newsfirstkannada.com

ಎಲೆಕ್ಷನ್ ಹೊತ್ತಲ್ಲೇ ವಿಜಯಪುರದಲ್ಲಿ ನೆತ್ತರು.. ತಲೆ ಮೇಲೆ ಕಲ್ಲು ಎತ್ತಾಕಿ ಯುವಕನ ಬರ್ಬರ ಕೊಲೆ; ಕಾರಣವೇನು?

Share :

Published April 11, 2024 at 9:14pm

  ವಿಜಯಪುರ ನಗರದ ಜಾಮೀಯಾ ಮಸೀದಿ ಬಳಿ ನಡೆದ ಯುವಕನ ಕೊಲೆ

  ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ಎಸ್ಪಿ ಋಷಿಕೇಶ್ ಸೋನಾವನೆ ಹಾಗೂ ಪೊಲೀಸ್‌

  ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್​ ದಾಖಲು

ವಿಜಯಪುರ: ಲೋಕಸಭಾ ಚುನಾವಣೆ ರಂಗೇರಿರುವ ಸಮಯ ಹಾಗೂ ರಂಜಾನ್‌ ಹಬ್ಬದ ದಿನವೇ ವಿಜಯಪುರದಲ್ಲಿ ಬರ್ಬರ ಹತ್ಯೆಯಾಗಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನನ್ನು ಬರ್ಬರ ಹತ್ಯೆ ಮಾಡಿರೋ ಘಟನೆ ನಗರ ಜಾಮೀಯಾ ಮಸೀದಿ ಬಳಿ ನಡೆದಿದೆ. ರಜೀನ್ ಜಮಾದಾರ್ (27) ಕೊಲೆಯಾದ ಯುವಕ.

ಇದನ್ನೂ ಓದಿ: ಕಲಬುರಗಿಗೆ ಕೊನೆಗೂ ತಂಪೆರದ ವರುಣ; ಬಿಸಿಲೂರಲ್ಲಿ ಮಳೆಗಾಲದಂತೆ ಗುಡುಗಿದ ಮಳೆರಾಯ!

ಹಳೆಯ ವೈಷಮ್ಯದ ಕಾರಣದಿಂದ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಮೃತ ರಜೀನ್ ಜಮಾದಾರ್ ನಗರದ ಪೇಟಿ ಬಾವಡಿ ನಿವಾಸಿ. ರಜಿನ್ ಜಮಾದಾರ ಹೈದರ್ ಅಲಿ ಗುಂಪಿನಲ್ಲಿ ಗುರ್ತಿಸಿ ಕೊಂಡಿದ್ದ. ಎರಡು ಗುಂಪುಗಳ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರಬಹುದು ಎನ್ನಲಾಗಿದೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಎಸ್ಪಿ ಋಷಿಕೇಶ್ ಸೋನಾವನೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕೊಲೆ ಕೇಸ್​ ಸಂಬಂಧ ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಲೆಕ್ಷನ್ ಹೊತ್ತಲ್ಲೇ ವಿಜಯಪುರದಲ್ಲಿ ನೆತ್ತರು.. ತಲೆ ಮೇಲೆ ಕಲ್ಲು ಎತ್ತಾಕಿ ಯುವಕನ ಬರ್ಬರ ಕೊಲೆ; ಕಾರಣವೇನು?

https://newsfirstlive.com/wp-content/uploads/2024/04/Vijayapura-Murder.jpg

Load More