ಶಾಲೆ ಮೇಲೆ ಬಿದ್ದ ಯುದ್ಧ ವಿಮಾನ.. ಮಕ್ಕಳು ಶಿಕ್ಷಕರು ಸೇರಿ 20 ಮಂದಿಯ ದಾರುಣ ಅಂತ್ಯ..

author-image
Ganesh
Updated On
ಶಾಲೆ ಮೇಲೆ ಬಿದ್ದ ಯುದ್ಧ ವಿಮಾನ.. ಮಕ್ಕಳು ಶಿಕ್ಷಕರು ಸೇರಿ 20 ಮಂದಿಯ ದಾರುಣ ಅಂತ್ಯ..
Advertisment
  • ಧಗಧಗ ಹೊತ್ತಿ ಉರಿದ F-7 BGI ತರಬೇತಿ ವಿಮಾನ
  • ವಿಮಾನದ ಬೆಂಕಿ ಜ್ವಾಲೆಗೆ ಮುಗಿಲೆತ್ತರಕ್ಕೆ ಮುಟ್ಟಿದ್ದ ಹೊಗೆ
  • ದಿಕ್ಕಾಪಾಲಾಗಿ ವಿದ್ಯಾರ್ಥಿಗಳು ಓಡಿದ ವಿದ್ಯಾರ್ಥಿಗಳು

ಇತ್ತೀಚಿನ ದಿನಗಳಲ್ಲಿ ವಿಮಾನ ದುರಂತಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಗುಜರಾತ್​​ನ ಅಹಮದಾಬಾದ್‌ ವಿಮಾನ ದುರಂತದಲ್ಲಿ ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದರು. ಇದೀಗ ಅಂತಹದ್ದೇ ಮತ್ತೊಂದು ಘಟನೆ ಬಾಂಗ್ಲಾದೇಶದ ದೇಶದಲ್ಲಿ ಸಂಭವಿಸಿದೆ. ಭವಿಷ್ಯದ ಕನಸು ಕಂಡಿದ್ದ ವಿದ್ಯಾರ್ಥಿಗಳು, ತಿದ್ದಿ ಬುದ್ಧಿ ಹೇಳುತ್ತಿದ್ದ ಶಿಕ್ಷಕರು ಬಲಿಯಾದದ್ದು ಘೋರ ದುರಂತವಾಗಿದೆ.

ಹೊತ್ತಿ ಉರಿದ F-7 BGI ತರಬೇತಿ ವಿಮಾನ

ಕೆಲ ದಿನಗಳ ಹಿಂದೆ ಗುಜರಾತ್​ನ ಅಹಮದಾಬಾದ್​ನಲ್ಲಿ ಸಂಭವಿಸಿದ್ದು ಏರ್​ ಇಂಡಿಯಾ ದುರಂತ, ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಈ ದುರಂತದಲ್ಲಿ 270 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ... ಅದೇ ಮಾದರಿಯ ದುರಂತ ನೆರೆಯ ಬಾಂಗ್ಲಾದೇಶದಲ್ಲಿ ನಡೆದಿದೆ. ಚೀನಾ ನಿರ್ಮಿತ ಎಫ್-7 ಬಿಜಿಐ ಯುದ್ಧ ವಿಮಾನ ಶಾಲೆಯ ಮೇಲೆ ಬಿದ್ದಿದ್ದು, ಭಾರೀ ದುರಂತವೇ ನಡೆದು ಹೋಗಿದೆ.

ಇದನ್ನೂ ಓದಿ: ಆಕಾಶ್ ದೀಪ್ ಬೆನ್ನಲ್ಲೇ ಟೀಂ ಇಂಡಿಯಾಗೆ ಮತ್ತೊಂದು ಶಾಕ್.. ಸ್ಟಾರ್​ ಆಲ್​ರೌಂಡರ್ ಔಟ್..!

ಶಾಲೆ ಮೇಲೆ ಯುದ್ಧ ವಿಮಾನ ಪತನ.. ಮೃತರ ಸಂಖ್ಯೆ 20ಕ್ಕೆ ಏರಿಕೆ

ಬಾಂಗ್ಲಾದೇಶ ವಾಯುಪಡೆಯ ಚೀನಾ ನಿರ್ಮಿತ ಎಫ್-7 ತರಬೇತಿ ಜೆಟ್ ಢಾಕಾದ ಶಾಲೆಯ ಮೇಲೆ ಪತನಗೊಂಡಿದೆ. ವಿದ್ಯಾರ್ಥಿಗಳು, ಶಿಕ್ಷಕರು ಸೇರಿ ಒಟ್ಟು 20 ಮಂದಿಯ ಜೀವ ಹೋಗಿದೆ. ಈ ಘಟನೆಯಲ್ಲಿ 171 ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ, ಗಾಯಗೊಂಡವರಲ್ಲಿ 8 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.

  • F-7 BGI ಚೀನಾ ನಿರ್ಮಿತ ಬಹು-ಪಾತ್ರದ ಯುದ್ಧ ವಿಮಾನ
  • ಬಾಂಗ್ಲಾ ವಾಯುಪಡೆಗಾಗಿ ವಿಶೇಷವಾಗಿ F-7 BGI ವಿನ್ಯಾಸ
  • F-7 ಯುದ್ಧ ವಿಮಾನ MiG-21ನ ರೂಪಾಂತರ ಆವೃತ್ತಿಯಾಗಿದೆ
  • F-7 ಸರಣಿಯ ಅತ್ಯಂತ ಮುಂದುವರಿದ ಆವೃತ್ತಿ ಎಂದು ಪರಿಗಣನೆ
  • ಈ ಅಪಘಾತದಿಂದ ಚೀನಾ ವಿಮಾನದ ವಿಶ್ವಾಸಾರ್ಹತೆಗೆ ಪೆಟ್ಟು
  • ಅಪಘಾತಕ್ಕೆ ನಿಖರ ಕಾರಣ ಪತ್ತೆ ಹಚ್ಚುತ್ತಿರುವ ಅಧಿಕಾರಿಗಳು

ಮೋದಿ ಸಂತಾಪ

ಬಾಂಗ್ಲಾದೇಶದ ವಾಯುಪಡೆಯ ವಿಮಾನ ದುರಂತಕ್ಕೆ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ. ವಿಮಾನ ಅಪಘಾತದಲ್ಲಿ ಹಲವಾರು ಯುವ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಜೀವಹಾನಿಯಿಂದ ತೀವ್ರ ಆಘಾತ ಮತ್ತು ದುಃಖಿತನಾಗಿದ್ದೇನೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಬಾಂಗ್ಲಾದೇಶಕ್ಕೆ ಸಾಧ್ಯವಿರುವ ಎಲ್ಲಾ ಬೆಂಬಲ ಮತ್ತು ಸಹಾಯವನ್ನು ನೀಡಲು ಭಾರತ ಸಿದ್ಧವಾಗಿದೆ ಎಂದು ಬರೆದುಕೊಂಡಿದ್ದಾರೆ. ಬಾಳಿ ಬದುಕಬೇಕಿದ್ದ 20 ಮಂದಿ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.. ತಮ್ಮವರನ್ನ ಕಳೆದುಕೊಂಡು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.

ಇದನ್ನೂ ಓದಿ: ಸೇತುವೆಯಿಂದ ನದಿಗೆ ತಳ್ಳಿದ ಕೇಸ್​ಗೆ ಟ್ವಿಸ್ಟ್‌.. ಬಂಧನದ ಭೀತಿಯಲ್ಲಿ ತಾತಪ್ಪ, ಆತನ ಕುಟುಂಬಸ್ಥರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment