/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.
ಮೇಷ ರಾಶಿ
- ದಿನಪೂರ್ತಿ ಬಿಡುವಿಲ್ಲದೆ ನಿಮ್ಮ ಕೆಲಸಗಳಲ್ಲಿ ನಿರತರಾಗುವ ಸಾಧ್ಯತೆ ಹೆಚ್ಚು
- ಹಿರಿಯರ ಆಶೀರ್ವಾದ, ಮಾರ್ಗದರ್ಶನ ಹಾಗೂ ಚಿಕ್ಕಮಕ್ಕಳ ಪ್ರೀತಿ ನಿಮಗೆ ಸಂತೋಷ ನೀಡುತ್ತದೆ
- ನಿಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ಸ್ನೇಹಿತರು, ಕುಟುಂಬದವರು ನಿಮ್ಮನ್ನು ಸಂತೋಷ ಪಡಿಸುತ್ತಾರೆ
- ನಿಮ್ಮ ವೃತ್ತಿಯಲ್ಲಿ ಕಗ್ಗಂಟಾದ ಕೆಲಸಗಳು ಇಂದು ಪೂರ್ಣಗೊಳ್ಳುವ ಸಾಧ್ಯತೆ
- ದೂರದ ಪ್ರದೇಶಗಳಿಗೆ ಪ್ರಯಾಣ ಮಾಡಬಹುದು ಶುಭವಿದೆ
- ಪಕ್ಷಿಗಳಿಗೆ ಆಹಾರ ನೀರು ಕೊಡಿ
ವೃಷಭ
- ಇಂದು ನಿಮ್ಮ ಮನಸ್ಸು ಶಾಂತ ಸ್ಥಿತಿಯಲ್ಲಿರಲಿ
- ನಿಮ್ಮ ಕೋಪ ನಿಯಂತ್ರಣದಲ್ಲಿ ಇರಲಿ
- ಈ ದಿನ ಕೆಟ್ಟ ಭಾಷೆ ಬಳಸಬೇಡಿ
- ನಿಮ್ಮ ಕುಟುಂಬಕ್ಕೆ ನಿಮ್ಮಿಂದ ಸೌಖ್ಯ, ಆನಂದ ಸಿಗುವ ದಿನ
- ಇಂದು ಯಾರ ಮನಸ್ಸಿಗೆ ನೋವಾಗದಂತೆ ವರ್ತಿಸಬೇಡಿ
- ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಶುಭದಿನ
- ವಿಕಲಚೇತನರಿಗೆ ಹಣ್ಣನ್ನು ನೀಡಿ ಶುಭವಾಗುತ್ತದೆ
ಮಿಥುನ
- ಮನೆಯ ದಿನನಿತ್ಯದ ಖರ್ಚಿಗೆ ತೊಂದರೆ ಆಗಬಹುದು ಜಾಗ್ರತೆ ಇರಲಿ
- ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಶುಭದಿನ
- ವಿವಾಹ ಅಪೇಕ್ಷಿಗಳ ವೈವಾಹಿಕ ವಿಚಾರದಲ್ಲಿ ಸಹಾಯಕ್ಕೆ ಹೋದರೆ ಅವಮಾನ ಸಾಧ್ಯತೆ
- ಇಂದು ಸಂಘ-ಸಂಸ್ಥೆಗಳನ್ನು ಆರಂಭಿಸಲು ಶುಭದಿನ
- ಸಂಬಂಧಿಕರ ಜೊತೆ ದೊಡ್ಡ ಕಾರ್ಯಗಳ ಬಗ್ಗೆ ಚರ್ಚೆ ಸಾಧ್ಯತೆ
- ಮಾತೃಭಕ್ತ ಪರಶುರಾಮನನ್ನು ಪ್ರಾರ್ಥನೆ ಮಾಡಿ
ಕಟಕ
- ನಿಮ್ಮ ಕುಟುಂಬದ ಜೊತೆ ಬಹಳ ಮೌಲ್ಯಯುತ ಸಮಯ ಕಳೆಯುವ ಸಾಧ್ಯತೆ
- ಈ ದಿನ ಒಳ್ಳೆಯ ವಿಚಾರಗಳಿಂದ ಪ್ರಾರಂಭವಾಗುತ್ತದೆ
- ಯಾವುದೇ ಪರಿಸ್ಥಿತಿಯಲ್ಲಿ ನೀವು ಉದ್ವಿಗ್ನಕ್ಕೆ ಒಳಗಾಗದಿದ್ದರೆ ಒಳ್ಳೆಯದು
- ಇಂದು ಆರ್ಥಿಕವಾಗಿಯೂ ಬಹಳ ಅನುಕೂಲಕರವಾಗಿದೆ
- ಉದ್ವಿಗ್ನ ಪರಿಸ್ಥಿತಿ ಏರ್ಪಾಟ್ಟಾಗ ಅದನ್ನ ನಿಯಂತ್ರಿಸಲು ಸಾಧ್ಯವಾಗದೆ ಇರಬಹುದು
- ಇಂದು ಹಣದ ವಿಚಾರದಲ್ಲಿ ತುಂಬಾ ಎಚ್ಚರಿಕೆಯಿರಲಿ
- ಧನಲಕ್ಷ್ಮಿ ಪ್ರಾರ್ಥನೆ ಮಾಡಿ
ಸಿಂಹ
- ಇಂದು ಯಾವುದೇ ಒಳ್ಳೆಯ ಕೆಲಸಕ್ಕೆ ಕೈ ಹಾಕಿದ್ರೂ ಶುಭವಾಗುತ್ತದೆ
- ನಿಮ್ಮ ಪ್ರತಿಭೆಗೆ ಗೌರವ, ಪುರಸ್ಕಾರ ದೊರೆಯುವ ದಿನ
- ನಿಮ್ಮ ಕೆಲಸ-ಕಾರ್ಯಗಳ ಗುಣಮಟ್ಟ ಹೆಚ್ಚಾಗುತ್ತದೆ
- ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಪ್ರಗತಿ ಕಾಣುವ ದಿನ
- ಸ್ವಾರ್ಥಿಗಳ ಮಾತಿಗೆ ಮರುಳಾಗಿ ಹಣವನ್ನ ಕಳೆದುಕೊಳ್ಳುವ ಸಾಧ್ಯತೆ ಇದೆ
- ವೀರಾಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ
ಕನ್ಯಾ
- ಇಂದು ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ
- ಹಿಂದೆ ಸೇವಿಸಿದ ಆಹಾರ ವಿಷಾಹಾರವಾಗಿ ಪರಿವರ್ತನೆಯಾಗುವ ಸಾಧ್ಯತೆ
- ಆದರೆ ಮನೆಮದ್ದನ್ನು ಉಪಯೋಗಿಸಿ ಗುಣಮುಖರಾಗಬಹುದು
- ಈ ದಿನ ಆಗತ್ಯವಾಗಿ ವಿಶ್ರಾಂತಿ ಮಾಡಿದರೆ ಒಳ್ಳೆಯದು
- ಅಗತ್ಯ ಬಿದ್ದರೆ ಮಾತ್ರ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ
- ಮೂಕಾಂಬಿಕೆಯನ್ನ ಧ್ಯಾನ ಮಾಡಿ
ತುಲಾ
- ಕುಟುಂಬದವರು ತೆಗೆದುಕೊಂಡ ನಿರ್ಧಾರ, ಮನೆಯ ವಾತಾವರಣವನ್ನ ಕಲುಷಿತ ಮಾಡಬಹುದು
- ಮಾತೆಯರು ತಮ್ಮ ಆಸೆ-ಆಕಾಂಕ್ಷೆಗಳನ್ನ ಇಂದು ಮನೆಯಲ್ಲಿ ವ್ಯಕ್ತಪಡಿಸದಿದ್ದರೆ ಉತ್ತಮ
- ಯಾವುದೇ ಪರಿಸ್ಥಿತಿಯನ್ನ ವಿಕೋಪಕ್ಕೆ ಹೋಗಲು ಅವಕಾಶ ಕೊಡಬೇಡಿ
- ಮನೆಯವರು ತೆಗೆದುಕೊಂಡ ನಿರ್ಧಾರದ ಬಗ್ಗೆ ಹೆಚ್ಚು ಗಮನವಿರಲಿ
- ಆ ಸಮಯದಲ್ಲಿ ಕಪ್ಪು ಬಟ್ಟೆ ಧರಿಸಿದರೆ ಉತ್ತಮ
- ಕೆಂಪು ಹೂವಿನಿಂದ ಕಾಳಿಕಾದೇವಿಯನ್ನ ಆರ್ಚನೆ ಮಾಡಿ
ವೃಶ್ಚಿಕ
- ಲ್ಯಾಪ್ಟಾಪ್, ಮೊಬೈಲ್ ಬಳಕೆಯನ್ನ ಅಗತ್ಯವಿದ್ದಷ್ಟು ಬಳಸಿ
- ಅತಿ ಮಖ್ಯವಾದ ಕೆಲಸ ನಿಮ್ಮ ಬೇಜವಾಬ್ದಾರಿಯಿಂದ ಕೆಡುವ ಸಾಧ್ಯತೆ ಇದೆ
- ನಿಮ್ಮ ಕೋಪದ ಮೇಲೆ ಹಿಡಿತ ಇರಲಿ, ನಿಮ್ಮ ತಾಳ್ಮೆ ಕಳೆದುಕೊಳ್ಳಬೇಡಿ
- ಹಿಂದೆ ಖರೀದಿಸಿದ ವಸ್ತುವಿನಿಂದ ನಿಷ್ಠೂರಕ್ಕೆ ಒಳಗಾಗುವ ಸಾಧ್ಯತೆ
- ಶಿವಲಿಂಗಕ್ಕೆ ತುಂಬೆ ಹೂವಿನಿಂದ ಅರ್ಚನೆ ಮಾಡಿ
ಧನಸ್ಸು
- ನಿಮ್ಮ ಹಲವು ದಿನದ ಕನಸು ಇಂದು ನೆರವೇರುವ ಸಾಧ್ಯತೆ
- ಇಂಜಿನಿಯರಿಂಗ್ ಕ್ಷೇತ್ರದಲ್ಲಿರುವವರಿಗೆ ಯಶಸ್ಸು, ಗೌರವ ಸಂಪಾದನೆ ಮಾಡುವ ದಿನ
- ಇಂದು ಕಣ್ಣು ಮತ್ತು ತಲೆನೋವಿನ ಸಮಸ್ಯೆ ಅಧಿಕವಾಗಿ ಕಾಡಬಹುದು ಎಚ್ಚರಿಕೆ ಇರಲಿ
- ತಪ್ಪು ಅರ್ಥವಾದ ನಂತರ ಪಶ್ಚಾತ್ತಾಪ ಪಡುತ್ತೀರಿ
- ವಿನಾಕಾರಣ ಆರೋಗ್ಯ ಹಾಳಾಗಬಹುದು, ಜಾಗ್ರತೆವಹಿಸಿ
- ಅಶ್ವಿನಿ ದೇವತೆಗಳನ್ನು ಸ್ಮರಿಸಿ
ಮಕರ
- ನಿಮ್ಮ ಮನೆಯ ವಾತಾವರಣ ಬಹಳ ಚೆನ್ನಾಗಿರುತ್ತದೆ
- ಪ್ರಾಣಿಯಿಂದ ಗಾಯಗೊಳ್ಳುವ ಸೂಚನೆಯಿದೆ ತುಂಬಾ ಎಚ್ಚರಿಕೆ ಇರಲಿ
- ಅಗೌರವ, ಹಣದ ನಷ್ಟ ಕಾಡುವ ಸಾಧ್ಯತೆ, ನಿಮ್ಮ ತಾಳ್ಮೆ ಪರೀಕ್ಷೆಗೆ ಒಳಗಾಗುವ ಸಾಧ್ಯತೆ
- ಮನೆಯಿಂದ ಹೊರಡುವಾಗ ಬಾಯಿ ಸಿಹಿ ಮಾಡಿಕೊಂಡು ಹೊರಡಿ
- ಕುಲದೇವತಾ ಪ್ರಾರ್ಥನೆ ಮಾಡಿ
ಕುಂಭ
- ನಿಮ್ಮ ಸ್ವಭಾವವನ್ನು ಸ್ವಲ್ಪ ಬದಲಾಯಿಸಿಕೊಂಡರೆ ಒಳ್ಳೆಯದು
- ನಿಮ್ಮ ಕಾರ್ಯಕ್ಷೇತ್ರಗಳಲ್ಲಿ ಸ್ವಲ್ಪ ಸುಧಾರಣೆಗಳನ್ನ ಮಾಡಿಕೊಂಡರೆ ಒಳ್ಳೆಯದು
- ವಿದ್ಯಾರ್ಥಿಗಳು ಅತಿಯಾದ ಆತ್ಮವಿಶ್ವಾಸದಿಂದ ತಪ್ಪನ್ನ ಸರಿ ಎಂದು ವಾದ ಮಾಡಬಹುದು
- ವಾಹನ ಹರಾಜಿನಲ್ಲಿ ಭಾಗವಹಿಸಬೇಡಿ ತೊಂದರೆಯಿದೆ
- ಅತಿಯಾದ ಆತ್ಮವಿಶ್ವಾಸ ಯಾವ ಕಾರಣಕ್ಕೂ ಬೇಡ
- ಧ್ಯಾನಾವಸ್ಥೆಯಲ್ಲಿರುವ ಗಾಯತ್ರಿದೇವಿಯನ್ನು ಪ್ರಾರ್ಥಿಸಿ
ಮೀನ
- ನಿಮ್ಮ ಸ್ವಭಾವ, ನಡತೆಗಳಿಂದ ಸ್ನೇಹಿತರು, ಬಂಧುಗಳು ಕೋಪಗೊಳ್ಳಬಹುದು
- ಮಕ್ಕಳು ನಿಮ್ಮ ಬಗ್ಗೆ ಮಾನಸಿಕವಾಗಿ ಬೇಸತ್ತು ದೂರವಾಗಬಹುದು ಎಚ್ಚರಿಕೆ ಇರಲಿ
- ಸರ್ಕಾರದಿಂದ ಹರಾಜಾಗುವ ಭೂಮಿ ಮತ್ತು ವಸ್ತುಗಳ ಹರಾಜಿನಲ್ಲಿ ಭಾಗವಹಿಸಿದರೆ ಶುಭವಿದೆ
- ಇಂದು ರಾಜಕಾರಣಿಗಳಿಗೆ ಬಹಳ ಉತ್ತಮ ದಿನ
- ವಿನಾಕಾರಣ ಬೇರೆ ರಾಜಕಾರಣಿಗಳೊಂದಿಗೆ ವಾದ-ವಿವಾದ ಬೇಡ, ತೊಂದರೆ ಸಾಧ್ಯತೆ
- ಕಾಲಭೈರವನನ್ನು ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ