ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ದೊಡ್ಡ ಆಘಾತ; ಕೆಲಸ ಕಳೆದುಕೊಂಡ 25,000 ಶಿಕ್ಷಕರು..!

author-image
Ganesh
Updated On
ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ದೊಡ್ಡ ಆಘಾತ; ಕೆಲಸ ಕಳೆದುಕೊಂಡ 25,000 ಶಿಕ್ಷಕರು..!
Advertisment
  • 2016ರಲ್ಲಿ ಶಿಕ್ಷಕರ ನೇಮಕಾತಿ ಹಗರಣಕ್ಕೆ ಬಿಗ್​ ಟ್ವಿಸ್ಟ್​
  • ಸಂಬಳದ ಜೊತೆಗೆ ಬಡ್ಡಿಯನ್ನೂ ವಸೂಲಿ ಮಾಡುವಂತೆ ಸೂಚನೆ
  • ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ದೊಡ್ಡ ಹಿನ್ನೆಡೆ

ಶಿಕ್ಷಕರ ನೇಮಕಾತಿ ಹಗರಣದಲ್ಲಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ 2016ರಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯನ್ನು ಕೋಲ್ಕತ್ತ ಹೈಕೋರ್ಟ್​ ರದ್ದುಗೊಳಿಸಿ ಬಿಗ್ ಶಾಕ್ ನೀಡಿದೆ. ಈ ಮೂಲಕ ಸುಮಾರು 25,753 ಶಿಕ್ಷಕರು ಕರ್ತವ್ಯದಿಂದ ವಜಾಗೊಂಡಿದ್ದಾರೆ! ಅವರೆಲ್ಲ ಶಿಕ್ಷಕರ ಹುದ್ದೆಯನ್ನು ಕಳೆದುಕೊಂಡಿದ್ದಾರೆ.

ಮಾತ್ರವಲ್ಲ, ಕೋರ್ಟ್​ ಆದೇಶದ ಪ್ರಕಾರ ಶೇಕಡಾ 12 ರಷ್ಟು ಬಡ್ಡಿಯೊಂದಿಗೆ ಇಲ್ಲಿಯವರೆಗೆ ತೆಗೆದುಕೊಂಡ ಸಂಬಳವನ್ನು ಹಿಂದಿರುಗಿಸುವಂತೆ ಸೋಚಿಸಿದೆ. ನಾಲ್ಕು ವಾರಗಳ ಒಳಗಾಗಿ ಹಣವನ್ನು ನೀಡುವಂತೆ ಸೂಚನೆ ನೀಡಿದೆ. ಅನರ್ಹಗೊಂಡ ಶಿಕ್ಷಕರಿಂದ ಹಣ ವಸೂಲಿ ಮಾಡುವ ಹೊಣೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಕೋರ್ಟ್​ ಆದೇಶ ಹೊರಡಿಸಿದೆ.

ಇದನ್ನೂ ಓದಿ:ವಿವಾದಾತ್ಮಕ ತೀರ್ಪು ವಿರುದ್ಧ ಕೊಹ್ಲಿ ಕಿತ್ತಾಟ; ತೆಂಡುಲ್ಕರ್​​ ಎಳೆದು ತಂದು ಕೊಹ್ಲಿಗೆ ಕೌಂಟರ್..!

publive-image

ನ್ಯಾಯಮೂರ್ತಿಗಳಾದ ದೇಬಂಗ್ಸು ಬಸಕ್ ಮತ್ತು ಎಂಡಿ ಶಬ್ಬರ್ ರಶೀದಿ ಅವರು ಈ ಆದೇಶ ನೀಡಿದ್ದಾರೆ. 2016ರಲ್ಲಿ ನೇಮಕಾತಿ ಪ್ರವೇಶ ಪರೀಕ್ಷೆಯ 23 ಲಕ್ಷ OMR ಹಾಳೆಗಳನ್ನು (ಪರೀಕ್ಷಾ ಪತ್ರಿಕೆ) ಮರು ಮೌಲ್ಯಮಾಪನ ಮಾಡುವಂತೆ ಪೀಠ ಆದೇಶ ನೀಡಿದೆ. ಖಾಲಿ OMR ಹಾಳೆಗಳನ್ನು ಸಲ್ಲಿಸಿ ಕಾನೂನು ಬಾಹಿರವಾಗಿ ಶಿಕ್ಷಕರು ನೇಮಕಾತಿ ಆಗಿದೆ. ಈ ಹಗರಣದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಸಿಬಿಐ ಹಗರಣದ ತನಿಖೆಯನ್ನು ನಡೆಸಿತ್ತು.

ಇದನ್ನೂ ಓದಿ: ಇಸ್ರೇಲ್​ನ ಭೀಕರ ಯುದ್ಧಕ್ಕೆ ಸಾವನ್ನಪ್ಪಿದ ತಾಯಿ, ಗರ್ಭದಲ್ಲಿದ್ದ ಮಗು ರಕ್ಷಣೆ ಆಗಿದ್ದೇ ದೊಡ್ಡ ಪವಾಡ..!

ಹೊಸ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವ ಬಗ್ಗೆ WBSSCಗೆ (ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ) ಕೋರ್ಟ್​ ಮಾಹಿತಿ ಕೇಳಿದೆ. ಖಾಲಿ ಇರುವ 24,000 ಕ್ಕೂ ಶಿಕ್ಷಕರ ಹುದ್ದೆಗಳಿಗೆ 2016 WBSSC ಪರೀಕ್ಷೆ ನಡೆಸಿತ್ತು. ಈ ಪರೀಕ್ಷೆಗೆ 23 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ಹೈಕೋರ್ಟ್​ ಆದೇಶದ ವಿರುದ್ಧ ಪಶ್ಚಿಮ ಬಂಗಾಳದ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆ ಇದೆ. ಇದೇ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಅನೇಕ ತೃಣಮೂಲ ನಾಯಕರು ಮತ್ತು ಮಾಜಿ ಅಧಿಕಾರಿಗಳು ಜೈಲಿನಲ್ಲಿದ್ದಾರೆ.

ಇದನ್ನೂ ಓದಿ:ಪಂದ್ಯ ಮುಗಿದ ಮೇಲೂ ಸುಮ್ಮನಾಗದ ಕೊಹ್ಲಿ, ವಿವಾದಾತ್ಮಕ ತೀರ್ಪಿನ ಬಗ್ಗೆ ಅಂಪೈರ್​ ಜೊತೆ ಮತ್ತೆ ಟಾಕ್ ಫೈಟ್..!

ಇದೇ ಪ್ರಕರಣದಲ್ಲಿ ಪಶ್ಚಿಮ ಬಂಗಾಳದ ಮಾಜಿ ಶಿಕ್ಷಣ ಸಚಿವ 2022ರಲ್ಲಿ ಅರೆಸ್ಟ್ ಆಗಿದ್ದಾರೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ವಿಚಾರಣೆ ನಡೆಸಿದ್ದ ಕೋಲ್ಕತ್ತ ಹೈಕೋರ್ಟ್​ ಮಾರ್ಚ್​ 20 ರಂದು ತೀರ್ಪು ಪೂರ್ಣಗೊಳಿಸಿ ಆದೇಶವನ್ನು ಇಂದಿಗೆ ಕಾಯ್ದಿರಿಸಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment