/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಮೂಲ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
- ಹಾಸ್ಯ ಕಲಾವಿದರು, ಮಿಮಿಕ್ರಿ ಇತ್ಯಾದಿಗಳನ್ನ ಮಾಡುವವರಿಗೆ ಶುಭದಿನ
- ಇಂದು ಯಾವುದೇ ಕೆಲಸ ಮಾಡಲು ಮನಸ್ಸಿರುವುದಿಲ್ಲ
- ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಕಾಣಬಹುದು ಎಚ್ಚರಿಕೆ ಇರಲಿ
ನಿಮ್ಮ ಪ್ರೀತಿ ಪ್ರೇಮ ಇಂದು ದೂರವಾಗಬಹುದು - ಸಾಯಂಕಾಲದ ವೇಳೆಗೆ ಅನಿರೀಕ್ಷಿತವಾಗಿ ಹಣ ಸಿಗುವ ಸಾಧ್ಯತೆ
- ಪಂಚಮುಖಿ ಆಂಜನೇಯನ ಸ್ಮರಣೆ ಮಾಡಿ
ವೃಷಭ
- ಬಾಡಿಗೆ ಮನೆಯಲ್ಲಿರುವವರಿಗೆ ಶುಭದಿನ
- ಸ್ವಂತ ಮನೆ ಕಟ್ಟುವ, ಕೊಳ್ಳುವ ವಿಚಾರವಾಗಿ ಚರ್ಚೆ ನಡೆಯುತ್ತವೆ
- ಮಧ್ಯಾಹ್ನದ ವೇಳೆಗೆ ಮನೆಯ ವಿಚಾರವಾಗಿ ಶುಭ ಸೂಚನೆಯು ಸಿಗುತ್ತದೆ
- ಇಂದು ತುಂಬಾ ಸಂತೋಷದ ದಿನ
- ಆಲಸ್ಯವೆಂಬುದು ಮನುಷ್ಯನ ಶರೀರದಲ್ಲಿಯೇ ಅಡಗಿರುವ ದೊಡ್ಡ ಶತ್ರು
- ಮಾನಸಿಕವಾಗಿ ಯಾವುದೇ ಬದಲಾವಣೆ ಇಲ್ಲದೆ ತಟಸ್ಥರಾಗಿರುತ್ತೀರಿ
- ಭೂದೇವಿಯನ್ನ ಪ್ರಾರ್ಥನೆ ಮಾಡಿ
ಮಿಥುನ
- ನಿಮ್ಮ ಕುಟುಂಬದಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಜಗಳ ಸಾಧ್ಯತೆ
- ನಿಮ್ಮ ಕೆಲಸ ಕಾರ್ಯಗಳಲ್ಲಿ ಆಲಸ್ಯ ಬೇಡ
- ಇಂದು ತಾಳ್ಮೆಯಿಂದಿರಿ, ಕೋಪದಿಂದ ಅನಾಹುತಕ್ಕೆ ಕಾರಣವಾಗಬಹುದು
- ನಿಮ್ಮ ಜೀವನದಲ್ಲಿ ಹಲವು ರೀತಿಯ ಬದಲಾವಣೆಗಳಾಗುವ ಸಾಧ್ಯತೆ
- ನಿಮ್ಮ ಉದ್ಯೋಗ ಬದಲಾಗಿ, ಬಡ್ತಿ ದೊರೆಯಬಹುದು, ಸಂಬಳ ಹೆಚ್ಚಾಗಬಹುದು
- ನಿಮ್ಮ ಪಿತೃದೇವತೆಗಳನ್ನ ಪ್ರಾರ್ಥನೆ ಮಾಡಿ
ಕಟಕ
- ಇಂದು ಆರೋಗ್ಯದ ದೃಷ್ಟಿಯಿಂದ ಸಮಸ್ಯೆ ಸಾಧ್ಯತೆ, ಗಮನವಿರಲಿ
- ನಿಮ್ಮ ಜೀವನದಲ್ಲಿ ನಗು, ಹಾಸ್ಯಗಳಿರಲಿ ಎಂದು ಹಂಬಲಿಸುತ್ತೀರಿ
- ಯಾವುದೇ ಆರೈಕೆ ಮಾಡಿಕೊಳ್ಳದೆ ಸರಿಯಾದ ವೈದ್ಯರ ಸಲಹೆ ಪಡೆಯಿರಿ
- ಇಂದು ನಿಮ್ಮ ಮಾತು ಮೃದುವಾಗಿರಲಿ
- ಆಲಸ್ಯವೆಂಬುದು ಮನುಷ್ಯರಿಗೆ ಶರೀರದಲ್ಲಿಯೇ ಅಡಗಿರುವ ದೊಡ್ಡ ಶತ್ರು
- ವೇಣುಗೋಪಾಲನನ್ನು ಪ್ರಾರ್ಥನೆ ಮಾಡಿ
ಸಿಂಹ
- ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮೇಲಾಧಿಕಾರಿಗಳಿಂದ ಕಿರಿಕಿರಿಯಾಗಬಹುದು
- ನಿಮ್ಮ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯುತ್ತದೆ
- ಮೇಲಾಧಿಕಾರಿಗಳ ಜೊತೆ ವಾದ-ವಿವಾದ ಮಾಡದೇ ಇದ್ದರೆ ಒಳ್ಳೆಯದು
- ಹಣದ ವಿಚಾರದಲ್ಲಿ ಶಿಸ್ತುಬದ್ಧವಾಗಿದ್ದರೆ ಉತ್ತಮ
- ಯಾವುದೇ ತೀರ್ಮಾನಕ್ಕೆ ಬರದೆ ಗೊಂದಲ ಸಾಧ್ಯತೆ
- ಯಾವುದೋ ಕೀಟ ಕಚ್ಚಿ ಅಲರ್ಜಿ ನಿಮ್ಮನ್ನ ಕಾಡಬಹುದು, ಜಾಗ್ರತೆ ಇರಲಿ
- ಭಗವಂತನ ದಶಾವತಾರ ಸ್ಮರಣೆ ಮಾಡಿ
ಕನ್ಯಾ
- ಇಂದು ಯಾವುದೇ ವಿಚಾರವನ್ನು ಹೆಚ್ಚಾಗಿ ಚರ್ಚೆ ಮಾಡದಿದ್ದರೆ ಉತ್ತಮ
- ರಾಜಕಾರಣಿಗಳು ತಮ್ಮ ರಾಜತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಉತ್ತಮ ದಿನ
- ನಿಮ್ಮ ಪ್ರಾಮಾಣಿಕ ಕೆಲಸಗಳಿಂದ ಗೌರವ, ಸ್ಥಾನಬಲ ದೊರೆಯುತ್ತದೆ
- ಆದರೆ ಯಾವ ಕೆಲಸವೂ ಆಗಿರುವುದಿಲ್ಲ ಎಚ್ಚರಿಕೆವಹಿಸಿ
- ರುಚಿಯ ಹಿಂದೆ ಬಿದ್ದು ಆರೋಗ್ಯದಲ್ಲಿ ಸಮಸ್ಯೆ ಮಾಡಿಕೊಳ್ಳಬೇಡಿ
- ಮೃತ್ಯುಂಜಯನನ್ನು ಆರಾಧಿಸಿ
ತುಲಾ
- ವೃತ್ತಿಯಲ್ಲಿ, ನೌಕರಿಯಲ್ಲಿ ನಿಮ್ಮನ್ನು ದ್ವೇಷಿಸುವವರು ಹೆಚ್ಚು
- ಜನರಿಗೆ ವಿರುದ್ಧವಾದ ಕೆಲಸ ಬೇಡ
- ಆರೋಗ್ಯದ ಬಗ್ಗೆ ಕಾಳಜಿ ಇರಲಿ
- ಅಧಿಕಾರ, ಸ್ಥಾನದ ದುರುಪಯೋಗ ಬೇಡ
- ಸಂಜೆ ಸ್ನೇಹಿತರ ಜೊತೆ ಉತ್ತಮ ಚರ್ಚೆ ಮಾಡುತ್ತೀರಿ
- ಹಣದ ತೊಂದರೆಯಿಲ್ಲ - ಶುಭವಿದೆ
- ದತ್ತಾತ್ರೇಯರ ಪ್ರಾರ್ಥನೆ ಮಾಡಿ
ವೃಶ್ಚಿಕ
- ವಿಶೇಷವಾಗಿ ದೇವರ ದರ್ಶಕ್ಕೆ ದೇವಾಲಯಕ್ಕೆ ಹೋಗುವ ಸಾಧ್ಯತೆ
- ಇಂದು ನಿಮ್ಮ ಹಣಕಾಸಿನ ವಿಚಾರ ಬಗ್ಗೆ ಹೆಚ್ಚು ಚರ್ಚೆ ಸಾಧ್ಯತೆ
- ತಾವು ಪರಿಶ್ರಮದಿಂದ ಕಲೆಹಾಕಿದ ವಿಷಯಕ್ಕೆ ಮಾನ್ಯತೆ, ಗೌರವ ದೊರೆಯುವ ದಿನ
- ನಿಮ್ಮ ಮಾತಿನ ಮೇಲೆ ಹಿಡಿತವಿರಲಿ, ಇಲ್ಲದಿದ್ದರೆ ತೊಂದರೆಯಾಗಬಹುದು
- ಲಕ್ಷ್ಮೀನಾರಾಯಣ ಹೃದಯ ಸ್ತೋತ್ರ ಪಾರಾಯಣ ಮಾಡಿ
ಧನಸ್ಸು
- ಇಂದು ಸರಿಯಾದ ಸಾತ್ವಿಕವಾದ ಆಹಾರವನ್ನು ಸೇವಿಸಿ
- ಇಂದು ಸಂಶೋಧನಾ ವಿದ್ಯಾರ್ಥಿಗಳಿಗೆ ಶುಭದಿನ
- ಮನೆಯಲ್ಲಿ ಈ ಹಿಂದೆ ಖರೀದಿಸಿದ್ದ ವಸ್ತುವಿನ ಬಗ್ಗೆ ತಿಳಿದು ಕೋಪ ಬರಬಹುದು
- ನಿಮ್ಮ ಬೇಜವಾಬ್ದಾರಿಯಿಂದ ವಾಹನ ಅಪಘಾತವಾಗುವ ಸಾಧ್ಯತೆ, ಎಚ್ಚರಿಕೆ ಇರಲಿ
- ಮೇಧಾ ದಕ್ಷಿಣಾಮೂರ್ತಿಯನ್ನು ಉಪಾಸನೆ ಮಾಡಿ
ಮಕರ
- ವಿದ್ಯಾರ್ಥಿಗಳಿಗೆ ತುಂಬಾ ಆತಂಕ ಉಂಟಾಗುವ ದಿನ
- ಇಂದು ಕುಟುಂಬದಲ್ಲಿ ತುಂಬಾ ಸಂತೋಷದ ವಾತಾವರಣವಿರುತ್ತದೆ
- ಆಕಸ್ಮಿಕವಾಗಿ ಎದೆಯ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು, ಜಾಗ್ರತೆವಹಿಸಿ
- ಇಂದು ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿರಲಿ
- ತ್ವರಿತ ರುದ್ರನನ್ನ ಆರಾಧಿಸಿ
ಕುಂಭ
- ವಿದೇಶಗಳಲ್ಲಿ ಕೆಲಸ ಮಾಡುವವರಿಗೆ ತಮ್ಮ ನೌಕರಿಯಲ್ಲಿ ಅಸ್ಥಿರತೆ ಕಾಣಬಹುದು
- ಇಂದಿನ ನಿಮ್ಮ ದಿನಚರಿ ಶಿಸ್ತುಬಧ್ಧವಾಗಿ ಆರಂಭವಾಗುತ್ತದೆ
- ಆಕಸ್ಮಿಕವಾಗಿ ಮಹಾತ್ಮರ ಭೇಟಿಯಾಗಿ ಮಾರ್ಗದರ್ಶನ ಸಿಗಬಹುದು
- ಸಂಜೆ ವೇಳೆಗೆ ವಿದ್ಯಾರ್ಥಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ
- ಕುಂಭರಾಶಿಯ ಅಧಿಪತಿ ಶನಿಯನ್ನ ಪ್ರಾರ್ಥನೆ ಮಾಡಿ
ಮೀನ
- ನಿಮ್ಮ ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯವು ಏರ್ಪಡುವ ಸಾಧ್ಯತೆ
- ಜೀವನಕ್ಕಿಂತ ಜೀವಮುಖ್ಯ ಎಂದು ತಿಳಿದು ಕೆಲಸ ಮಾಡಿ
- ಯಾವುದೇ ಕಾರಣಕ್ಕೂ ಕ್ಷುಲ್ಲಕ ರಾಜಕಾರಣವನ್ನು ಮಾಡಬೇಡಿ
- ನಿಮ್ಮ ಮನಸ್ಸಿನಲ್ಲಿ ಹತ್ತು ಹಲವುಆಲೋಚನೆಗಳು ಬರುವ ಸಾಧ್ಯತೆ
- ಶ್ರೀಸೂಕ್ತ ಹೋಮ ಮಾಡಿಸಿ ಒಳ್ಳೆದಾಗುತ್ತದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ