/newsfirstlive-kannada/media/post_attachments/wp-content/uploads/2024/11/TIGERS-MISSING.jpg)
ಹುಲಿ ನಮ್ಮ ರಾಷ್ಟ್ರೀಯ ಪ್ರಾಣಿ, ಅವುಗಳ ರಕ್ಷಣೆಗೆ ಅಂತಲೇ ಸರ್ಕಾರಗಳು ಕೋಟ್ಯಾಂತರ ರೂಪಾಯಿಗಳನ್ನು ವ್ಯಯ ಮಾಡುತ್ತವೆ. ದಿನದಿಂದ ದಿನಕ್ಕೆ ಹುಲಿಗಳ ಸಂತತಿ ಕ್ಷೀಣಿಸುತ್ತಿದೆ ಎಂಬ ಅಪವಾದವು ಹಲವು ದಶಕಗಳಿಂದ ದೇಶದಲ್ಲಿ ಕೇಳಿ ಬರುತ್ತಿದೆ. ಹುಲಿಗಳ ಸಂತತಿಯನ್ನು ರಕ್ಷಿಸುವ ದೊಡ್ಡ ಸವಾಲು ಕೂಡ ನಮ್ಮ ಹಾಗೂ ಸರ್ಕಾರಗಳ ಎದುರಿಗೆ ಇದೆ. ಈ ರೀತಿಯ ಕ್ಲಿಷ್ಟ ಸಂದರ್ಭದಲ್ಲಿಯೇ ಕೇವಲ ಒಂದು ವರ್ಷದಲ್ಲಿ 25 ಹುಲಿಗಳ ಕಣ್ಮರೆಯಾಗಿರುವ ಸುದ್ದಿ ಈಗ ಮತ್ತೊಂದು ಆತಂಕ್ಕೆ ಕಾರಣವಾಗಿದೆ.
/newsfirstlive-kannada/media/post_attachments/wp-content/uploads/2024/11/TIGERS-MISSING-1.jpg)
ರಾಜಸ್ತಾನದ ರತ್ನಂಬೋರೆ ನ್ಯಾಷನಲ್ ಪಾರ್ಕ್​ನ್ನು ಹುಲಿಗಳಿಗಾಗಿಯೇ ಇರುವ ಮೀಸಲು ಅರಣ್ಯ ಪ್ರದೇಶ. ಈ ಪಾರ್ಕ್​ನಲ್ಲಿ ಸುಮಾರು 75 ಹುಲಿಗಳು ವಾಸವಾಗಿದ್ದವು. ಸದ್ಯ ಅಲ್ಲಿನ ಅಧಿಕಾರಿಗಳು ನೀಡುವ ವರದಿಯ ಪ್ರಕಾರ ಕಳೆದ ಒಂದು ವರ್ಷದಲ್ಲಿ ಸುಮಾರು 25 ಹುಲಿಗಳು ಕಾಣೆಯಾಗಿವೆ ಎಂಬ ಆತಂಕದ ಮಾಹಿತಿ ಆಚೆ ಬಂದಿದೆ. 2019 ರಿಂದ 2023ರಲ್ಲಿಯೂ ಕೂಡ 13 ಹುಲಿಗಳು ಕಾಣೆಯಾದ ಬಗ್ಗೆ ವರದಿಯಾಗಿತ್ತು. ಆದ್ರೆ ಇದೇ ಮೊದಲ ಬಾರಿಗೆ ಅತಿಹೆಚ್ಚು ಹುಲಿಗಳು ಕಾಣೆಯಾದ ಬಗ್ಗೆ ವರದಿಯಾಗುತ್ತಿದೆ.
ಇದನ್ನೂ ಓದಿ:ಡಿಮ್ಯಾಂಡ್ ಕಳೆದುಕೊಂಡ ಗೋವಾ.. ಟಾಟಾ ಬೈಬೈ ಅಂತಿದ್ದಾರೆ ವಿದೇಶಿಗರು.. ಕಾರಣ ಏನು?
ಇದೇ ವಿಚಾರವಾಗಿ ವನ್ಯಜೀವಿ ಇಲಾಖೆ ಹುಲಿಗಳ ಸಂಖ್ಯೆಯ ಸಂಪೂರ್ಣ ವರದಿ ನೀಡಲೆಂದು 3 ಜನ ಸದಸ್ಯರ ಕಮೀಟಿಯೊಂದನ್ನು ರಚಿಸಿತ್ತು. ಇಲ್ಲಿಯವರೆಗೂ ಎಷ್ಟು ಹುಲಿಗಳು ಕಣ್ಮರೆಯಾಗಿವೆ ಎಂದು ವರದಿ ನೀಡುವಂತೆ ಅವರಿಗೆ ಸೂಚನೆ ನೀಡಲಾಗಿತ್ತು. ಈ ಮೂವರು ಜನರ ತಂಡ ನೀಡಿದ ವರದಿ ಪ್ರಕಾರ ಇದೇ ವರ್ಷ ಮೇ 17 ರಿಂದ ರತ್ನಂಬೋರೆ ನ್ಯಾಷನಲ್ ಪಾರ್ಕ್​ನಲ್ಲಿ ಸುಮಾರು 14 ಹುಲಿಗಳು ಕಣ್ಮರೆಯಾಗಿವೆ ಎಂದು ವರದಿ ನೀಡಿದೆ. ನವೆಂಬರ್ 4ರ ವೇಳೆಗೆ ಮತ್ತೆ 4 ಹುಲಿಗಳು ನಾಪತ್ತೆಯಾದ ಬಗ್ಗೆ ವರದಿಯಲ್ಲಿ ಉಲ್ಲೇಖಗೊಂಡಿದೆ. ಇದು ರತ್ನಾಂಬೋರೆ ನ್ಯಾಷನಲ್ ಪಾರ್ಕ್​ನಲ್ಲಿ ಪದೇ ಪದೇ ಘಟಿಸುತ್ತಿರುವ ವಿದ್ಯಮಾನ ಎಂದು ಕೂಡ ವರದಿಯಲ್ಲಿ ಉಲ್ಲೇಖವಾಗಿದೆ.
ಇದನ್ನೂ ಓದಿ:AMUಗೆ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ; ಸುಪ್ರೀಂ ಕೋರ್ಟ್​ನಿಂದ ಮಹತ್ವದ ತೀರ್ಪು
ಹುಲಿಗಳು ಕಣ್ಮರೆಯಾಗುತ್ತಿರುವ ವಿಚಾರವಾಗಿಯೇ ಈಗಾಗಲೇ ಪಾರ್ಕ್​ನ ನಿರ್ದೇಶಕರಿಗೆ ಹಲವು ಬಾರಿ ನೋಟಿಸ್ ನೀಡಲಾಗಿದ್ದರೂ ಕೂಡ ಯಾವುದೇ ಸುಧಾರಣೆ ಕಂಡು ಬಂದಿಲ್ಲ. ವರದಿಲ್ಲಿ ಉಲ್ಲೇಖಗೊಂಡಿರುವ ಪ್ರಕಾರ ಅಕ್ಟೋಬರ್ 14, 2024 ರ ವೇಳೆಯಲ್ಲಿ ಪಾರ್ಕ್​ನಿಂದ ಒಟ್ಟು 11 ಹುಲಿಗಳು ಕಣ್ಮರೆಯಾಗಿವೆ. ಇದನ್ನು ಹೊರತುಪಡಿಸಿ ಕಳೆದ ಒಂದು ವರ್ಷದಲ್ಲಿ ಕಣ್ಮರೆಯಾದ ಹುಲಿಗಳ ಸಂಖ್ಯೆ ಒಟ್ಟು 14 ಎಂದು ಮೂವರು ಸದಸ್ಯರು ಇರುವ ಕಮೀಟಿಯ ವರದಿಯಲ್ಲಿ ಹೇಳಲಾಗಿದೆ. ಅಲ್ಲಿಗೆ 75 ಹುಲಿಗಳನ್ನು ಹೊಂದಿರುವ ರತ್ನಂಬೋರೆ ನ್ಯಾಷನಲ್ ಪಾರ್ಕ್​ನಲ್ಲಿ ಒಟ್ಟು 25 ಹುಲಿಗಳು ಕಳೆದ ಒಂದು ವರ್ಷದಲ್ಲಿ ಕಣ್ಮರೆಯಾದ ಬಗ್ಗೆ ಮಾಹಿತಿ ಬಂದಿದೆ.
/newsfirstlive-kannada/media/post_attachments/wp-content/uploads/2024/11/TIGERS-MISSING-2.jpg)
ಮಾಧ್ಯಮಗಳೊಂದಿಗೆ ಮಾತನಾಡಿರುವ ವನ್ಯಜೀವಿ ಇಲಾಖೆಯ ಉಸ್ತುವಾರಿ ಅಧಿಕಾರಿ ಪವನ್ ಕುಮಾರ್. ನೇಮಕ ಮಾಡಿರುವ ಕಮೀಟಿ ಇನ್ನೆರಡು ತಿಂಗಳಲ್ಲಿ ಅಂತಿಮ ವರದಿಯನ್ನು ನೀಡಲಿದೆ. ಹುಲಿಗಳ ಮೇಲ್ವಿಚಾರಣೆಯ ಕಾರ್ಯದಲ್ಲಿ ಅನೇಕ ಕರ್ತವ್ಯ ಲೋಪಗಳು ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿವೆ. ಹೀಗಾಗಿ ಅನೇಕ ಹುಲಿಗಳು ನಮ್ಮ ಕ್ಯಾಮರಾ ಕಣ್ಣಿನಲ್ಲಿ ಕಾಣಿಸಿಕೊಂಡಿಲ್ಲ. ಈ ವಿಷಯವನ್ನು ಇಲಾಖೆ ತುಂಬಾ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ.
900 ಸ್ಕೇರ್​ ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ರತ್ನಂಬೋರೆ ನ್ಯಾಷನಲ್ ಪಾರ್ಕ್​ನಲ್ಲಿ ಹದಿಹರೆಯದ ಹಾಗೂ ಮರಿಗಳನ್ನು ಸೇರಿ ಒಟ್ಟು 75 ಹುಲಿಗಳು ಇದ್ದವು. ಈಗ ಮೂವರು ಸದಸ್ಯರು ಇರುವ ಕಮೀಟಿ ನೀಡಿದ ವರದಿಯಲ್ಲಿ 25 ಹುಲಿಗಳು ನಾಪತ್ತೆಯಾಗಿರುವ ಅಂಶ ಬೆಳಕಿಗೆ ಬಂದಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us