ಆಸೆ ತೋರಿಸಿ ಮಕ್ಮಲ್​ ಟೋಪಿ.. ಲಕ್ಷ ಲಕ್ಷ ಕಳೆದುಕೊಂಡ ಜಮೀನು ಮಾಲೀಕ ಏನ್ ಮಾಡಿದ?

author-image
Bheemappa
Updated On
ಆಸೆ ತೋರಿಸಿ ಮಕ್ಮಲ್​ ಟೋಪಿ.. ಲಕ್ಷ ಲಕ್ಷ ಕಳೆದುಕೊಂಡ ಜಮೀನು ಮಾಲೀಕ ಏನ್ ಮಾಡಿದ?
Advertisment
  • ಜಮೀನಿನಲ್ಲಿ ಗುಂಡಿ ತೆಗೆದು ಹೊರಗೆ ತೆಗೆದಿರುವುದು ಏನು?
  • 11 ತಿಂಗಳು ಪೂಜೆ ಮಾಡಬೇಕೆಂದು ಮಾಲೀಕನನ್ನ ನಂಬಿಸಿದ್ದ
  • ನಿಧಿ ಆಸೆ ತೋರಿಸಿ ಮಾಲೀಕನನ್ನು ಬಲೆಗೆ ಕೆಡವಿದ್ದ ಖದೀಮ

ರಾಯಚೂರು: ಹಣದಾಸೆ, ನಿಧಿ ಆಸೆ, ಚಿನ್ನದಾಸೆ ತೋರಿಸಿ ನಯ ವಂಚಕರು ನಂಬಿಕೆ ದ್ರೋಹ ಮಾಡುತ್ತಾರೆಂದು ಎಷ್ಟು ಹೇಳಿದರೂ ಜನ ಕೇಳೋದಿಲ್ಲ. ಖದೀಮರು ತೋಡಿದ ಖೆಡ್ಡಾಕ್ಕೆ ಮತ್ತೆ ಮತ್ತೆ ಜನರು ಬೀಳುತ್ತಲೇ ಇರುತ್ತಾರೆ. ಸದ್ಯ ಇಂತಹದ್ದೆ ಒಂದು ಘಟನೆ ನಡೆದಿದ್ದು ಖದೀಮ ಲಕ್ಷ ಲಕ್ಷ ಹಣ ಪಡೆದು ಪಂಗನಾಮ ಹಾಕಿದ್ದಾನೆ. ಹಣ ಕಳೆದುಕೊಂಡ ಆಸಾಮಿ 11 ತಿಂಗಳ ಬಳಿಕ ಠಾಣೆ ಮೆಟ್ಟಿಲೇರಿದ್ದಾನೆ.

ಲಿಂಗಸುಗೂರು ತಾಲೂಕಿನ ಕೋಠಾ ಗ್ರಾಮದ ಅಲ್ಲಾಸಾಬ್ ಎಂಬುವರಿಗೆ ಕೊಪ್ಪಳದ ಗಂಗಾವತಿ ತಾಲೂಕಿನ ಉಡುಮಗಲ್ ಗ್ರಾಮದ ಶರಣಪ್ಪ ಎನ್ನುವರು ಬರೋಬ್ಬರಿ 28 ಲಕ್ಷ ರೂಪಾಯಿಗಳನ್ನು ವಂಚನೆ ಮಾಡಿದ್ದಾನೆ. ಮಧ್ಯೆರಾತ್ರಿ ಅಲ್ಲಾಸಾಬ್​ಗೆ ನಿಧಿ ಆಸೆ ತೋರಿಸಿದ್ದ ಖದೀಮ ಶರಣಪ್ಪ ಸುಮಾರು 1 ಗಂಟೆ ಸುಮಾರಿಗೆ ಜಮೀನಿನಲ್ಲಿ ಹಿತ್ತಾಳೆ ಬಿಂದಿಗೆ (ಕೊಡ) ಹೊರ ತೆಗೆದಿದ್ದನು. ಇದನ್ನು ನಂಬಿದ್ದ ಜಮೀನು ಮಾಲೀಕ ಬಂಗಾರ, ಬೆಳ್ಳಿ ಸಿಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದನು. ಇದಕ್ಕೆ ಮೊದಲೇ ಸೂತ್ರ ಹೆಣೆದಿದ್ದ ಖದೀಮ ಈ ಬಿಂದಿಗೆಯನ್ನು ಇನ್ನೂ 11 ತಿಂಗಳು ಪೂಜೆ ಮಾಡಬೇಕು ಎಂದು ಜಮೀನು ಮಾಲೀಕನಿಗೆ ನಂಬಿಸಿದ್ದನು.

publive-image

ಇದನ್ನೂ ಓದಿ:ಬೆಂಗಳೂರು ಸಂಚಾರ ವ್ಯವಸ್ಥೆಯಲ್ಲಿ ಭಾರೀ ಬದಲಾವಣೆ.. ಈ ರಸ್ತೆಗಳಲ್ಲಿ ನಿಮಗೆ ಎಂಟ್ರಿಯೇ ಇಲ್ಲ..!

ಸತತ 11 ತಿಂಗಳು ಸ್ವತಹ ತಾನೇ ಬಂದು ಪೂಜೆ ಮಾಡುವುದಾಗಿ ಖದೀಮ ಹೇಳಿದ್ದನು. ಇಬ್ಬರ ನಡುವಿನ ಮಾತಿನಂತೆ ಮಧ್ಯೆರಾತ್ರಿ 28 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದ ಖದೀಮ ಎಸ್ಕೇಪ್ ಆಗಿದ್ದನು. ಆದರೆ ಚಿನ್ನ, ಬೆಳ್ಳಿಯ ಆಸೆ ಹಾಗೇ ಇಟ್ಟುಕೊಂಡಿದ್ದ ಜಮೀನು ಮಾಲೀಕ 11 ತಿಂಗಳಗಳ ಬಳಿಕ ಹುಂಡಿಯನ್ನು ತೆಗೆದು ನೋಡಿದಾಗ ಮಾಲೀಕ ಫುಲ್ ಶಾಕ್ ಆಗಿದ್ದನು. ಏಕೆಂದರೆ ಅಲ್ಲಿ ಕಥೆನೇ ಬೇರೆ ಆಗಿತ್ತು.

ಕೆಲ ತಿಂಗಳುಗಳಿಂದ ಕಾಯುತ್ತಿದ್ದ ಬಿಂದಿಗೆಯಲ್ಲಿ ಚಿನ್ನ, ಬೆಳ್ಳಿಯ ಕಾಯಿನ್​ಗಳು, ಸರಗಳು, ಓಲೆ ಇರಬಹುದೆಂದು ಮಾಲೀಕ ಬೆಟ್ಟದಷ್ಟು ಕನಸು ಕಂಡಿದ್ದ. ಆದರೆ ಬಿಂದಿಗೆ ತೆಗೆದು ನೋಡಿದಾಗ ಅದರಲ್ಲಿ ಚಿನ್ನದ ಬದಲು ಕಬ್ಬಿಣ ಪ್ಲೇಟ್​ಗಳು ಸಿಕ್ಕಿವೆ. ಈ ಕಬ್ಬಿಣದ ಪ್ಲೇಟ್​​ಗಳಿಗೆ ಖದೀಮ ಶರಣಪ್ಪ ಬಂಗಾರದ ಬಣ್ಣ ಬಳಿದು ವಂಚನೆ ಮಾಡಿದ್ದನು. ಇದೆಲ್ಲಾ ಮೋಸ ಎಂದು ಗೊತ್ತಾದ ಮೇಲೆ ಮಾಲೀಕ ಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ. ಸದ್ಯ ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ವಂಚಕ ಶರಣಪ್ಪನನ್ನು ಬಂಧಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment