ಕೋಲಾರದಲ್ಲಿ ಹರಿದ ನೆತ್ತರು.. ಸಿನಿಮಾ ಶೈಲಿಯಲ್ಲಿ ಯುವಕನ ಕೊಚ್ಚಿ ಕೊಲೆ ಮಾಡಿದ ಹಂತಕರು

author-image
Veena Gangani
Updated On
ಕೋಲಾರದಲ್ಲಿ ಹರಿದ ನೆತ್ತರು.. ಸಿನಿಮಾ ಶೈಲಿಯಲ್ಲಿ ಯುವಕನ ಕೊಚ್ಚಿ ಕೊಲೆ ಮಾಡಿದ ಹಂತಕರು
Advertisment
  • ಹೊಸಕೋಟೆ ತಾಲೂಕಿನ ಗಂಗಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ
  • ಕೋಲಾರದಿಂದ ಹೊಸಕೋಟೆ ಕಡೆ ಕಾರಿನಲ್ಲಿ ಬರ್ತಿದ್ದ ಯುವಕನ ಕೊಲೆ
  • ಯುವಕನ ಕೊಲೆ ನಂತರ ವಾಹನ ಸಮೇತ ಹಂತಕರು ಸ್ಥಳದಿಂದ ಎಸ್ಕೇಪ್

ಕೋಲಾರ: ಸಿನಿಮಾ ಶೈಲಿಯಲ್ಲಿ ಕಾರನ್ನು ಚೇಸ್​ ಮಾಡಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿರೋ ಘಟನೆ ಹೊಸಕೋಟೆ ತಾಲೂಕಿನ ಗಂಗಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕೋಲಾರ ಮೂಲದ ಬಾರ್ಗವ್ (24) ಕೊಲೆಯಾದ ಯುವಕ. ಮೃತ ಯುವಕ ತಡರಾತ್ರಿ ಕೋಲಾರದಿಂದ ಹೊಸಕೋಟೆ ಕಡೆ ಕಾರಿನಲ್ಲಿ ಬರುತ್ತಿದ್ದ.

publive-image

ಇದನ್ನೂ ಓದಿ: ಸಿಗರೇಟ್ ಸೇದದವರಿಗೆ ಲಂಗ್ ಕ್ಯಾನ್ಸರ್‌.. ಅಪರ್ಣಾ ಸಾವಿನ ಬೆನ್ನಲ್ಲೇ ಹೆಚ್ಚಿದ ಆತಂಕ; ಏನಿದು ಅಪಾಯ?

ಆದರೆ ಈ ವೇಳೆ ಕಾರು ಚೇಸ್ ಮಾಡಿ ಡಿಕ್ಕಿ ಹೊಡೆದಿದ್ದಾರೆ. ಬಳಿಕ ಇದೆ ನೆಪದಲ್ಲಿ ಗಲಾಟೆ ಮಾಡಿ ಲಾಂಗು ಹಾಗೂ ಮಚ್ಚಿನಿಂದ ಹಲ್ಲೆ ಮಾಡಿ ಯುವಕನ್ನು ಕೊಲೆ ಮಾಡಿದ್ದಾರೆ. ಯುವಕನನ್ನು ಕೊಲೆ ಮಾಡಿದ ನಂತರ ಆರೋಪಿಗಳು ವಾಹನ ಸಮೇತ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ನಂದಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಮಾಡಿ ಪರಾರಿಯಾದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment