/newsfirstlive-kannada/media/post_attachments/wp-content/uploads/2024/07/kerala17.jpg)
ಪ್ರಕೃತಿ ಮುನಿದರೆ ಎಲ್ಲವೂ ಶೂನ್ಯವಾಗಿ ಬಿಡುತ್ತೆ. ಕೇರಳದ ವಯನಾಡಿನಲ್ಲಿ ಮಧ್ಯರಾತ್ರಿ ಸಂಭವಿಸಿದ ಭೂಕುಸಿತದ ದುರಂತದಲ್ಲಿ ಮೃತರ ಸಂಖ್ಯೆ 172ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:ಜೀವ ಉಳಿಸಿದ ಆ ಮೆಸೇಜ್! ವಯನಾಡು ದುರಂತದಲ್ಲಿ ಸಾವನ್ನೇ ಗೆದ್ದು ಬಂದ ಬೆಂಗಳೂರು ಕಾರು ಚಾಲಕ..
200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇದರ ಮಧ್ಯೆ ಕೇರಳದ ಭೂಕುಸಿತದಲ್ಲಿ ಒಂದೇ ಕುಟುಂಬದ 25 ಮಂದಿ ಕಣ್ಮರೆಯಾಗಿದ್ದಾರೆ. ಈ ಬಗ್ಗೆ ನ್ಯೂಸ್ ಫಸ್ಟ್‌ಗೆ ಕೇರಳ ಮೂಲದ ನಿವಾಸಿ ಸುಲ್ಫೀಕರ್ ಅಲಿ ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ ಅವರು, ಆ ದಿನ ರಾತ್ರಿ ನಮ್ಮ ಕುಟುಂಬ 40 ಮಂದಿ ಇದ್ದೆವು. ರಾತ್ರಿ ಜೋರು ಮಳೆ ಬಿದ್ದ ಹಿನ್ನೆಲೆ ಎಲ್ಲರೂ ನಮ್ಮ ಮನೆಗೆ ಬಂದರು. ನನ್ನ ತಮ್ಮ, ಅಣ್ಣನ ಕುಟುಂಬದ ಸದಸ್ಯರು ಅವರ ಮನೆಯಲ್ಲಿಯೇ ಇದ್ದರು. ನಾವು ನಮ್ಮ ಮನೆಗೆ ಬಂದವರನ್ನೆಲ್ಲ ಕರೆದುಕೊಂಡು ಬಂದೆ. ಬೆಳಗ್ಗೆ ಎದ್ದು ಹೋಗಿ ನೋಡಿದರೆ ಮನೆಯೂ ಇಲ್ಲ, ಏನೂ ಇಲ್ಲ. ಮನೆ ಇದ್ದ ಜಾಗದಲ್ಲಿ ನದಿ ಹರಿಯುತ್ತಿತ್ತು. 15 ಅಡಿ ಇದ್ದ ನದಿ, ಈಗ 250 ಅಡಿ ಅಗಲವಾಗಿ ಆಳವಾಗಿ ಹರಿತಿದೆ. ಆ ನದಿಯಲ್ಲೇ ನನ್ನ ಕುಟುಂಬದವರು ಕೊಚ್ಚಿ ಹೋಗಿದ್ದಾರೆ. ಇಬ್ಬರ ಮೃತದೇಹ ಸಿಕ್ಕಿದೆ. ಉಳಿದವರದ್ದು ಪತ್ತೆ ಕಾರ್ಯ ನಡೆದಿದೆ ಅಂತ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ