ಮೋದಿ ಸರ್ಕಾರಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು..26/11 ರ ದಾಳಿ ರೂವಾರಿ ಭಾರತಕ್ಕೆ ಸದ್ಯದಲ್ಲಿಯೇ ಹಸ್ತಾಂತರ

author-image
Gopal Kulkarni
Updated On
ಅಮೆರಿಕಾದಿಂದ ಇವತ್ತೇ ತಹಾವುರ್ ರಾಣಾ ಹಸ್ತಾಂತರ ಸಾಧ್ಯತೆ.. ಭಾರತದಲ್ಲಿ ಎರಡು ಜೈಲುಗಳು ಸಿದ್ಧ..!
Advertisment
  • ಭಾರತ ಸರ್ಕಾರಕ್ಕೆ ಬಹು ದೊಡ್ಡ ರಾಜತಾಂತ್ರಿಕ ಗೆಲುವು
  • ತಹವ್ವುರ್ ರಾಣಾ ಸದ್ಯದಲ್ಲಿಯೇ ಭಾರತಕ್ಕೆ ಹಸ್ತಾಂತರ
  • 26/11 ದಾಳಿಯಲ್ಲಿ ಪ್ರಮುಖ ಆರೋಪಿಯಾಗಿದ್ದ ರಾಣಾ

2008ರಲ್ಲಿ ನಡೆದ ಮುಂಬೈ ದಾಳಿಯ ಪ್ರಕರಣದಲ್ಲಿ ಭಾರತಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ.  ಪಾಕಿಸ್ತಾನ್ ಮೂಲದ ಕೆನಡಾ ನಿವಾಸಿ ತಹವ್ವುರ್ ರಾಣಾ ಭಾರತಕ್ಕೆ ಹಸ್ತಾಂತರಗೊಳ್ಳುವ ಸಮಯ ಸನಿಹ ಬಂದಿದೆ. 2008 ನವೆಂಬರ್ 26 ರಂದು ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಈತ ಪ್ರಮುಖ ಪಾತ್ರವಹಿಸಿದ್ದ. ಈ ಒಂದು ದಾಳಿಯಲ್ಲಿ ಸುಮಾರು 175 ಜನರು ಜೀವವನ್ನು ಕಳೆದುಕೊಂಡಿದ್ದರು. ಮುಂಬೈ ನಗರದ ಪ್ರತಿಷ್ಠಿತ ಹೋಟೆಲ್ ಹಾಗೂ ಪ್ರವಾಸಿಗರ ನೆಚ್ಚಿನ ತಾಣವಾಗಿದ್ದ ಹೋಟೆಲ್ ತಾಜ್​ ಮೇಲೆಯೂ ಕೂಡ ದಾಳಿ ನಡೆಸಲಾಗಿತ್ತು, 10 ಜನ ಭಯೋತ್ಪಾದಕರು ಇಡೀ ನಗರವನ್ನು ಸುಮಾರು 3 ದಿನಗಳ ಕಾಲ ಒತ್ತೆಯಾಗಿಟ್ಟುಕೊಂಡಿದ್ದರು. ಈ ದಾಳಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯ ಅನೇಕ ನಾಯಕರು ಭಾಗಿಯಾಗಿದ್ದರ ಬಗ್ಗೆ ಭಾರತ ಸ್ಪಷ್ಟನೆ ನೀಡಿತ್ತು. ಅದರಲ್ಲಿ ಈ ತಹವ್ವುರ್ ರಾಣಾ ಕೂಡ ಒಬ್ಬ.

ಸದ್ಯ ರಾಣಾ ಪ್ರಕರಣವನ್ನು ವಿಚಾರಣೆ ನಡೆಸಿದ 9ನೇ ಸರ್ಕ್ಯೂಟ್​ ನ್ಯಾಯಾಲಯ ಲೋವರ್ ಫೆಡರಲ್ ಕೋರ್ಟ್​​ನ ತೀರ್ಪನ್ನು ಎತ್ತಿ ಹಿಡಿದಿದ್ದು. 1997ರ ಆರೋಪಿಗಳ ಹಸ್ತಾಂತರ ಒಪ್ಪಂದಂತೆ ರಾಣಾ ಹಸ್ತಾಂತರಕ್ಕೆ ಒಪ್ಪಿಗೆ ನೀಡಿದೆ. ಮೂರು ನ್ಯಾಯಮೂರ್ತಿಗಳ ಪೀಠ ಕೇಂದ್ರ ಕ್ಯಾಲಿಫೋರ್ನಿಯಾದ ಜಿಲ್ಲಾ ಕೋರ್ಟ್​ನ ಹಸ್ತಾಂತರ ತೀರ್ಪು ವಿರೋಧಿಸಿ ಸಲ್ಲಿಕೆಯಾಗಿದ್ದ ಹೇಬಿಯಸ್ ಕಾರ್ಪೆಸ್ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್ ರಾಣಾ ಹಸ್ತಾಂತರಕ್ಕೆ ಒಪ್ಪಿಗೆ ಕೊಟ್ಟಿದೆ.

ಇದನ್ನೂ ಓದಿ: 181 ಮಂದಿಯಲ್ಲಿ ಇಬ್ಬರು ಮಾತ್ರ ಬದುಕಿ ಬಂದರು.. ಇವರ ಜೀವ ಉಳಿಯಲು ನಿಗೂಢ ಕಾರಣ ಏನು?

ತಹವ್ವುರು ರಾಣಾ ಮೇಲೆ ಪ್ರಮುಖ ಮೂರು ಆರೋಪಗಳನ್ನು ಚಿಕ್ಯಾಗೋ ಫೆಡರಲ್ ಕೋರ್ಟ್​ನಲ್ಲಿ ಎದುರಿಸಿದ್ದಾನೆ. ಡ್ಯಾನಿಷ್ ಪ್ರಕರಣದಲ್ಲಿ ಭಾಗಿ, ಲಷ್ಕರ್ ಭಯೋತ್ಪಾದನಾ ಸಂಘಟನೆಗೆ ಬೆಂಬಲ ಹಾಗೂ 26/11ರ ದಾಳಿಯ ಹಿಂದೆ ಸಂಚು ಸೇರಿ ಒಟ್ಟು ಮೂರು ಆರೋಪಗಳು ಈತನ ಮೇಲೆ ಇದ್ದವು. ಮೊದಲ ಎರಡು ಪ್ರಕರಣಗಳಲ್ಲಿ ಅಪರಾಧಿ ಎಂದು ಘೋಷಿಸಿ 14 ವರ್ಷ ಜೈಲು ಶಿಕ್ಷೆಯಾಗಿದೆ. ಇದ್ಯಾವುದು ಹಸ್ತಾಂತರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ

ಸದ್ಯ ರಾಣಾ ಹಸ್ತಾಂತರವು ಭಾರತಕ್ಕೆ ಒಂದು ದೊಡ್ಡ ರಾಜತಾಂತ್ರಿಕ ಗೆಲುವು ಆಗಿದೆ. ಇದು ಲಷ್ಕರ್ ಇ ತೊಯ್ಬಾದ ಸಹಚಾರಿ ಡೇವಿಡ್ ಹೆಡ್ಲೀ ಅಲಿಯಾಸ್ ದಾವೂದ್ ಗಿಲಾನಿಯನ್ನು ಕೂಡ ಭಾರತಕ್ಕೆ ಹಸ್ತಾಂತರ ಮಾಡುವಂತೆ ಮನವಿ ಮಾಡುವ ದಾರಿಯಲ್ಲಿ ಅರ್ಧ ಗೆದ್ದಂತಾಗುತ್ತದೆ. ಈಗಾಗಲೇ ಈತನ ಮೇಲೆ ಹಲವು ಆರೋಪಗಳಿವೆ. ಅದರಲ್ಲಿ 12 ಆರೋಪಗಳು ಭಯೋತ್ಪಾದನೆಗೆ ಸಂಬಂಧಿಸದ್ದವು ಇವೆ ಒಂದು ಬಾರಿ ರಾಣಾ ಭಾರತಕ್ಕೆ ಹಸ್ತಾಂತರ ಆಗಿದ್ದೇ ಆದಲ್ಲಿ, ಡೇವಿಡ್ ಹೆಡ್ಲೀಯ ಹಸ್ತಾಂತರಕ್ಕೆ ಮನವಿ ಮಾಡಲು ಭಾರತಕ್ಕೆ ಹೊಸ ದಾರಿ ಸಿಕ್ಕಂತಾಗುತ್ತದೆ.

ಇದನ್ನೂ ಓದಿ:ವಿಶ್ವದ ಅತಿ ದೊಡ್ಡ ಟ್ರಾಫಿಕ್ ಜಾಮ್ ಆಗಿದ್ದು ಎಲ್ಲಿ ಗೊತ್ತಾ? ಕ್ಲಿಯರ್ ಆಗೋಕೆ ಎಷ್ಟು ದಿನಗಳು ಬೇಕಾದ್ವು?

ಯುಎಸ್​ನಲ್ಲಿ ರಾಣಾ ಬಂಧನವಾಗಿದ್ದೇ ಭಾರತದ ಮನವಿ ಮೇರೆಗೆ. ಯುಎಸ್​ಗೆ ತಹವ್ವುರ್​ ರಾಣಾನನ್ನು ಹಸ್ತಾಂತರಿಸುವಂತೆ ಭಾರತ ಮನವಿ ಮಾಡಿತ್ತು. 26/11ರ ದಾಳಿಯಲ್ಲಿ ಈತನ ಕೈವಾಡ ಇರುವ ಬಗ್ಗೆ ಮಾಹಿತಿ ನೀಡಿತ್ತು. ಹೀಗಾಗಿಯೇ ಯುಎಸ್​ನಲ್ಲಿ ರಾಣಾನನ್ನು ಬಂಧಿಸಲಾಗಿತ್ತು. ಸದ್ಯ ಮೂಲಗಳು ಹೇಳುವ ಪ್ರಕಾರ ರಾಣಾನನ್ನು ಕರೆದುಕೊಂಡು ಬರಲು ಅವಶ್ಯಕವಿರುವ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲು ಶುರು ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment