ಅತಿಯಾಗಿ ಬಂದ ಸ್ನೇಹಿತರ ನಂಬಬೇಡಿ, ರಾಜಕೀಯ ವಿಚಾರದಲ್ಲಿ ಹಿನ್ನಡೆ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ

author-image
Veena Gangani
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಜವಾಬ್ದಾರಿ ನಿಷ್ಠರಾಗಿ ಕೆಲಸ ಮಾಡುವುದಕ್ಕೆ ಅವಕಾಶವಿದೆ
  • ನೌಕರಿ, ವೃತ್ತಿಯಲ್ಲಿ ಭರವಸೆಯ ಭಾವನೆಗಳು ಚಿಗುರುತ್ತವೆ
  • ಕೆಲಸ ಕಾರ್ಯಗಳಲ್ಲಿ ಯಶಸ್ಸಿನ ಜೊತೆ ತೃಪ್ತಿ ಸಿಗುವ ದಿನ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

publive-image

  • ನೌಕರಿ, ವೃತ್ತಿಯಲ್ಲಿ ಭರವಸೆಯ ಭಾವನೆಗಳು ಚಿಗುರುತ್ತವೆ
  • ನಿಮ್ಮ ಸುತ್ತ ಮುತ್ತಲಿನ ವಾತಾವರಣ ಚೆನ್ನಾಗಿರುತ್ತದೆ
  • ಕೆಲಸ ಕಾರ್ಯಗಳಲ್ಲಿ ಯಶಸ್ಸಿನ ಜೊತೆ ತೃಪ್ತಿ ಸಿಗುವ ದಿನ
  • ವ್ಯಾಪಾರ, ವ್ಯವಹಾರದ ದೃಷ್ಟಿಯಿಂದ ಪ್ರವಾಸ ಕೈಗೊಳ್ಳಬಹುದು
  • ಆರ್ಥಿಕ ಅನುಕೂಲತೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ
  • ಚಿಕ್ಕ ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆವಹಿಸಿ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಷಭ

publive-image

  • ವ್ಯಾಪಾರಸ್ಥರಿಗೆ ಶುಭ ಹಾಗೂ ಲಾಭದ ದಿನ
  • ಪಿತ್ರಾರ್ಜಿತ ಆಸ್ತಿಯಿಂದ ಲಾಭ ಹೆಚ್ಚು
  • ಮಾನಸಿಕವಾಗಿ ತೃಪ್ತಿ ಸಿಗುವ ದಿನ
  • ಜವಾಬ್ದಾರಿ ನಿಷ್ಠರಾಗಿ ಕೆಲಸ ಮಾಡುವುದಕ್ಕೆ ಅವಕಾಶವಿದೆ
  • ಹಳೆಯ ಎಲ್ಲ ಗೊಂದಲಗಳಿಗೆ ಇಂದು ಉತ್ತರ ಸಿಗುತ್ತದೆ
  • ಕುಲದೇವರ ಆರಾಧನೆ ಮಾಡಿ

ಮಿಥುನ

publive-image

  • ನಿಯಮಿತ ಆದಾಯದ ಮೂಲ ಸಿಗಬಹುದು ಗಮನಿಸಿ
  • ಅಧಿಕಾರ, ಹಕ್ಕನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಾಗುವುದಿಲ್ಲ
  • ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕವಿರಲಿ
  • ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆ ಕಾಡಬಹುದು
  • ರಾಜಕೀಯ ವಿಚಾರದಲ್ಲಿ ಹಿನ್ನಡೆಯ ದಿನ
  • ರಾಜಕಾರಣಿಗಳಿಗೆ ಅಪಾಯವಿದೆ ಎಚ್ಚರಿಕೆ ಇರಲಿ
  • ಆಂಜನೇಯ ಸ್ವಾಮಿಯ ಅನುಗ್ರಹ ಪಡೆಯಿರಿ

ಕಟಕ

publive-image

  • ಕೋಪ ಕಡಿಮೆ ಮಾಡಿಕೊಳ್ಳಿ ದಿನ ಚೆನ್ನಾಗಿಲ್ಲ
  • ಇಂದು ತಾಳ್ಮೆ ಪರೀಕ್ಷೆಯ ದಿನವಾಗಿರುತ್ತದೆ
  • ಮಕ್ಕಳು ಅನುಚಿತವಾಗಿ ವರ್ತಿಸಬಹುದು
  • ನಿಮ್ಮ ಹಿತೈಷಿಗಳಿಂದ ಯಾವುದೇ ಅನುಕೂಲವಿಲ್ಲ
  • ನಿಮ್ಮ ಕೆಲಸಗಳಲ್ಲಿ ತಪ್ಪನ್ನು ಹುಡುಕುವ ದಿನ
  • ಕಾರ್ಯ, ವೃತ್ತಿಯ ಮೇಲೆ ಹೆಚ್ಚು ಗಮನಹರಿಸಿ
  • ತಾಪಸ ಮನ್ಯುವಿನ ಪ್ರಾರ್ಥನೆ ಮಾಡಿ

ಸಿಂಹ

publive-image

  • ವ್ಯವಹಾರಿಕವಾಗಿ ಗಾಂಭೀರ್ಯದಿಂದ ಇರುತ್ತೀರಿ
  • ಯೋಜನೆಯಂತೆ ಎಲ್ಲಾ ಕೆಲಸಗಳು ನಡೆಯುತ್ತವೆ
  • ಸಹಾಯಕರು ತುಂಬಾ ಪ್ರಾಮಾಣಿಕವಾಗಿರುತ್ತಾರೆ
  • ಧಾರ್ಮಿಕ ಕ್ಷೇತ್ರದಲ್ಲಿ ಆಸಕ್ತಿ ತೋರಬೇಕು
  • ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ
  • ದಾಂಪತ್ಯದಲ್ಲಿ ಸಾಮರಸ್ಯ ಇರುತ್ತದೆ
  • ಇಷ್ಟದೇವತಾರಾಧನೆ ಮಾಡಿ

ಕನ್ಯಾ

publive-image

  • ಕುಟುಂಬದಲ್ಲಿ ನಿಮ್ಮ ಪ್ರತಿಷ್ಠೆ , ಗೌರವ ಹೆಚ್ಚಾಗಬಹುದು
  • ಮಾನಸಿಕ ತೊಂದರೆ ದೂರವಾಗಬಹುದು
  • ನಿಮ್ಮ ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಿ
  • ಬೇರೆಯವರಿಗೆ ಸಹಾಯ ಮಾಡಿ, ಪುಣ್ಯ ಸಂಪಾದಿಸಿ
  • ನಿಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶಿಸಲು ವಿಫಲರಾಗುತ್ತೀರಿ
  • ಅನಗತ್ಯ ಮಾತು ಬೇಡ, ಉತ್ತಮ ಕೆಲಸ ಮಾಡಿ
  • ಮಾರುತಿಯನ್ನು ಆರಾಧಿಸಿ

ತುಲಾ

publive-image

  • ವೃತ್ತಿಯಲ್ಲಿ, ನೌಕರಿಯಲ್ಲಿ ನಿಮ್ಮನ್ನು ದ್ವೇಷಿಸುವವರು ಹೆಚ್ಚು
  • ಜನರಿಗೆ ವಿರುದ್ಧವಾದ ಕೆಲಸ ಬೇಡ
  • ಆರೋಗ್ಯದ ಬಗ್ಗೆ ಕಾಳಜಿ ಇರಲಿ
  • ಅಧಿಕಾರ, ಸ್ಥಾನದ ದುರುಪಯೋಗ ಬೇಡ
  • ಸಂಜೆ ಸ್ನೇಹಿತರ ಜೊತೆ ಉತ್ತಮ ಚರ್ಚೆ ಮಾಡುತ್ತೀರಿ
  • ಹಣದ ತೊಂದರೆಯಿಲ್ಲ - ಶುಭವಿದೆ
  • ದತ್ತಾತ್ರೇಯರ ಪ್ರಾರ್ಥನೆ ಮಾಡಿ

ವೃಶ್ಚಿಕ

publive-image

  • ಅನಗತ್ಯವಾಗಿ ಯಾವ ಬದಲಾವಣೆಯೂ ಬೇಡ
  • ನಿಮ್ಮ ಅಕ್ಕಪಕ್ಕದವರೊಂದಿಗೆ ಸೌಹಾರ್ದಯುತರಾಗಿರಿ
  • ಕೌಟುಂಬಿಕ ಜಗಳ, ಮನಸ್ತಾಪವಾಗಬಹುದು
  • ವ್ಯಾಪಾರದಲ್ಲಿ ಗೊಂದಲವನ್ನು ಬಗೆಹರಿಸಿಕೊಳ್ಳಿ
  • ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರ ದಿನ
  • ಶ್ರೀ ರಾಮನನ್ನು ಪ್ರಾರ್ಥನೆ ಮಾಡಿ

ಧನಸ್ಸು 

publive-image

  • ಇಂದು ಉದ್ಯೋಗದಲ್ಲಿ ಬದಲಾವಣೆಯಾಗಬಹುದು
  • ಯೋಗ್ಯ ವ್ಯಕ್ತಿಗಳ ಮಾರ್ಗದರ್ಶನದಿಂದ ಪ್ರಯೋಜನ ಸಿಗುತ್ತದೆ
  • ದಿನದ ಹೆಚ್ಚಿನ ಭಾಗ ನಿಮಗೆ ಅನುಕೂಲಕರವಾದದ್ದು
  • ಪ್ರೇಮಿಗಳಿಗೆ ಉತ್ತಮವಾದ ದಿನ
  • ನಿಮ್ಮ ಸರಿಯಾದ ವ್ಯಕ್ತಿತ್ವದಿಂದ ಜನರು ಪ್ರಭಾವಿತರಾಗುತ್ತಾರೆ
  • ವಿದ್ಯಾರ್ಥಿಗಳಿಗೆ ಸಹಾಯ ದೊರಕಬಹುದಾದ ದಿನ
  • ಶ್ರೀ ಕೃಷ್ಣನನ್ನು ಪ್ರಾರ್ಥನೆ ಮಾಡಿ

ಮಕರ

publive-image

  • ಈ ದಿನ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ
  • ಕುಟುಂಬದಲ್ಲಿ ಅಹಿತಕರ ಘಟನೆಗಳು ನಡೆಯಬಹುದು
  • ಭಾವನಾತ್ಮಕವಾಗಿ ಯಾವುದೇ ನಿರ್ಧಾರ ಬೇಡ
  • ಹಳೆಯ ತಪ್ಪಿನ ಅರಿವಾಗುತ್ತದೆ
  • ಸ್ವಯಂ ಪ್ರೇರಣೆಯಿಂದ ಮನಸ್ಸನ್ನು ಕೇಂದ್ರೀಕರಿಸಬೇಕು
  • ಸ್ನೇಹಿತರಿಂದ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯಗಳಿರುತ್ತದೆ
  • ದುರ್ಗಾರಾಧನೆ ಮಾಡಿ

ಕುಂಭ

publive-image

  • ದಾಂಪತ್ಯದಲ್ಲಿ ಪ್ರಯತ್ನಪೂರ್ವಕವಾಗಿಯಾದ್ರೂ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳಿ
  • ಆರಾಮದಿಂದ ದಿನ ಕಳೆಯಲು ಯತ್ನಿಸಬಹುದು
  • ಕುಟುಂಬದವರ ಸಹಕಾರವಿರುತ್ತದೆ
  • ಪೂರ್ಣ ಉತ್ಸಾಹದಿಂದ ಜವಾಬ್ದಾರಿಗಳನ್ನು ಪೂರೈಸಬಹುದು
  • ಆರೋಗ್ಯದಲ್ಲಿ ತೊಂದರೆಯಿಲ್ಲ
  • ಹಣದ ವಿಚಾರವಾಗಿ ಗೊಂದಲ, ಮನಸ್ತಾಪ ಉಂಟಾಗಬಹುದು
  • ಪಾರ್ವತಿ ದೇವಿಯನ್ನು ಪ್ರಾರ್ಥಿಸಿ

ಮೀನ 

publive-image

  • ನಿಮ್ಮ ಕೆಲಸ ನಿಮಗೆ ತೃಪ್ತಿಕೊಡುವುದಿಲ್ಲ
  • ಕೆಲವು ಕೆಲಸಗಳು ನಿಧಾನವಾಗಿ ಪೂರ್ಣವಾಗಬಹುದು
  • ಹಳೆಯ ತಪ್ಪಿನಿಂದ ಬೇಸರ ಆಗಬಹುದು
  • ಜವಾಬ್ದಾರಿಯ ಬಗ್ಗೆ ಚಿಂತಿಸಿ
  • ಆರೋಗ್ಯದ ಬಗ್ಗೆ ಗಮನವಿರಲಿ, ತಾತ್ಸಾರ ಬೇಡ
  • ವ್ಯವಹಾರ, ಹಣಕಾಸು ಮಾಮೂಲಿಯಂತೆ ನಡೆಯುತ್ತದೆ
  • ಅಮೃತ ಮೃತ್ಯಂಜಯನನ್ನು ಪ್ರಾರ್ಥಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment