/newsfirstlive-kannada/media/post_attachments/wp-content/uploads/2024/07/Justice-for-Nilesh-rai.jpg)
ನವದೆಹಲಿ: ಈ ಹುಡುಗನಿಗೆ ಇನ್ನೂ ಕೇವಲ 26 ವರ್ಷ. ಕಣ್ಣಲ್ಲಿ ಭವಿಷ್ಯದ ಬಗ್ಗೆ ಸಾವಿರಾರು ಕನಸಿಟ್ಟುಕೊಂಡಿದ್ದ ಯುವಕ. ಗುರಿಯನ್ನು ಬೆನ್ನಟ್ಟುವ ಸಲುವಾಗಿ ಊರು ಬಿಟ್ಟು ಬಂದು ದೆಹಲಿಯಲ್ಲಿ ಪಿಜಿಯೊಂದರಲ್ಲಿ ಬದುಕನ್ನೇ ಓದಿಗೆ ಪಣಕ್ಕಿಟ್ಟು ಬಂದವನು. ಐಎಎಸ್ಗಾಗಿ ಭರ್ಜರಿ ತಯಾರಿ ನಡೆಸಿದ್ದ. ಸ್ಟಡಿ ಸೆಷನ್ ಅನ್ನೋದು ಮುಗಿದ ಮೇಲೆ ತಾನು ವಾಸವಿದ್ದ ಸೌತ್ ಪಟೇಲ್ನಗರದ ಪಿಜಿಯಿಂದ ಕೂಗಳತೆ ದೂರದಲ್ಲಿದ್ದ ಲೈಬ್ರರಿಗೆ ಹೋಗಿ ಮತ್ತೆ ತನ್ನ ಅಧ್ಯಯನ ಮುಂದವರಿಸುತ್ತಿದ್ದ. ವಿಧಿಗೆ ಅದ್ಯಾಕೆ ಹೊಟ್ಟೆ ಕಿಚ್ಚು ಬಂತೋ ಗೊತ್ತಿಲ್ಲ. ಸಾವಿರಾರು ಕನಸು ಹೊತ್ತಿದ್ದ ಯುವಕ ಲೈಬ್ರರಿಗೆ ಹೋದವನು ವಾಪಸ್ ಬರುವಾಗ ಪಿಜಿ ಹತ್ತಿರ ಇರುವ ಗೇಟ್ ಹಿಡಿದಿದ್ದೇ ಒಂದು ಕಾರಣವಾಗಿ ದುರಂತ ಅಂತ್ಯ ಕಂಡಿದ್ದಾನೆ.
ಇದನ್ನೂ ಓದಿ: VIDEO: ಕಣ್ಣೆದುರೇ ವಿಮಾನ ಪತನ.. 18 ಮಂದಿ ಭಸ್ಮ.. ಬದುಕಿ ಬಂದ ಪೈಲಟ್
ಮೇಲಿನ ಈ ಫೋಟೋದಲ್ಲಿರುವ ಯುವಕನ ಹೆಸರು ನಿಲೇಶ್ ರೈ. ಈ ಬಾರಿಯ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿದ್ದ. ಸೋಮವಾರ ದಿನ ಲೈಬ್ರರಿಯಿಂದ ಪಿಜಿಗೆ ಬರುವಾಗ ದುರಂತವೊಂದು ನಡೆದು ಹೋಗಿದೆ. ಈಗ ದೆಹಲಿಯಲ್ಲಿ ಭೀಕರ ಮಳೆ ಬೀಳುತ್ತಿದೆ. ಮೈಯನ್ನೇ ಸುಡುತ್ತಿದ್ದ ಬಿಸಿಲು ಮಾಯವಾಗಿ ತಂಪು ಆವರಿಸಿಕೊಂಡಿದೆ. ದೆಹಲಿಯಲ್ಲಿ ಮಳೆಗಾಲ ಅಂದ್ರೆ ಮರಗಳು ಉರುಳಿ ಬೀಳುವುದು ವಿದ್ಯುತ್ ತಂತಿಗಳು ಕಡಿದು ಬೀಳುವುದು ಸಾಮಾನ್ಯ. ದೆಹಲಿಯ ಪಟೇಲ್ ನಗರದಲ್ಲಿ ಸೋಮವಾರವು ಅದೇ ಆಗಿದೆ. ನಿಲೇಶ್ ರೈ ವಾಸವಿದ್ದ ಪಿಜಿ ಬಳಿ ನೀರು ನಿಂತಿದ್ದು ಆ ನೀರಿನಲ್ಲಿ ವಿದ್ಯುತ್ ತಂತಿಯೊಂದು ಕಡಿದು ಬಿದ್ದಿತ್ತು. ಲೈಬ್ರರಿಯಿಂದ ಪಿಜಿಗೆ ಬಂದ ಯುವಕ ಒಣ, ಒಣ ಅನಿಸುವ ರಸ್ತೆಯ ಮೇಲೆ ಕಾಲಿಡುತ್ತಾ ಬಂದು ಪಿಜಿ ಹತ್ತಿರ ಇರುವ ಕಟ್ಟಡದ ಕಬ್ಬಿಣ ಗೇಟ್ ಹಿಡಿದುಕೊಂಡಿದ್ದಾನೆ. ಕೂಡಲೇ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಇದನ್ನೂ ಓದಿ:ಕುಡಿದು ಬಂದು ಪತ್ನಿ ಕುತ್ತಿಗೆಗೆ ಚಾಕು ಇರಿದ ಪತಿ.. ಇಷ್ಟಕ್ಕೆಲ್ಲಾ ಕಾರಣ ಏನು ಗೊತ್ತಾ?
ಘಟನಾ ಸ್ಥಳಕ್ಕೆ ಬಂದ ಡಿಸಿಪಿ ಹರ್ಷ ಅವರು ಹೇಳುವ ಪ್ರಕಾರ ಮಧ್ಯಾಹ್ನ ಸುಮಾರು 2.30ರ ಸಮಯಕ್ಕೆ ನಮಗೆ ಕಾಲ್ ಬಂತು. ನಮ್ಮ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದಾಗ ಯುವಕನಿಗೆ ವಿದ್ಯುತ್ ಶಾಕ್ ತಗುಲಿದ್ದು ಗೊತ್ತಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಆದ್ರೆ ಆರ್ ಎಂ ಆಸ್ಪತ್ರೆಯ ವೈದ್ಯರು ಅವನು ಮೃತಪಟ್ಟಿರುವುದಾಗಿ ಹೇಳಿದ್ರು ಎಂದು ತಿಳಿಸಿದ್ದಾರೆ .
ಗೆಳೆಯ ಕಣ್ಣೆದುರೇ ಸಾಯುತ್ತಿದ್ದರು ನಿಸ್ಸಾಹಯಕರಾದ ಸ್ನೇಹಿತರು
ಅದೇ ಪಿಜಿಯಲ್ಲಿ ನಿಲೇಶ್ ಜೊತೆ ವಾಸ ಮಾಡುತ್ತಿದ್ದ ಆತನ ಸ್ನೇಹಿತ ಅಭಿಷೇಕ್ ಸಿಂಗ್ ತಮ್ಮ ನಿಸ್ಸಾಹಯಕತೆಯನ್ನು ಮಾಧ್ಯಮಗಳೆದುರು ತೋಡಿಕೊಂಡು ದುಃಖಿಸಿದ್ದಾರೆ. ಅವನಿಗೆ ವಿದ್ಯುತ್ ಶಾಕ್ ತಗುಲಿದ್ದನ್ನು ನೋಡಿ ನಾವು ಓಡಿ ಹೋದೆವು. ಸಹಾಯಕ್ಕಾಗಿ ಜನರನ್ನು ಕೂಗಿ ಕೂಗಿ ಕರೆದೆವು. ಕಟ್ಟಿಗೆಯಿಂದ ಕೋಲಿನಿಂದ ಅವನನ್ನು ನೂಕಿ ಪಾರು ಮಾಡಲು ನೋಡಿದೆವು. ಆದ್ರೆ, ಅಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು, ನಾವು ನಿಸ್ಸಾಹಯಕರಾಗಿ ನಮ್ಮ ಗೆಳೆಯ ಸಾವನ್ನು ಕಣ್ಣಾರೆ ನೋಡಿದೆವು ಎಂದು ದುಃಖ ತೋಡಿಕೊಂಡಿದ್ದಾರೆ,
ಇದನ್ನೂ ಓದಿ:ಪ್ರೀತಿ, ಪ್ರೇಮ ಮದುವೆ.. ಶಿವಮೊಗ್ಗದಲ್ಲಿ ಬೆಚ್ಚಿ ಬೀಳಿಸಿದ ಯುವತಿಯ ಬರ್ಬರ ಹತ್ಯೆ ಪ್ರಕರಣ; ಆಗಿದ್ದೇನು?
ಯಾರು ಈ ನಿಲೇಶ್ ರೈ?
ಯುಪಿಎಸ್ಸಿ ಅಧ್ಯಯನಕ್ಕಾಗಿ ದೆಹಲಿಗೆ ಬಂದಿದ್ದ ನಿಲೇಶ್ ಮೂಲತಃ ಉತ್ತರಪ್ರದೇಶದ ಘಾಜಿಪುರದವನು ಕಳೆದ ಮೂರು ಬಾರಿ ಪ್ರಿಲಿಮನರಿ ಎಕ್ಸಾಂ ಬರೆದಿದ್ದ ನಿಲೇಶ್ ಪಾಸ್ ಆಗಿರಲಿಲ್ಲ. ಈ ಬಾರಿ ಪ್ರಿಲಿಮನರಿ ಕ್ಲಿಯರ್ ಮಾಡಿದ್ದ ಹೀಗಾಗಿ ಮೇನ್ಸ್ ಪರೀಕ್ಷೆಗಾಗಿ ತಯಾರಿ ನಡೆಸಿದ್ದ. ಬೆಂಗಳೂರಿನ ಐಐಎಸ್ಸಿಯಲ್ಲಿ ಸಿವಿಲ್ ಇಂಜನಿಯರಿಂಗ್ ಮುಗಿಸಿದ್ದ ಹುಡುಗ, ಐಎಎಸ್ ಅಧಿಕಾರಿಯಾಗಬೇಕು ಅನ್ನೋ ಕನಸು ಕಟ್ಟಿಕೊಂಡಿದ್ದ. ನಿಲೇಶ್ ತಂದೆ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದು ಮಗನ ಸಾವಿನ ಸುದ್ದಿ ಕೇಳಿ ಶಾಕ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ