕಣ್ಣೌಜ್​ನ ಬ್ರಿಜೇಶ್ ಪಾಲ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತಾನು ಓದಿದ ಎಲ್ಲಾ ಶಾಲಾ ಸರ್ಟಿಫಿಕೇಟ್​ಗಳನ್ನು ಸುಟ್ಟು ಹಾಕಿದ್ದಾನೆ. ಕೆಲಸ ಸಿಕ್ಕಿಲ್ಲ ಎಂದರೆ ನಾನು ಪದವಿ ಪಡೆದು ಏನ್ ಪ್ರಯೋಜನ ಬಂತು? ನನ್ನ ಅರ್ಧ ವಯಸ್ಸನ್ನು ಓದುವುದಕ್ಕಾಗಿಯೇ ಮೀಸಲಿಟ್ಟಿದ್ದೆ ಎಂದು ಡೆತ್​​ನೋಟ್​ನಲ್ಲಿ ತಿಳಿಸಿದ್ದಾನೆ.

ಆತ್ಮಹತ್ಯೆಗೆ ಕೆಲಸ ಸಿಕ್ಕಿಲ್ಲ ಅನ್ನೋದೇ ಪ್ರಮುಖ ಕಾರಣ. ಡೆತ್​ನೋಟ್​ನಲ್ಲಿ ಬೇರೆ ಯಾರ ವಿರದ್ಧವೂ ಬರೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಯುವಕನ ಆತ್ಮಹತ್ಯೆ ಪ್ರಕರಣವು ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಯೋಗಿ ಆದಿತ್ಯನಾಥ್ ಸರ್ಕಾರವನ್ನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಲಸ ಸಿಕ್ಕಿಲ್ಲ ಅಂತಾ ಬೇಸರಗೊಂಡು ಮಾರ್ಕ್ಸ್​ ಕಾರ್ಡ್ಸ್​​ ಸುಟ್ಟು ಸಾವಿಗೆ ಶರಣಾದ 24 ವರ್ಷದ ಯುವಕ

https://newsfirstlive.com/wp-content/uploads/2024/02/UP-3-1.jpg

Load More