/newsfirstlive-kannada/media/post_attachments/wp-content/uploads/2024/06/mys-death.jpg)
ಮೈಸೂರು: ವರದಕ್ಷಿಣೆ ಕಿರುಕುಳ ವಿಚಾರಕ್ಕೆ ಬಾಮೈದನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರೋ ಘಟನೆ ಕುವೆಂಪು ನಗರದ ಐ ಬ್ಲಾಕ್ನಲ್ಲಿ ನಡೆದಿದೆ ಅಭಿಷೇಕ್(27) ಮೃತ ದುರ್ದೈವಿ.
[caption id="attachment_68401" align="aligncenter" width="800"] ಆರೋಪಿ[/caption]
ಇದನ್ನೂ ಓದಿ:ಅವಳಿಗೆ 34, ಅವನಿಗೆ 25; ಗರ್ಭಿಣಿ ಮಾಡಿ ಎಸ್ಕೇಪ್ ಆದ ಕಿಲಾಡಿ ಗೆಳೆಯ; ದೂರು ದಾಖಲು
ಮೃತ ಅಭಿಷೇಕ್ ತಂಗಿಯನ್ನು ತವರು ಮನೆಗೆ ಕರೆದುಕೊಂಡು ಬರಲು ನಗರದ ಕುವೆಂಪು ಐ ಬ್ಲಾಕ್ಗೆ ಹೋಗಿದ್ದ. ಇದೇ ವೇಳೆ ಅಭಿಷೇಕ್ಗೆ, ಭಾವ ರವಿಚಂದ್ರ ಚಾಕುವಿನಿಂದ ಹಲ್ಲೆ ಮಾಡಿದ್ದಾನಂತೆ. ಇದರಿಂದ ತೀವ್ರವಾಗಿ ಗಾಯಗೊಂಡ ಅಭಿಷೇಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಉಪ್ಪಿನಕಾಯಿ ಮಾರಾಟದಿಂದ ಸಾಮ್ರಾಜ್ಯ ಕಟ್ಟಿದ ಧೀಮಂತ.. ರಾಮೋಜಿ ರಾವ್ ಬದುಕಿನ ರೋಚಕ ಕಥೆ ಇಲ್ಲಿದೆ
ಇನ್ನು, ಈ ಕೊಲೆ ಬಗ್ಗೆ ಅಭಿಷೇಕ್ ತಂಗಿ ವಿದ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಎಲ್ಲಾದರೂ ಹೋದರೆ ನನ್ನ ಮೇಲೆ ಅನುಮಾನ ಪಡುತ್ತಿದ್ದರು. ಪ್ರತಿ ದಿನ ನನಗೆ ಕಿರುಕುಳ ನೀಡುತ್ತಿದ್ದರು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದೇ. ಆದರೆ ಈ ಬಗ್ಗೆ ಪೊಲೀಸರು ಕೂಡ ಏನು ಹೇಳಿಲ್ಲ. ಪೊಲೀಸರಿಗೆ ದುಡ್ಡು ಕೊಟ್ಟು ಸಮಾಧಾನ ಮಾಡುತ್ತಿದ್ದರು. ನನ್ನ ಕಾಪಾಡೋದಕ್ಕೆ ಬಂದ ಅಣ್ಣನನ್ನು ನನ್ನ ಮುಂದೆಯೇ ಕೊಲೆ ಮಾಡಿದ್ದಾರೆ. ನನ್ನ ಅಣ್ಣನನ್ನು ಕೊಲೆ ಮಾಡಿದ್ದನ್ನೂ ನಾನು ಕಣ್ಣಾರೆ ನೋಡಿದ್ದೇನೆ. ಕುಮಾರ್, ಮತ್ತೆ ರವಿಕುಮಾರ್ ಇಬ್ಬರು ಕೊಲೆ ಮಾಡಿದ್ದಾರೆ. ನಮ್ಮ ಅಣ್ಣನ ಸ್ನೇಹಿತನನ್ನು ಕೊಲೆ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ