ಪಾಕ್ ದಾಳಿಗೆ ಹುತಾತ್ಮರಾದ ವೀರಯೋಧ ಮುರಳಿ ನಾಯಕ್ ಯಾರು..?

author-image
Veena Gangani
Updated On
ಪಾಕ್ ದಾಳಿಗೆ ಹುತಾತ್ಮರಾದ ವೀರಯೋಧ ಮುರಳಿ ನಾಯಕ್ ಯಾರು..?
Advertisment
  • 25ನೇ ವಯಸ್ಸಿನಲ್ಲೇ ವೀರ ಮರಣ ಹೊಂದಿದ ಮುರಳಿ ನಾಯಕ್​
  • ಕೃಷಿ ಕುಟುಂಬದಿಂದ ಬಂದ ಮುರಳಿ ನಾಯಕ್​ ಯಾರು ಗೊತ್ತಾ?
  • ಪುದಗುಂಡ್ಲಪಲ್ಲಿ ತಾಂಡಾದಲ್ಲಿ ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ

ದಿನದಿಂದ ದಿನಕ್ಕೆ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಲೇ ಇದೆ. ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಶೆಲ್ ದಾಳಿಯಿಂದ ಭಾರತದ ಯುವ ಸೈನಿಕನೊಬ್ಬ ಪ್ರಾಣ ತ್ಯಾಗ ಮಾಡಿದ್ದಾರೆ.

ಇದನ್ನೂ ಓದಿ: ಕರಾಚಿ ಮೇಲೆ ಭಾರತ ಕ್ಷಿಪಣಿ, ಡ್ರೋಣ್ ಅಟ್ಯಾಕ್.. ಖತಂ ಆಗ್ತಾನಾ ದಾವೂದ್ ಇಬ್ರಾಹಿಂ..?

ಪಾಕಿಸ್ತಾನ ಗಡಿಯಲ್ಲಿ ನಡೆದ ದಾಳಿಯ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಸಮೀಪದ ಆಂಧ್ರಪ್ರದೇಶಕ್ಕೆ ಸೇರಿದ ಕಲ್ಲಿಕೊಂಡ್ಲ ಗ್ರಾಮದ ಶ್ರೀರಾಮುಲು ನಾಯಕ್ ಹಾಗೂ ಜ್ಯೋತಿಬಾಯಿರವರ ಏಕೈಕ ಪುತ್ರ ಯೋಧ ಮುರಳಿ ನಾಯಕ್ ಹುತಾತ್ಮರಾಗಿದ್ದಾರೆ. ಯೋಧರ ಮರಣದ ಸುದ್ದಿ ತಿಳಿಯುತ್ತಿದ್ದಂತೆಯೇ ಗೋರಂಟ್ಲ ಮಂಡಲದ ಪುದಗುಂಡ್ಲಪಲ್ಲಿ ತಾಂಡಾದಲ್ಲಿ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

publive-image

ಯಾರು ಈ ಮುರಳಿ ನಾಯಕ್?

25 ವಯಸ್ಸಿನ ಮುರಳಿ ನಾಯ್ಕ್ ಅವರು ಡಿಸೆಂಬರ್ 2022ರಲ್ಲಿ ಸೇನೆಗೆ ಸೇರಿದ್ದರು. ಮತ್ತು AV (OPR) ಟ್ರೇಡ್ ಅಡಿಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರು ಮೂಲತಃ ಆಂಧ್ರಪ್ರದೇಶ ಸತ್ಯಸಾಯಿ ಜಿಲ್ಲೆಯ ಬುಡಕಟ್ಟು ಹಳ್ಳಿಯೊಂದರ ಬಡ ಕುಟುಂಬದಲ್ಲಿ ಜನಿಸಿದವರು. ಮುರಳಿ ನಾಯಕ್ ಅವರು ಬಡತನದ ಹಿನ್ನೆಲೆಯಿಂದ ಬಂದವರು. ಇವರ ತಾಯಿ ಎಂ. ಜ್ಯೋತಿಬಾಯಿ ಮತ್ತು ತಂದೆ ಎಂ. ಶ್ರೀರಾಮ್ ನಾಯ್ಕ್ ಅವರು ದಿನಗೂಲಿ ಕಾರ್ಮಿಕರಾಗಿದ್ದಾರೆ. ಇಂತಹ ಕುಟುಂಬದಿಂದ ಬಂದ ಮುರಳಿ ನಾಯಕ್​ 25 ವಯಸ್ಸಿನಲ್ಲಿಯೇ ಸೇನೆಗೆ ಸೇರಿದರು. ಅವರ ತ್ಯಾಗ ಗ್ರಾಮಕ್ಕೆ ಅಪಾರ ಹೆಮ್ಮೆ ಮತ್ತು ಆಳವಾದ ದುಃಖ ಉಂಟು ಮಾಡಿದೆ.

publive-image

ಮುರಳಿ ನಾಯಕ್ ಹುತಾತ್ಮರಾದ ವಿಚಾರ ತಿಳಿಯುತ್ತಿದ್ದಂತೆ ಅವರ ಮನೆಗೆ ಆಂಧ್ರ ಪ್ರದೇಶ ಸಮಾಜ ಕಲ್ಯಾಣ ಸಚಿವೆ ಸುಮಿತ್ರಮ್ಮ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ಇದೇ ವೇಳೆ ಸಚಿವೆ ಕೂಡ ದುಃಖತಪ್ತರಾದ್ರು. ಅಲ್ಲದೇ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಸಹ ಸಂತ್ರಸ್ತ ಕುಟುಂಬದೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸಂತೈಸಿದ್ರು. ಮುರಳಿ ನಾಯಕ್ ಫಾರ್ಥೀವ ಶರೀರ ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ ಬರಲಿದ್ದು, ಚಿಕ್ಕಬಳ್ಳಾಪುರ ಮಾರ್ಗವಾಗಿಯೇ ಮೃತ ಪಾರ್ಥಿವ ಶರೀರವನ್ನ ಕೊಂಡೊಯ್ಯಲಾಗುತ್ತದೆ.

ಇದನ್ನೂ ಓದಿ:ಪಾಕ್ ದಾಳಿಗೆ ಗೋರಂಟ್ಲು ಯೋಧ ಹುತಾತ್ಮ; ಮಧ್ಯಾಹ್ನ ಬೆಂಗಳೂರು ತಲುಪಲಿದೆ ಪಾರ್ಥಿವ ಶರೀರ

publive-image

ಹುತಾತ್ಮರಾದ ವೀರಯೋಧನಿಗೆ ಶ್ರದ್ಧಾಂಜಲಿಯಾಗಿ ಗೋರಂಟ್ಲದ ಪ್ರಮುಖ ವೃತ್ತದಲ್ಲಿ ಮುರಳಿ ನಾಯಕ್ ಅವರ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಸಚಿವೆ ತಿಳಿಸಿದರು. ಪ್ರತಿಮೆ ಸ್ಥಾಪನೆಗೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ಸಕಲ ಸೇನಾ ಗೌರವಗಳೊಂದಿಗೆ ನಾಳೆ ಹುತಾತ್ಮರ ಅಂತಿಮ ಸಂಸ್ಕಾರ ನಡೆಯಲಿದೆ. ಸೇನೆಯ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಗೌರವ ಸಲ್ಲಿಸಲು ರಾಜ್ಯದ ಅಧಿಕಾರಿಗಳು ಹಾಜರಾಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment