25 ಲಕ್ಷ, ಪಾಕಿಸ್ತಾನದಿಂದ ಬರಲಿದ್ವು ಎಕೆ 47, ಎಕೆ92! ಸಲ್ಮಾನ್ ಮುಗಿಸಲು ಏನೆಲ್ಲಾ ಪ್ಲಾನ್ ನಡೆದಿತ್ತು ಗೊತ್ತಾ?

author-image
Gopal Kulkarni
Updated On
25 ಲಕ್ಷ, ಪಾಕಿಸ್ತಾನದಿಂದ ಬರಲಿದ್ವು ಎಕೆ 47, ಎಕೆ92! ಸಲ್ಮಾನ್ ಮುಗಿಸಲು ಏನೆಲ್ಲಾ ಪ್ಲಾನ್ ನಡೆದಿತ್ತು ಗೊತ್ತಾ?
Advertisment
  • ಬಾಲಿವುಡ್ ನಟ ಸಲ್ಮಾನ್ ಖಾನ್​ ಹತ್ಯೆಗೆ ನಡೆದಿತ್ತು ಘನಘೋರ ತಯಾರಿ
  • ಬೆಚ್ಚಿ ಬೀಳಿಸುತ್ತೆ ಪೊಲೀಸರು ಚಾರ್ಜ್​​​ಶೀಟ್​ನಲ್ಲಿ ಉಲ್ಲೇಖಿಸಿರುವ ಮಾಹಿತಿಗಳು
  • ಪಾಕಿಸ್ತಾನದಿಂದ ಬರಲಿದ್ದವು ಅತ್ಯಾಧುನಿಕ ಶಸ್ತ್ರಾಸ್ತ್ರ, ಡೀಲ್ ಕುದುರಿಸಿದ್ದು ಯಾರು?

ಪನ್ವೇಲ್ ಬಳಿ ಇರುವ ಸಲ್ಮಾನ್ ಖಾನ್ ಫಾರ್ಮ್​ಹೌಸ್ ಬಳಿಯೇ ಸಲ್ಮಾನ್ ಖಾನ್ ಹತ್ಯೆಗೆ ಸ್ಕೇಚ್ ಹಾಕಿತ್ತು ಲಾರೆನ್ಸ್ ಬಿಷ್ಣೋಯಿ ಪಡೆ. ಅದಕ್ಕಾಗಿ ಬರೋಬ್ಬರಿ 25 ಲಕ್ಷ ರೂಪಾಯಿಯ ಕಾಂಟ್ರ್ಯಾಕ್ಟ್​ಗೆ ನೀಡಲಾಗಿತ್ತು ಎಂದು ಮುಂಬೈ ಪೊಲೀಸರು ತಮ್ಮ ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಕಳೆದ ಜೂನ್​ನಲ್ಲಿಯೇ ಇಂತಹದೊಂದು ಬರ್ಬರ ಹತ್ಯೆಗೆ ಬಿಷ್ಣೋಯಿ ಗ್ಯಾಂಗ್ ಸ್ಕೆಚ್​ ಹಾಕಿ ಕಾದುಕೊಂಡು ಕುಳಿತಿತ್ತು. ಅದನ್ನು ವಿಫಲಗೊಳಿಸಿದ್ದ ಮುಂಬೈ ಪೊಲೀಸರು ಸದ್ಯ ಚಾರ್ಜ್​ಶೀಟ್ ಸಿದ್ಧಪಡಿಸಿದ್ದು, ಅದರಲ್ಲಿ ಐವರು ಆರೋಪಿಗಳ ಹೆಸರು ಉಲ್ಲೇಖಿಸಲಾಗಿದೆ. ಆರೋಪಿಗಳು ಸಲ್ಮಾನ್ ಹತ್ಯೆಗೆ 25 ಲಕ್ಷಗೆ ರೂಪಾಯಿ ಗುಜರಾತ್​ನ ಸಾಬರಮತಿ ಜೈಲಿನಲ್ಲಿರೋ ಗ್ಯಾಂಗ್​ಸ್ಟಾರ್ ಬಿಷ್ಣೋಯಿಯಿಂದ ಕಾಂಟ್ರ್ಯಾಕ್ಟ್ ಪಡೆದಿದ್ದರು ಎಂದು ಚಾರ್ಜ್​ಶೀಟ್​ನಲ್ಲಿ ನಮೂದಿಸಲಾಗಿದೆ.

ಆರೋಪಿಗಳು ಸಲ್ಮಾನ್ ಹತ್ಯೆಗೆಂದು ಪಾಕಿಸ್ತಾನದಿಂದ ಅತ್ಯಾಧುನಿ ಗನ್​ಗಳಾದ ಎಕೆ47, ಎಕೆ92 ಹಾಗೂ ಎಂ 16 ರೈಫಲ್​ಗಳನ್ನು ಪಾಕಿಸ್ತಾನದಿಂದ ಖರೀದಿಸಲು ಪ್ಲಾನ್ ಕೂಡ ನಡೆಸಿತ್ತು ಎಂಬ ಬಗ್ಗೆಯೂ ಪೊಲೀಸರಿಗೆ ಮಾಹಿತಿ ದೊರಕಿದೆ. ಇದರ ಜೊತೆಗೆ ಪಂಜಾಬಿ ಸಿಂಗರ್ ಸಿಧು ಮೂಸೆವಾಲರ ಹತ್ಯೆ ವೇಳೆ ಬಳಸಿದ್ದ ಟರ್ಕಿಶ್ ನಿರ್ಮಿತ ಝೀಗಾನ್ ಶಸ್ತ್ರವನ್ನೂ ಕೂಡ ಖರೀದಿಸಲು ಈ ಗ್ಯಾಂಗ್ ಚಿಂತನೆ ನಡೆಸಿತ್ತು ಎಂದು ತಿಳಿದು ಬಂದಿದೆ. ಆರೋಪಿಗಳು 18 ವಯಸ್ಸಿನೊಳಗಿನ ಮಕ್ಕಳನ್ನೇ ಸಲ್ಮಾನ್​ ಹತ್ಯೆಗಾಗಿ ನೇಮಿಸಿದ್ದರು ಎಂದು ಕೂಡ ತಿಳಿದು ಬಂದಿದೆ.

ಇದನ್ನೂ ಓದಿ: VIDEO: ಜೋಗಿ ಅಮ್ಮನನ್ನೂ ಮೀರಿಸುವ ಹಾರ್ಟ್​​ ಟಚ್ಚಿಂಗ್ ಸ್ಟೋರಿ ಇದು; ಕರುಳು ಚುರ್ ಅನ್ನುತ್ತೆ!

ಸುಮಾರು 60 ರಿಂದ 70 ಜನರು ಸಲ್ಮಾನ್​ ಖಾನ್ ಅವರ ನಿತ್ಯದ ಓಡಾಟವನ್ನು ಗಮನಿಸಲೆಂದೇ ನೇಮಿಸಲಾಗಿತ್ತಂತೆ. ಪ್ರಮುಖವಾಗಿ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ನಿವಾಸ, ಪನ್ವೇಲ್​ನಲ್ಲಿರುವ ಅವರ ಫಾರ್ಮ್​ಹೌಸ್ ಹಾಗೂ ಗೊರೆಗಾಂವ್​ನಲ್ಲಿರುವ ಫಿಲ್ಮ್​ಸಿಟಿಯಲ್ಲಿ ಸಲ್ಮಾನ್ ಖಾನ್ ಓಡಾಟದ ಮೇಲೆ ನಿಗಾಯಿರಿಸಲು ಜನರನ್ನು ನೇಮಿಸಲಾಗಿತ್ತು ಎಂದು ಆರೋಪಿಗಳು ತಪ್ಪೊಪ್ಪಿಗೆಯಲ್ಲಿ ಹೇಳಿಕೆ ನೀಡಿದ್ದಾರೆ. ಸಲ್ಮಾನ್ ಖಾನ್ ಹತ್ಯೆಗಾಗಿ ಈ ಒಂದು ಯೋಜನೆ ಕಳೆದ ವರ್ಷ ಆಗಸ್ಟ್ 2023ರಿಂದ ಏಪ್ರಿಲ್​ 2024ರವರೆಗೆ ನಡೆದಿತ್ತಂತೆ

ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ವ್ಯಕ್ತಿಗೆ ಜಾಮೀನು; ಹೈಕೋರ್ಟ್ ವಿಧಿಸಿದ ಷರತ್ತುಗಳೇನು ಗೊತ್ತಾ?

ಪೊಲೀಸರ ತನಿಖೆಯ ಪ್ರಕಾರ ಹರಿಯಾಣದ ಪಾನಿಪತ್​ನಲ್ಲಿ ಬಂಧಿಸಲಾಗಿದ್ದ ಸುಖ್ಖಾ ಹಾಗೂ ಅಶೋಕ್​ ಕಶ್ಯಪ್ ಅಲಿಯಾಸ್ ಎಕೆ ಯನ್ನು ಶೂಟರ್​ಗಳೆಂದು ನಿಯೋಜಿಸಲಾಗಿತ್ತಂತೆ. ಸುಖ್ಖಾ ಪಾಕಿಸ್ತಾನ ಮೂಲದ ಡೊಗಾರ್ ಜೊತೆ ವಿಡಿಯೋ ಕಾಲ್ ಮಾಡಿ ಶಸ್ತ್ರಾಸ್ತ್ರಗಳ ಖರೀದಿಗೆ ಡೀಲ್ ಕುದುರಿಸಿದ್ದನಂತೆ. ಎಲ್ಲಾ ಮಾತುಕತೆಗಳು ಮುಗಿದ ನಂತರ ಡೊಗಾರ್ ಶಸ್ತ್ರಾಸ್ತ್ರಗಳನ್ನು ಪೂರೈಸಲು ರೆಡಿಯಾಗಿದ್ದಾಗ ಡೀಲ್​ನ ಶೇಕಡಾ 50 ರಷ್ಟು ಹಣವನ್ನು ನೀಡಲು ಕೂಡ ಸುಖ್ಖಾ ಒಪ್ಪಿಕೊಂಡಿಂದನಂತೆ. ಈ ಎಲ್ಲಾ ಶೂಟರ್​ಗಳು ಕೆನಡಾದ ಗ್ಯಾಂಗ್​ಸ್ಟಾರ್ ಗೋಲ್ಡೈ ಬ್ರಾರ್ ಹಾಗೂ ಲಾರೆನ್ಸ್ ಬಿಷ್ಣೋಯಿ ಸಹೋದರ ಅನ್ಮೋಲ್ ಬಿಷ್ಣೋಯಿ ಬರುವಿಕೆಗಾಗಿ ಕಾಯುತ್ತಿದ್ದಂತೆ.

ಇಷ್ಟು ಮಾತ್ರವಲ್ಲ, ಶೂಟ್ ಮಾಡುವ ಕೆಲಸ ಮುಗಿದ ಕೂಡಲೇ ಎಲ್ಲರೂ ಕನ್ಯಾಕುಮಾರಿಯಲ್ಲಿ ಸೇರಿ ಅಲ್ಲಿಂದ ಬೋಟ್​ ಮೂಲಕ ಶ್ರೀಲಂಕಾಗೆ ತಲುಪಿ ಭಾರತೀಯ ತನಿಖಾ ಸಂಸ್ಥೆಗಳಿಂದ ತಪ್ಪಿಸಿಕೊಳ್ಳುವ ಹುನ್ನಾರ ನಡೆದಿತ್ತು. ಈ ಎಲ್ಲಾ ವಿಚಾರಗಳನ್ನು ಸದ್ಯ ಮುಂಬೈ ಪೊಲೀಸರು ಚಾರ್ಜ್​​​ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment