ಕೆಟ್ಟ ನಿರ್ಧಾರಕ್ಕೂ ಮುನ್ನ ತಂಗಿಗೆ ಮೆಸೇಜ್.. ಗ್ರಾ.ಪಂ ಸದಸ್ಯನ ಪುತ್ರಿ ಮಾಡಿದ ಆರೋಪ ಏನು?

author-image
Veena Gangani
Updated On
ಕೆಟ್ಟ ನಿರ್ಧಾರಕ್ಕೂ ಮುನ್ನ ತಂಗಿಗೆ ಮೆಸೇಜ್.. ಗ್ರಾ.ಪಂ ಸದಸ್ಯನ ಪುತ್ರಿ ಮಾಡಿದ ಆರೋಪ ಏನು?
Advertisment
  • ವಿಕ್ಟೋರಿಯಾ ಆಸ್ಪತ್ರೆಗೆ ಸ್ಪಂದನಾ ಮೃತದೇಹ ರವಾನೆ
  • ಕಾಲೇಜಿನಲ್ಲಿದ್ದಾಗಲೇ ಪ್ರೀತಿಸಿ ಮದುವೆಯಾಗಿದ್ದ ಸ್ಪಂದನಾ
  • ಕೊನೆಯದಾಗಿ ಸ್ಪಂದನಾ ತಂಗಿಗೆ ಮೆಸೇಜ್​ ಮಾಡಿದ್ದೇನು?

ಬೆಂಗಳೂರು: ಪೋಷಕರ ವಿರೋಧದ ನಡುವೆಯೂ ಮದುವೆಯಾದ ಯುವತಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. 1 ವರ್ಷದ 5 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಸ್ಪಂದನಾ ಅನುಮಾನಾಸ್ಪದವಾಗಿ ಜೀವಬಿಟ್ಟಿದ್ದಾಳೆ. ಈ ಘಟನೆ ಹೊರವಲಯದ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ಯಶ್ ದಯಾಳ್ ವಿರುದ್ಧ ಮತ್ತೊಬ್ಬ ಹುಡುಗಿಯಿಂದ ಕೇಸ್; ಈಗ ಪೋಕ್ಸೋ ಕೇಸ್​ ದಾಖಲು

publive-image

ಪ್ರೀತಿಸಿ ಮದುವೆಯಾಗಿದ್ದ ಸ್ಪಂದನಾ..

ಮೃತ ಸ್ಪಂದನಾ ಬೃಂದಾವನ ಕಾಲೇಜಿನಲ್ಲಿ ಎಂಬಿಎ ವ್ಯಾಸಾಂಗ ಮಾಡುತ್ತಿದ್ದಳು. ಅದೇ ಸಮಯದಲ್ಲಿ ಇನ್​ಸ್ಟಾಗ್ರಾಮ್​ನಲ್ಲಿ ಅಭಿಷೇಕ್ ಎಂಬಾತನ ಪರಿಚಯ ಆಗಿತ್ತು. ಈ ಅಭಿಷೇಕ್​ ಕಾರ್ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಇದಾದ ಬಳಿಕ ಪೋಷಕರ ವಿರೋಧದ ನಡುವೆಯೂ ಸ್ಪಂದನಾ ಹಾಗೂ ಅಭಿಷೇಕ್ ರಿಜಿಸ್ಟ್ರರ್ ಮ್ಯಾರೇಜ್ ಆಗಿದ್ದರು. ಮದುವೆಯಾದ ಬಳಿಕ ಸ್ಪಂದನಾಗೇ ಅಭಿಷೇಕ್​ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಟಾರ್ಚರ್ ನೀಡುತ್ತಿದ್ದರು ಎಂದು ಮಹಿಳೆ ಪೋಷಕರು ಗಂಭೀರವಾಗಿ ಆರೋಪ ಮಾಡಿದ್ದಾರೆ.

publive-image

ಕೊನೆಯದಾಗಿ ಸ್ಪಂದನಾ ತಂಗಿಗೆ ಮೆಸೇಜ್​ ಮಾಡಿದ್ದೇನು?

ಸ್ಪಂದನಾ ಕೊನೆಯದಾಗಿ ತನ್ನ ತಂಗಿಗೆ ವಾಟ್ಸಾಪ್​ನಲ್ಲಿ ಮೆಸೇಜ್​ ಮಾಡಿದ್ದಾಳೆ. ಜುಲೈ 5ರಂದು ಸ್ಪಂದನಾ ತಂಗಿಗೆ ಏನು ಒಂದು ಮೆಸೇಜ್​ ಮಾಡಿಲ್ಲ ಅಂತ ಕೇಳಿದ್ದಾಳೆ. ಇದಾದ ಬಳಿಕ ಜುಲೈ 9 ಬುಧವಾರ ಅಮ್ಮ ಹಾಗೂ ಅಪ್ಪನ ಆಧಾರ್ ಕಾರ್ಡ್ ಕೊಡು, ನಮ್ಮ ಆಫೀಸ್​ನಲ್ಲಿ ಪಿಎಫ್​ (PF) ಅಕೌಂಟ್ ಮಾಡುತ್ತಿದ್ದಾರೆ. ಅದಕ್ಕೆ ಡೀಟೇಲ್ಸ್ ಬೇಕು ಅಂತ ಹಾಕಿದ್ದಾಳೆ. ಇದಾದ ಬಳಿಕ ತಂಗಿ ನಾನು ಕ್ಲಾಸ್​ನಲ್ಲಿ ಇದ್ದೇನೆ, ಆಮೇಲೆ ಮೆಸೇಜ್​ ಮಾಡುತ್ತೇನೆ ಅಂತ ಹಾಕಿದ್ದಾಳೆ. ಇದಕ್ಕೆ ಮನೆಗೆ ಹೋಗಿ ಜಸ್ಟ್​ ಫೋಟೋ ಕಳ್ಸು ಸಾಕು ಅಂತ ರಿಪ್ಲೈ ಕೊಟ್ಟಿದ್ದಾಳೆ. ಇದಾದ ಬಳಿಕ ನಿನ್ನೆ ಮತ್ತೆ ಮೆಸೇಜ್ ಮಾಡಿದ ಸ್ಪಂದನಾ, ನನ್ನ ಸಾವಿಗೆ ಕಾರಣ ಅಭಿ ಹಾಗೂ ಅವರ ಇಡೀ ಕುಟುಂಬ. ಜೊತೆಗೆ ವರ್ಕ್​ ಸ್ಥಳದಲ್ಲಿ ಕೆಲಸ ಮಾಡುವ ಎಲ್ಲರ ಉದ್ಯೋಗಿಗಳು ಅಂತ ಕಳುಹಿಸಿದ್ದಾಳೆ.

ಇದನ್ನೂ ಓದಿ:ಕಾರು ಡ್ರೈವರ್​​ ಮೇಲೆ MBA ವಿದ್ಯಾರ್ಥಿನಿಗೆ ಲವ್.. ಮದ್ವೆಯಾದ ಒಂದೇ ವರ್ಷದಲ್ಲಿ ಘೋರ ದುರಂತ..!

publive-image

ವಿಕ್ಟೋರಿಯಾ ಆಸ್ಪತ್ರೆಗೆ ಸ್ಪಂದನಾ ಮೃತದೇಹ ರವಾನೆ..

ನೇಣು ಬಿಗಿದ ಸ್ಥಿತಿಯಲ್ಲಿ ಮೃತ ಸ್ಪಂದನಾ ಬಾಡಿ ಇತ್ತಂತೆ. ಬಳಿಕ ಯಾರಿಗೂ ಮಾಹಿತಿ ಕೊಡದೇ ತಾವೇ ಮೃತದೇಹವನ್ನು ಇಳಿಸಿ ಆಸ್ಪತ್ರೆಗೆ ಸಾಗಿಸಿದ್ದಾರಂತೆ. ಅಲ್ಲದೇ, ಸ್ಪಂದನಾ ಮೈ ಮೇಲೆ ಗಾಯದ ಗುರುತುಗಳಿವೆ ಅನ್ನೋ ಆರೋಪ ಕೂಡ ಇದೆ. ಹೀಗಾಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಇದಾದ ಬಳಿಕ ಸ್ಪಂದನಾ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುವುದು. ಈ ಘಟನೆ ಸಂಬಂಧ ಸದ್ಯ ಸ್ಪಂದನಾ ಪತಿ ಅಭಿಷೇಕ್​ನನ್ನು ಮಾದನಾಯಕನಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment