newsfirstkannada.com

286 ನಿಮಿಷ.​. 226 ಎಸೆತ.. 129 ರನ್​! ಧೃವ್ ಬ್ಯಾಟಿಂಗ್ ವೈಭವಕ್ಕೆ ದಿಗ್ಗಜರು ಫಿದಾ

Share :

Published February 27, 2024 at 12:53pm

Update February 27, 2024 at 12:55pm

    ಎರಡೂ ಇನ್ನಿಂಗ್ಸ್​ನಲ್ಲಿ ಜ್ಯುರೇಲ್ ಅಪ್ರತಿಮ ಆಟ

    ಪಂತ್​​, ಇಶಾನ್​​, ಕೆ.ಎಲ್.ರಾಹುಲ್ ಭವಿಷ್ಯ ಏನು..?

    ಮತ್ತೊಬ್ಬ ಧೋನಿಯ ಉಗಮ ಎಂದ ಸುನೀಲ್​ ಗವಾಸ್ಕರ್

ರಾಂಚಿ ಟೆಸ್ಟ್​ ಟೀಮ್ ಇಂಡಿಯಾ ಗೆದ್ದರು. ಕ್ರಿಕೆಟ್ ಲೋಕದಲ್ಲಿ ಚರ್ಚೆಯಾಗ್ತಿರುವ ಹೆಸರು ಒಂದೇ ಅದೇ ಧೃವ್ ಜುರೇಲ್.. ರಾಂಚಿ ಟೆಸ್ಟ್​ನಲ್ಲಿ ಆತ ಕಟ್ಟಿದ ಸಮಯೋಚಿತ ಇನ್ನಿಂಗ್ಸ್​ ಟೀಮ್ ಇಂಡಿಯಾಗೆ ಗೆಲುವನ್ನಷ್ಟೇ ನೀಡಲಿಲ್ಲ. ಭವಿಷ್ಯದ ಭರವಸೆಯನ್ನು ಮೂಡಿಸಿದೆ.

ಧೃವ್ ಜುರೇಲ್​. ಈಗ ಎಲ್ಲೆಲ್ಲೂ ಈತನದ್ದೇ ಮಂತ್ರ. ಆತನ ಮ್ಯಾಚ್​​ ಇನ್ನಿಂಗ್ಸ್​ ಬಗ್ಗೆಯೇ ಮಾತು. ಇಂಗ್ಲೆಂಡ್ ಬೌಲರ್​ಗಳ ಎದುರು ಬ್ಯಾಟ್​ ಬೀಸಿದ ಪರಿಯ ಬಗ್ಗೆಯೇ ಚರ್ಚೆ. ಇದಕ್ಕೆಲ್ಲಾ ಕಾರಣ ಜುರೇಲ್​ ರಾಂಚಿಯಲ್ಲಿ ಕಟ್ಟಿದ ಆ ಎರಡು ಅಮೋಘ ಇನ್ನಿಂಗ್ಸ್​.

ಎರಡೂ ಇನ್ನಿಂಗ್ಸ್​ನಲ್ಲಿ ಅಪ್ರತಿಮ ಆಟ

ಧೃವ್ ಜುರೇಲ್ ಬ್ಯಾಟಿಂಗ್ ಕೆಪಾಬಲಿಟಿ ಏನು..? 23 ವರ್ಷದ ಧೃವ್​​​​​​​​, ಏನು ಮಾಡಬಲ್ಲರು ಎಂಬ ಪ್ರಶ್ನೆ ಉತ್ತರ ರಾಂಚಿ ಟೆಸ್ಟ್​.. ಈ ಟೆಸ್ಟ್​ ಸರಣಿಯಲ್ಲಿ ಘಟಾನುಘಟಿ ಬ್ಯಾಟರ್​ಗಳೇ ಇಂಗ್ಲೆಂಡ್​ನ ಬಶೀರ್, ಟಾಮ್ ಹಾರ್ಟ್ಲೆಯ ಕ್ವಾಟ್ಲೆ ಪೆವಿಲಿಯನ್ ನಡೆಸಿದ್ರೆ. ಯಂಗ್ ಧೃವ್ ಜುರೇಲ್, ಬರೋಬ್ಬರಿ 211 ನಿಮಿಷಗಳ ಕಾಲ ಕ್ರೀಸ್​ನಲ್ಲಿ ನೆಲಕಚ್ಚಿ ನಿಂತರು. 149 ಎಸೆತಗಳನ್ನ ಎದುರಿಸಿದ ಧೃವ್, 90 ರನ್​​ಗಳ ಅತ್ಯಮೂಲ್ಯ ಇನ್ನಿಂಗ್ಸ್​ ಕಟ್ಟಿಕೊಟ್ಟರು.

ಇದಿಷ್ಟೇ ಅಲ್ಲ.! ಚೇಸಿಂಗ್​ಗೆ ಕಷ್ಟಕರವಾದ 4ನೇ ದಿನದಾಟ ಕ್ಲಾಸ್ ಬ್ಯಾಟಿಂಗ್​ನಿಂದ ಗಮನ ಸೆಳೆದ ಧೃವ್, 75 ನಿಮಿಷಗಳ ಕಾಲ ಬ್ಯಾಟಿಂಗ್ ನಡೆಸಿದ್ರು. ಈ ವೇಳೆ ಗಳಿಸಿದ ಅಜೇಯ 39 ರನ್​​​​​​​​​​​ ನಿಜಕ್ಕೂ ಯಾವೊಂದು ಶತಕಕ್ಕೆ ಕಡಿಮೆ ಅಲ್ಲ. ಇದಕ್ಕೆ ಕಾರಣ ಆ ಪರಿಸ್ಥಿತಿ. ಆದ್ರೆ, ಜುರೇಲ್​ರ ಇದೇ ಬ್ಯಾಟಿಂಗ್, ಈಗ ತ್ರಿಮೂರ್ತಿಗಳ ಭವಿಷ್ಯಕ್ಕೆ ಮಾರಕವಾಗ್ತಿದೆ.

ಖಾಯಂ ಸ್ಥಾನಕ್ಕೆ ಫಿಕ್ಸ್​ ಆಗ್ತಾರಾ ಧೃವ್ ಜುರೇಲ್​..!

ಸದ್ಯ ರಾಂಚಿಯಲ್ಲಿ ಧೃವ್ ಜುರೇಲ್ ಪ್ರದರ್ಶಿಸಿದ ಆಟ, ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ರಿಷಭ್ ಪಂತ್, ಇಶಾನ್ ಕಿಶನ್, ಕೆ.ಎಲ್.ರಾಹುಲ್​​ರ ಭವಿಷ್ಯದ ಪ್ರಶ್ನೆಯನ್ನು ಉದ್ಬವಿಸುವಂತೆ ಮಾಡಿದೆ. ಇದಕ್ಕೆ ಕಾರಣ ವಿಕೆಟ್ ಮುಂದೆ ಹಾಗೂ ಹಿಂದೆ ಜರೇಲ್ ಮಾಡಿದ ಮ್ಯಾಜಿಕ್..

ಹೌದು! ಸದ್ಯ ಇಶಾನ್ ಓಪನರ್ ಸ್ಥಾನವನ್ನೇ ನೆಚ್ಚಿಕೊಂಡಿದ್ರೆ. ಕೆ.ಎಲ್.ರಾಹುಲ್ ಪಾರ್ಟ್​ ಟೈಮ್ ವಿಕೆಟ್ ಕೀಪರ್ ಆಗಿ ಕಾರ್ಯ ನಿರ್ವಹಿಸ್ತಿದ್ದಾರೆ. ಇನ್ನು ಅಪಘಾತಗೊಂಡಿರುವ ಪಂತ್, ಕ್ರಿಕೆಟ್​ನಿಂದ ದೂರವೇ ಉಳಿದಿದ್ದಾರೆ. ಶೀಘ್ರ ಟಿ20ಗೆ ಆಗಮಿಸುವ ಸೂಚನೆ ಇದ್ರೂ, ಟೆಸ್ಟ್ ತಂಡಕ್ಕೆ ಆಗಮಿಸಲು ಮತ್ತಷ್ಟು ದಿನಗಳು ಕಾಯಬೇಕಾಗಿದೆ. ಹೀಗಾಗಿ ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಂಡ ಧೃವ್​​​​​​, ಪಂತ್ ಜೊತೆ ಸ್ಥಾನಕ್ಕಾಗಿ ಫೈಪೋಟಿ ನಡೆಸೋದು ಗ್ಯಾರಂಟಿ.

ಧೋನಿ ಜೊತೆ ಜುರೇಲ್​​ಗೆ ಹೋಲಿಸಿದ ಗವಾಸ್ಕರ್..!

ಧೃವ್ ಜುರೇಲ್​ರ ವಿಕೆಟ್ ಕೀಪಿಂಗ್ ಸ್ಕಿಲ್ಸ್​ಗೆ ಮನಸೋತಿರುವ ಲಿಟ್ಲ್​ ಮಾಸ್ಟರ್​ ಸುನಿಲ್ ಗವಾಸ್ಕರ್, ಧೋನಿ ಜೊತೆಯೇ ಹೋಲಿಕೆ ಮಾಡಿ ಗುಣಗಾನ ಮಾಡಿದ್ರು.

ಮತ್ತೊಬ್ಬ ಧೋನಿ ಕಾಣಿಸ್ತಿದ್ದಾನೆ..!

ಆತ ಅದ್ಬುತ ಬ್ಯಾಟಿಂಗ್ ನಡೆಸಿದರು. ವಿಕೆಟ್ ಹಿಂದಿನ ಕೀಪಿಂಗ್ ಕೂಡ ಅಷ್ಟೇ ಅದ್ಬುತವಾಗಿತ್ತು. ಆತನಿಗೆ ಪಂದ್ಯದ ಬಗೆಗಿನ ಏಕಾಗ್ರತೆ ನೋಡಿದರೆ, ಮತ್ತೊಬ್ಬ ಧೋನಿಯ ಉಗಮವಾಗುತ್ತಿದೆ ಎನಿಸುತ್ತೆ.

ಸುನಿಲ್ ಗವಾಸ್ಕರ್, ಮಾಜಿ ಕ್ರಿಕೆಟರ್

ಸುನಿಲ್ ಗವಾಸ್ಕರ್ ಮಾತ್ರವೇ ಅಲ್ಲ. ವಿರೇಂದ್ರ ಸೆಹ್ವಾಗ್​ ಕೂಡ ಧೃವ್, ಬ್ಯಾಟಿಂಗ್ ಟೆಕ್ನಿಕ್ ಬಗ್ಗೆ ಗುಣಗಾನ ಮಾಡಿದ್ರು.

ಅದ್ಬುತ ಬ್ಯಾಟಿಂಗ್ ಸ್ಕಿಲ್ಸ್

ಮಾಧ್ಯಮಗಳ ವೈಭವೀಕರಣ ಇಲ್ಲ. ನೋ ಡ್ರಾಮಾ. ಕೇವಲ ಅದ್ಬುತ ಬ್ಯಾಟಿಂಗ್ ಸ್ಕಿಲ್ಸ್. ಕಷ್ಟಕರ ಪಿಚ್​ನಲ್ಲಿ ಶ್ರೇಷ್ಠ ಪ್ರದರ್ಶನ.

ವಿರೇಂದ್ರ ಸೆಹ್ವಾಗ್, ಮಾಜಿ ಕ್ರಿಕೆಟರ್

ಇವರಷ್ಟೇ ಅಲ್ಲ.! ಇರ್ಫಾನ್ ಪಠಾಣ್, ವಿವಿಎಸ್ ಲಕ್ಷ್ಮಣ್, ಆಸ್ಟ್ರೇಲಿಯಾದ ಟಾಮ್ ಮೂಡಿ ಸೇರಿದಂತೆ ಅಂಪೈರ್​ ರಿಚರ್ಡ್ ಕೆಟಲ್ಬರೋ ಕೂಡ ಧೃವ್ ಜುರೇಲ್ ಆಟಕ್ಕೆ ಮನಸೋತಿದ್ದಾರೆ.

ಟೆಸ್ಟ್​ ಕ್ರಿಕೆಟ್​ನಲ್ಲಿ ಮುಂದುರಿಯುತ್ತಾರಾ ಜುರೇಲ್..?

ಯೆಸ್..! ಟೆಸ್ಟ್​ ಕ್ರಿಕೆಟ್​ನಲ್ಲಿ ಜುರೇಲ್ ತೋರಿದ ತಾಳ್ಮೆ, ಬ್ಯಾಟಿಂಗ್ ಟೆಕ್ನಿಕ್, ಇಂಟೆಂಟ್, ಕ್ಲಾಸ್, ಕಂಡೀಷನ್ಸ್​ಗೆ ತಕ್ಕಂತೆ ಒಗ್ಗಿಕೊಳ್ಳುವ ಗುಣ. ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್​ನಲ್ಲಿ ಗೇರ್ ಬದಲಿಸುವ ಪರಿ, ಓರ್ವ ಪರಿಪೂರ್ಣ ಆಟಗಾರ ಅನ್ನೋದನ್ನ ಸಾರಿ ಹೇಳಿತ್ತು. ಇದಿಷ್ಟೇ ಅಲ್ಲ.! ವಿಕೆಟ್ ಹಿಂದೆ ಮಾಡಿದ ಮೋಡಿ, ಕ್ವಿಕ್ ಹ್ಯಾಂಡ್ಸ್​ ನಿಜಕ್ಕೂ ಟೆಸ್ಟ್​ ಕ್ರಿಕೆಟ್​ನ ಪರ್ಫೆಕ್ಟ್​ ಪ್ಲೇಯರ್ ಅನ್ನೋದನ್ನ ನಿರೂಪಿಸಿದೆ. ಹೀಗಾಗಿ ಈತ ಟೆಸ್ಟ್​ ಕ್ರಿಕೆಟ್​ನ ಭವಿಷ್ಯದ ತಾರೆ ಆಗೋದ್ರಲ್ಲಿ ಅನುಮಾನವೇ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

286 ನಿಮಿಷ.​. 226 ಎಸೆತ.. 129 ರನ್​! ಧೃವ್ ಬ್ಯಾಟಿಂಗ್ ವೈಭವಕ್ಕೆ ದಿಗ್ಗಜರು ಫಿದಾ

https://newsfirstlive.com/wp-content/uploads/2024/02/Dhruv-2.jpg

Load More