ತಿರುಪತಿ ದುರಂತ: ಮೃತರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಘೋಷಣೆ

author-image
Ganesh Nachikethu
Updated On
VIDEO: ತಿರುಪತಿಯಲ್ಲಿ ಭಕ್ತರ ನೂಕುನುಗ್ಗಲು.. ಕಾಲ್ತುಳಿತದಲ್ಲಿ ಭಾರೀ ದುರಂತ!
Advertisment
  • ವೆಂಕಟೇಶ್ವರನ ಸನ್ನಿಧಿಯಲ್ಲಿ ಘೋರ ದುರಂತ!
  • ವೈಕುಂಠ ದ್ವಾರ ದರ್ಶನಕ್ಕೆ ಹಂಬಲಿಸಿದವರ ಸಾವು
  • ಟೋಕನ್ ಪಡೆಯಲು ಮುಗಿಬಿದ್ದಾಗ ಕಾಲ್ತುಳಿತ

ತಿರುಪತಿ: ಕಾಪಾಡು ತಿಮ್ಮಪ್ಪ ಅಂತ ಹೋದವರು ವೆಂಕಟೇಶ್ವರನ ಪಾದ ಸೇರಿದ್ದಾರೆ. ಕಾಲ್ತುಳಿದಲ್ಲಿ ಸಾವನ್ನಪ್ಪಿದವರ ಕುಟುಂಬಸ್ಥರ ಕಣ್ಣೀರಿನ ಕೋಡಿ ಒಡೆದಿದೆ. ಇದ್ರ ಮಧ್ಯೆ ಆಂಧ್ರಪ್ರದೇಶ ಸರ್ಕಾರ ಮೃತರ ಕುಟುಂಬಸ್ಥರ ನೆರವಿಗೆ ಧಾವಿಸಿದೆ. ಗಾಯಾಳುಗಳ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದೆ. ವಿಪಕ್ಷಗಳ ನಾಯಕರು ಕೂಡಾ ಆಸ್ಪತ್ರೆಗೆ ಭೇಟಿ ನೀಡಿ ನೊಂದವರ ಕಣ್ಣೀರು ಒರೆಸಿದೆ.

ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆಯಬಾರದ ಸಂಗತಿ ನಡೆದು ಹೋಗಿದೆ. ಗೋವಿಂದನ ಕಾಣಬೇಕಿದ್ದ ಕಣ್ಣುಗಳು ಚಿರನಿದ್ರೆಗೆ ಜಾರಿದೆ. 6 ಮಂದಿ ತಿಮ್ಮಪ್ಪನ ಭಕ್ತರ ಸಾವಿನಿಂದ ವೆಂಕಟೇಶ್ವರನ ಸನ್ನಿಧಿಯಲ್ಲಿ ಸೂತಕದ ಛಾಯೆ ಆವರಿಸಿದೆ. ಆಸ್ಪತ್ರೆಯಲ್ಲಿ ಗಾಯಾಳುಗಳುಗಳ ನರಳಾಟ ಹೇಳತೀರದಾಗಿದೆ. ವೈಕುಂಠ ಏಕಾದಶಿ ಅಂಗವಾಗಿ ಕರ್ನಾಟಕದಿಂದಲೂ ಸಾವಿರಾರು ಭಕ್ತರು ತಿರುಪತಿಗೆ ತೆರಳಿದ್ದರು. ಆದ್ರೆ ಗಾಯಗೊಂಡವರ ಪೈಕಿಯಾಗಲಿ ಅಥವಾ ಮೃತರ ಪೈಕಿ ಕರ್ನಾಟಕದವರು ಯಾರೂ ಇಲ್ಲ ಅನ್ನೋದು ದೃಢಪಟ್ಟಿದೆ.

ಗಾಯಾಳುಗಳಿಗೆ ಚಂದ್ರಬಾಬು ನಾಯ್ಡು ಸಾಂತ್ವನ!

ಗೋವಿಂದನ ಆಸ್ಥಾನದಲ್ಲೇ ಭಕ್ತರು ವೈಕುಂಠವಾಸಕ್ಕೆ ತೆರಳಿದ್ದಾರೆ. ಇದು ಆಡಳಿತ ಪಕ್ಷಕ್ಕೂ ಆಘಾತ ತಂದಿದೆ. ಕಾಲ್ತುಳಿತ ದುರಂತದ ವಿಷಯ ತಿಳಿಯುತ್ತಿದ್ದಂತೆ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ತಿರುಪತಿಗೆ ಭೇಟಿ ನೀಡಿದ್ರು. ಕಾಲ್ತುಳಿತ ದುರಂತ ನಡೆದ ಸ್ಥಳ ಪರಿಶೀಲನೆ ನಡೆಸಿದ್ರು. ಬಳಿಕ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರೋ ರುಯಾ ಮತ್ತು ಸ್ವಿಮ್ಸುಲ್ ಆಸ್ಪತ್ರೆಗಳಿಗೆ ಭೇಟಿ ನೀಡಿದ್ರು. ಕಾಲ್ತುಳಿತದಲ್ಲಿ ಗಾಯಗೊಂಡಿರುವವರ ಆರೋಗ್ಯ ವಿಚಾರಿಸಿದ್ರ. ಇನ್ನೂ ಮೃತರ ಕುಟುಂಬಸ್ಥರಿಗೆ ನಾಯ್ಡು ಸಾಂತ್ವನ ಹೇಳಿದ್ರು. ಸಿಎಂಗೆ ಡಿಸಿಎಂ ಪವನ್ ಕಲ್ಯಾಣ್ ಮತ್ತು ಸಚಿವ ನಾ.ರಾ ಲೋಕೇಶ್ ಸಾಥ್ ನೀಡಿದ್ರು.

ಮೃತರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಣೆ

ಗೃಹ ಸಚಿವೆ ವಂಗಲಪುಡಿ ಅನಿತಾ, ಆಂಧ್ರಪ್ರದೇಶದ ಸಚಿವರಾದ ಆನಂ ರಾಮ ನಾರಾಯಣ್, ನಿಮ್ಮಲ ರಾಮ ನಾಯ್ಡು ಕೂಡಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ರು. ಇದೇ ವೇಳೆ ಆಂದ್ರಪ್ರದೇಶದ ಗೃಹ ಸಚಿವೆ ಅನಿತಾ, ತಿರುಪತಿ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ರು. ಇನ್ನೂ ಟಿಟಿಡಿ ಕೂಡಾ ಮೃತರ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಆದ್ರೆ, ಒಂದು ಕೋಟಿ ಪರಿಹಾರ ನೀಡಬೇಕು ಅಂತ ತಿಮ್ಮಪ್ಪನ ಭಕ್ತರು ಆಗ್ರಹಿಸಿದ್ದಾರೆ.

ಇನ್ನೂ ಕಾಲ್ತುಳಿತ ಪ್ರಕರಣದಲ್ಲಿ 6 ಮಂದಿ ಸಾವನ್ನಪ್ಪಿದ್ರೆ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಇದ್ರ ಮಧ್ಯೆ ಕಾಲ್ತುಳಿತ ಸಂಭವಿಸಿದ್ಹೇಗೆ? ಅಸಲಿ ಕಾರಣವೇನು ಅಂತ ಟಿಟಿಡಿ ಸದಸ್ಯ ನರೇಶ್ ಕುಮಾರ್ ವಿವರಿಸಿದ್ದಾರೆ.

ತಿಮ್ಮಪ್ಪನ ದರ್ಶನಕ್ಕೆ ಹೋಗಲು ಕಾತುರದಿಂದ ಕಾಯ್ತಿದ್ದ ಕಣ್ಣುಗಳು ಚಿರನಿದ್ರೆಗೆ ಜಾರಿವೆ. ಗಾಯಗೊಂಡವರು ಆಸ್ಪತ್ರೆಯಲ್ಲಿ ನರಳುತ್ತಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೆಲ್ಲದರ ಮಧ್ಯೆ ದೇಶದ ಧಾರ್ಮಿಕ ಕ್ಷೇತ್ರಗಳಲ್ಲಿ ಆಗಾಗ ಕಾಲ್ತುಳಿತ, ನೂಕು ನುಗ್ಗಲು ಉಂಟಾಗುತ್ತಲೇ ಇದೆ. ಇದಕ್ಕೆಲ್ಲಾ ಸರ್ಕಾರವಾಗಲೀ? ಸಂಬಂಧಪಟ್ಟ ಆಡಳಿತ ಮಂಡಳಿಯಾಗಲಿ ಇನ್ನೊಮ್ಮೆ ಈ ರೀತಿಯ ದುರಂತ ಸಂಭವಿಸದಂತೆ ಸೂಕ್ತ ಕ್ರಮಕೈಗೊಳ್ಳಬೇಕಿದೆ.

ಇದನ್ನೂ ಓದಿ:‘ಗಂಭೀರ್​​ ಒಬ್ಬ ಮೋಸಗಾರ’- ಮುಖ್ಯ ಕೋಚ್​​ ವಿರುದ್ಧ ಸ್ಟಾರ್​ ಕ್ರಿಕೆಟರ್​​ ಆಕ್ರೋಶ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment