ಹೃದಯ ಹಿಂಡಿದ ದೃಶ್ಯ ಇದು! 7 ದಿನದ ಹಿಂದೆ ಮದ್ವೆ ಆಗಿತ್ತು.. ಪತ್ನಿ ಎದುರಲ್ಲೇ ಪ್ರಾಣಬಿಟ್ಟ ದೇಶ ಸೇವಕ

author-image
Veena Gangani
Updated On
ಹೃದಯ ಹಿಂಡಿದ ದೃಶ್ಯ ಇದು! 7 ದಿನದ ಹಿಂದೆ ಮದ್ವೆ ಆಗಿತ್ತು.. ಪತ್ನಿ ಎದುರಲ್ಲೇ ಪ್ರಾಣಬಿಟ್ಟ ದೇಶ ಸೇವಕ
Advertisment
  • ಹನಿಮೂನ್​ಗಾಗಿ ಹೋಗಿದ್ದ ವೇಳೆ ಗುಂಡು ಹಾರಿಸಿದ ಉಗ್ರರು
  • ಕೇವಲ 7 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ದಂಪತಿ
  • ಭಾರತೀಯ ನೌಕಾಪಡೆ ಅಧಿಕಾರಿ ಮೇಲೆ ಉಗ್ರರ ಅಟ್ಟಹಾಸ

ಜಮ್ಮು ಕಾಶ್ಮೀರ: ಕಣಿವೆ ನಾಡಿನಲ್ಲಿ ಉಗ್ರರು ಮತ್ತೆ ಪೈಶಾಚಿಕ ಕೃತ್ಯ ನಡೆಸಿದ್ದಾರೆ. ಒಬ್ಬರಲ್ಲ, ಇಬ್ಬರಲ್ಲ ಒಟ್ಟು 26 ಪ್ರವಾಸಿಗರ ಮೇಲೆ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿ ಜೀವ ತೆಗೆದಿದ್ದಾರೆ. ಭೀಕರ ಕೃತ್ಯದಲ್ಲಿ ಗಾಯಗೊಂಡವರು ಅದೆಷ್ಟೋ. ಈ ರಾಕ್ಷಸೀ ಕೃತ್ಯದಲ್ಲಿ ಓರ್ವ ದೇಶ ಸೇವಕ ನೌಕಾಸೇನಾ ಸಿಬ್ಬಂದಿ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಬೇಸರ ವಿಚಾರ ಏನೆಂದರೆ ಅವರಿಗೆ ಕೇವಲ 7 ದಿನದ ಹಿಂದಷ್ಟೇ ಮದುವೆ ಆಗಿತ್ತು.. ಹನಿಮೂನ್ ಅಂತಾ ಬಂದು ಜೀವ ಕಳೆದುಕೊಂಡಿದ್ದಾರೆ..

ಇದನ್ನೂ ಓದಿ:ಉಗ್ರರ ಗುಂಡಿನ ದಾಳಿ.. ಪ್ರಾಣ ಬಿಟ್ಟ ಮಗನ ಬರುವಿಕೆಗಾಗಿ ಕಾದು ಕುಳಿತ ತಾಯಿ

publive-image

ಹೆಸರು ವಿನಯ್ ನರ್ವಾಲ್ ಜೀವ ಕಳೆದುಕೊಂಡ ನೌಕಾಪಡೆಯ ಅಧಿಕಾರಿ. ವಯಸ್ಸು ಕೇವಲ 26. ಕಳೆದ 7 ದಿನಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದರು. ಏಪ್ರಿಲ್ 19ಕ್ಕೆ ಆರತಕ್ಷತೆ ಮುಗಿಸಿದ್ದ ನರ್ವಾಲ್ ದಂಪತಿ, ನಂತರ ಹನಿಮೂನ್​​ಗೆ ಅಂತಾ ಜಮ್ಮು-ಕಾಶ್ಮೀರಕ್ಕೆ ತೆರಳಿತ್ತು. ಅಂತೆಯೇ ಅನಂತಪುರ ಜಿಲ್ಲೆಯ ಪಹಲ್ಗಾಮ್​​ನಲ್ಲಿ ಇಬ್ಬರು ಭೇಲ್ ಪುರಿ ತಿನ್ನುತ್ತಿದ್ದಾಗ ಪೈಶಾಚಿಕ ಕೃತ್ಯ ನಡೆದಿದೆ.


">April 22, 2025

publive-image

ಇದೇ ಶಾಕ್​ನಲ್ಲಿ ಮಾತಾಡಿದ ವಿನಯ್ ನರ್ವಾಲ್ ಪತ್ನಿ, ನಾವು ಭೇಲ್ ಪುರಿ ತಿನ್ನುತ್ತಿದ್ದೆವು. ಅಲ್ಲಿಗೆ ಬಂದ ಉಗ್ರ ಪತಿಯ ಮೇಲೆ ದಾಳಿ ಮಾಡಿದ ಎಂದು ಕಣ್ಣೀರು ಇಟ್ಟಿದ್ದಾಳೆ. ಮೃತ ವಿನಯ್​ ನರ್ವಾಲ್ ನೌಕಾಪಡೆಯ ಅಧಿಕಾರಿ. ಕಳೆದ ಎರಡು ವರ್ಷಗಳಿಂದ  ಕೊಚ್ಚಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಏಪ್ರಿಲ್ 16 ರಂದು ವಿನಯ್​ ನರ್ವಾಲ್​ ಮದುವೆ ಆಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment