ಮದ್ವೆ ಆದ ಮೇಲೆ ಮಾಜಿ ಪ್ರಿಯತಮನೊಂದಿಗೆ ಪ್ರೀತಿ, ಪ್ರೇಮ, ಪ್ರಣಯ.. ವಿಷಯ ತಿಳಿದ ಗಂಡ ಮಾಡಿದ್ದೇನು?

author-image
Gopal Kulkarni
Updated On
ಇದೆಂಥಾ ಅನಿಷ್ಟ ಪದ್ಧತಿ! ಇಲ್ಲಿ ಬಾಡಿಗೆಗೆ ಸಿಗುತ್ತಾರಂತೆ ಹೆಣ್ಣುಮಕ್ಕಳು! ಏನಿದು ಸ್ಟೋರಿ?
Advertisment
  • ಪತ್ನಿಯ ಪರಪುರುಷನ ಸಂಗದ ಸ್ಟೋರಿ ಕಂಡ ಗಂಡ ಮಾಡಿದ್ದೇನು?
  • ಹಲವು ಸಿನಿಮಾಗಳನ್ನು ನೆನಪಿಸುತ್ತೆ ಪತಿ ಮಾಡಿದ ಈ ತ್ಯಾಗದ ಕಥೆ
  • ಇದು ಆದರ್ಶವೋ, ದುರಾದೃಷ್ಟವೋ? ಪತಿ ಕಾರ್ಯಕ್ಕೆ ಎಲ್ಲರ ಮೆಚ್ಚುಗೆ

ಪಾಟ್ನಾ: ನೀವು ಕನ್ನಡದಲ್ಲಿ ಕಾಶಿನಾಥ್ ಅವರ ಲವ್ ಮಾಡಿ ನೋಡು ಸಿನಿಮಾವನ್ನೋ ಅಥವಾ ಹಿಂದಿಯಲ್ಲಿ ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾವನ್ನೋ ನೋಡಿದ್ದೀರಾ. ಪತಿ ತನ್ನ ಮಡದಿಯನ್ನು ಆಕೆಯ ಪ್ರೇಮಿಯೊಂದಿಗೆ ಸೇರಿಸಲು ಅದೆಷ್ಟು ಪ್ರಯಾಸ ಪಡುತ್ತಾನೆ, ಅವಳ ಖುಷಿಗಾಗಿ ಹೋರಾಡುತ್ತಾನೆ. ಕೊನೆಗೆ ಚಿತ್ರದ ನಾಯಕಿ ದಾಂಪತ್ಯದ ಮೌಲ್ಯಗಳನ್ನು ಅರಿತು ಪ್ರೇಮಿಯನ್ನು ತೊರೆದು ಪತಿಯನ್ನೇ ಅರಸಿ ಬರುತ್ತಾಳೆ. ಸೇಮ್ ಇದೇ ಮಾದರಿಯ ಕಥೆಯೊಂದು ಬಿಹಾರದಲ್ಲಿ ನಡೆದಿದೆ, ಆದ್ರೆ ಕ್ಲೈಮ್ಯಾಕ್ಸ್ ಮಾತ್ರ ಸ್ವಲ್ಪ ಚೇಂಜ್‌.

ಇದನ್ನೂ ಓದಿ:ಫ್ಲೈಓವರ್​ಗೆ ಭಯಾನಕವಾಗಿ ಬೈಕ್ ಡಿಕ್ಕಿ.. ಗಾಳಿಯಲ್ಲಿ ರೈಡರ್ಸ್​ ಹಾರಿ, ಕೆಳಗಿನ ರಸ್ತೆಗೆ ಬಿದ್ದು ಸಾವು

ಬಿಹಾರದ ರಾಮನಗರ ಅನ್ನೋ ಒಂದು ಹಳ್ಳಿಯಲ್ಲಿ 26 ವರ್ಷದ ರಾಜೇಶ್, 22 ವರ್ಷದ ಖುಷ್ಬೂಳನ್ನ ಇತ್ತೀಚೆಗೆ ಮದುವೆಯಾಗಿದ್ದ. ಆದ್ರೆ ಖುಷ್ಬೂ ತನ್ನ ಬಾಲ್ಯದ ಗೆಳೆಯ ಹಾಗೂ ಪ್ರೇಮಿಯೊಂದಿಗೆ ಅಲೆದಾಡುತ್ತಿರೋದನ್ನ, ಮನೆಯಲ್ಲಿ ಇಬ್ಬರು ಒಟ್ಟಿಗೆ ಇರೋದನ್ನ ರಾಜೇಶ್​ನ ತಂದೆ ತಾಯಿಗಳು ನೋಡಿದ್ದಾರೆ. ಇದನ್ನು ರಾಜೇಶ್ ಗಮನಕ್ಕೂ ತಂದಿದ್ದಾರೆ.

publive-image

ಇದನ್ನೂ ಓದಿ:ಫ್ಲೈಓವರ್​ಗೆ ಭಯಾನಕವಾಗಿ ಬೈಕ್ ಡಿಕ್ಕಿ.. ಗಾಳಿಯಲ್ಲಿ ರೈಡರ್ಸ್​ ಹಾರಿ, ಕೆಳಗಿನ ರಸ್ತೆಗೆ ಬಿದ್ದು ಸಾವು

ವಿಷಯ ತಿಳಿದ ರಾಜೇಶ್​ ಖುಷ್ಬೂ ಹಾಗೂ ಆಕೆಯ ಗೆಳೆಯ ಚಂದನ್ ಇಬ್ಬರನ್ನೂ ಕರೆದು ಮದುವೆ ಮಾಡಿಕೊಳ್ಳಿ ಎಂದು ಹೇಳಿದ್ದಾನೆ. ಅವನೇ ಮುಂದೆ ನಿಂತು ಮದುವೆ ಕೂಡ ಮಾಡಿದ್ದಾನೆ. ಮದುವೆಯಲ್ಲಿ ರಾಜೇಶ್​ನ ಮನೆಯವರೆಲ್ಲರೂ ಭಾಗಿಯಾಗಿದ್ದರು. ಆದ್ರೆ ರಾಜೇಶ್​ ಹಾಗೂ ಖುಷ್ಬೂ ದಾಂಪತ್ಯಕ್ಕೆ ಸಾಕ್ಷಿಯಾಗಿದ್ದ ಆ ಮಗುವನ್ನು ಮಾತ್ರ ರಾಜೇಶ್ ತಮ್ಮಲ್ಲಿಯೇ ಇಟ್ಟುಕೊಂಡಿದ್ದಾರೆ. ನಮ್ಮ ಮನೆಗೆ ಅಮೂಲ್ಯವಾಗಿರೋದು ಏನಾದ್ರೂ ಇದ್ರೆ ಅದು ಈ ಮಗು ಎಂದು ಹೇಳಿದ್ದಾರೆ. ಮದುವೆಯಾದ ಬಳಿಕ ಖುಷ್ಬೂ ರಾಜೇಶ್​ ಗುಣವನ್ನು ಹಾಡಿ ಹೊಗಳಿದ್ದಾಳೆ, ನಾನು ಬದುಕಿರುವರೆಗೂ ರಾಜೇಶ್​ಗೆ ಋಣಿಯಾಗಿರುತ್ತೇನೆ ಎಂದು ಹೇಳಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment