/newsfirstlive-kannada/media/post_attachments/wp-content/uploads/2025/06/Ahmedabad-plane-crash-11.jpg)
ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಭೀಕರ ವಿಮಾನ ದುರಂತ ನಡೆದುಬಿಟ್ಟಿದೆ. ಪೈಲಟ್, ಸಿಬ್ಬಂದಿ ಸೇರಿ 242 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಪತನವಾಗಿದೆ. ಟೇಕ್ ಆಫ್ ಆದ ಬೆನ್ನಲ್ಲೇ ಅನತಿ ದೂರದಲ್ಲಿದ್ದ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಮೇಲೆ ವಿಮಾನ ಬಿದ್ದಿದೆ.
ಇದನ್ನೂ ಓದಿ: ಅಪಘಾತದ ನಂತರ ಎದ್ದು ನಡೆಯಲು ಪ್ರಾರಂಭಿಸಿದ.. ಏರ್ ಇಂಡಿಯಾ ದುರಂತದ ವಿಡಿಯೋ..
ಇದು ಇತ್ತೀಚೆಗೆ ಸಂಭವಿಸಿದ ಅತ್ಯಂತ ದೊಡ್ಡ ವಿಮಾನ ದುರಂತವಾಗಿದ್ದು, ಜಗತ್ತಿಗೆ ಜಗತ್ತೇ ಜೀವಕಳೆದುಕೊಂಡವರಿಗಾಗಿ ಕಂಬನಿ ಮಿಡಿದಿದೆ. ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್‌ವಿಕ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಪತನಗೊಂಡಿದೆ. ಈ ನತದೃಷ್ಟ ವಿಮಾನದಲ್ಲಿ 169 ಭಾರತೀಯರು, 61 ವಿದೇಶಿಯರು, ಇಬ್ಬರು ಪೈಲಟ್, 10 ಸಿಬ್ಬಂದಿ ಸೇರಿ 242 ಮಂದಿ ಪ್ರಯಾಣಿಸುತ್ತಿದ್ದರು. ವಿಮಾನ ಅಪ್ಪಳಿಸಿದ ಹಾಸ್ಟೆಲ್‌ನಲ್ಲೂ ಜೀವಹಾನಿಯಾಗಿದೆ. ಇದುವರೆಗೆ ಅಧಿಕಾರಿಗಳು 265 ಮೃತದೇಹ ಪತ್ತೆ ಹಚ್ಚಿ, ಆಸ್ಪತ್ರೆಗೆ ರವಾನಿಸಿದ್ದಾರೆ.
ದುರಂತದ ಸ್ಥಳಕ್ಕೆ ಕೇಂದ್ರ ಗೃಹಸಚಿವ ಭೇಟಿ, ಪರಿಶೀಲನೆ
ವಿಮಾನ ದುರಂತದ ಸುದ್ದಿ ತಿಳಿಯುತ್ತಿದ್ದಂತೆ ಕೇಂದ್ರ ಗೃಹಸಚಿವ ಅಮಿತ್ ಶಾ, ವಿಮಾನ ಪತನಗೊಂಡ ಸ್ಥಳಕ್ಕೆ ದೌಡಾಯಿಸಿ, ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಮಿತ್ ಶಾ ಮಾತನಾಡಿದ್ದು, ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನ ಇತ್ತು. ಹೀಗಾಗಿ ರಕ್ಷಣಾ ಕಾರ್ಯ ಅಸಾಧ್ಯವಾಗಿತ್ತು ಎಂದಿದ್ದಾರೆ. ಇನ್ನು ಬಿಟ್ರಿಷ್ ಅಧಿಕಾರಿಗಳ ನಿಯೋಗವು ಕೂಡ ತಡ ರಾತ್ರಿಯೇ ಬಂದು ಪರಿಶೀಲನೆ ನಡೆಸಿದೆ..
ಇದನ್ನೂ ಓದಿ: ಮದುವೆ ಬಳಿಕ ಮೊದಲ ಬಾರಿ ಪತಿಯ ಭೇಟಿಗೆ ಅಂತಾ ಲಂಡನ್ ವಿಮಾನ ಹತ್ತಿದ್ದಳು.. ಕೊನೆಯ ವಿಡಿಯೋ
ಇನ್ನು ವಿಮಾನ ದುರಂತದಲ್ಲಿ ಮೃತಪಟ್ಟಿರುವ ಒಬ್ಬಬ್ಬರದ್ದು ಒಂದೊಂದು ಕಥೆ ಇದೆ. ಬದುಕಿನ ಬಂಡಿ ಸಾಗಿಲು.. ಹೊಸ ಕನಸಗಳನ್ನು ಹೊತ್ತು. ವಿಮಾನದಲ್ಲಿ ಕುಳಿತಿದ್ದ ರಾಜಸ್ಥಾನದ ಒಂದೇ ಕುಟುಂಬದ ಐವರು ಪ್ರಾಣ ಬಿಟ್ಟಿದ್ದಾರೆ. ರಾಜಸ್ಥಾನದ ಮೂಲದ ಪ್ರತೀಕ್ ಜೋಶಿ-ಡಾ.ಕೋಮಿ ವ್ಯಾಸ್ ಮೂವರು ಮಕ್ಕಳ ಜೊತೆ ಹೊಸ ಬದುಕಿನ ಕನಸು ಹೊತ್ತು ವಿಮಾನ ಏರಿದ್ದರು. ಮಕ್ಕಳ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ರು.. ಆದ್ರೆ ಈ ಸುಂದರ ಕುಟುಂಬವನ್ನು ದುರ್ವಿದಿ ದೂರ ಮಾಡಿದೆ. ವಿಮಾನ ದುರಂತದಲ್ಲಿ ಐವರು ಬಲಿಯಾಗಿದ್ದಾರೆ.
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಖುಷ್ಬೂ ಸಾವು
ಏರ್ ಇಂಡಿಯಾ ವಿಮಾನ ದುರಂತದಲ್ಲಿ ಖುಷ್ಬೂ ಎಂಬ ಮಹಿಳೆ ಮೃತಪಟ್ಟಿದ್ದಾಳೆ. ಈಕೆ ವಿಮಾನ ನಿಲ್ದಾಣದ ಒಳಗಡೆ ಹೋಗುವ ಕೊನೆ ದೃಶ್ಯ ಸೆರೆ ಆಗಿದ್ದು, ಮಗಳು ಖುಷ್ಬೂ ಜೊತೆ ಮದನ್ ಸಿಂಗ್ ರಾಜ್‌ಪುರೋಹಿತ್ ಕೊನೆಯ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ
ಇದನ್ನೂ ಓದಿ: ‘ನನಗೆ ಎಚ್ಚರವಾದಾಗ, ನನ್ನ ಸುತ್ತಲು..’ ದುರಂತದ ಕ್ಷಣ ಬಿಚ್ಚಿಟ್ರು ಬದುಕಿ ಬಂದ ಗಟ್ಟಿ ಜೀವ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ