newsfirstkannada.com

×

ಮೈಸೂರು ಅರಮನೆಯಿಂದ ಶುಭ ಸುದ್ದಿ.. ನವರಾತ್ರಿ ಸಂಭ್ರಮದಲ್ಲಿ ಯದುವೀರ್-ತ್ರಿಷಿಕಾ​ ದಂಪತಿಗೆ 2ನೇ ಮಗು ಜನನ

Share :

Published October 11, 2024 at 11:07am

Update October 11, 2024 at 11:11am

    2ನೇ ಗಂಡು ಮಗುವಿಗೆ ಜನ್ಮ ನೀಡಿದ ತ್ರಿಷಿಕಾ ಕುಮಾರಿ

    ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಜನ್ಮ ನೀಡಿದ ತ್ರಿಷಿಕಾ

    ಯದುವೀರ್​-ತ್ರಿಷಿಕಾ ಕುಮಾರಿ ದಂಪತಿಗೆ 2ನೇ ಮಗು

ಮೈಸೂರು: ದಸರಾ ಹಿನ್ನೆಲೆಯಲ್ಲಿ ಅರಮನೆ ನಗರಿ ಸಂಭ್ರಮದಲ್ಲಿ ತೇಲಿದೆ. ಇತ್ತ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಪತ್ನಿ ತ್ರಿಷಿಕಾ ದಂಪತಿಗೆ ಎರಡನೇ ಗಂಡು ಮಗು ಜನಿಸಿದೆ.

ನವರಾತ್ರಿ ಸಂಭ್ರಮದಲ್ಲಿ ರಾಜರ ಕುಟುಂಬದಲ್ಲಿ ಸಂತಸ ಮತ್ತಷ್ಟು ಹೆಚ್ಚಾದಂತೆ ಆಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ದೇವಿ ಅವರು 2ನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಯಲ್ಲಿ ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದಾರೆ.

ಇದನ್ನೂ ಓದಿ: ಕೆಲವು ಸ್ನೇಹಿತರು ಪರಿಸ್ಥಿತಿ ಬಳಸಿಕೊಂಡ್ರು, ಅಭಿಮಾನಿಗಳೇ ಉತ್ತರ ಕೊಡ್ತಾರೆ -ಧ್ರುವ ಸರ್ಜಾ ಹೇಳಿದ್ದೇನು?

ವಿಜಯದಶಮಿ ಸಡಗರದಲ್ಲಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ಗೆ ಶುಭಸುದ್ದಿ ಸಿಕ್ಕಿದೆ. ಅಲ್ಲದೇ ದಸರಾ ಹಿನ್ನೆಲೆಯಲ್ಲಿ ಕಳೆದ ವಾರದಿಂದ ಅರಮನೆಯಲ್ಲಿ ಸಂಭ್ರಮ ಹೆಚ್ಚಿದೆ. ಬೆನ್ನಲ್ಲೇ ಇದೀಗ 2ನೇ ಮಗು ಜನನ ಆಗಿರುವುದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ಗೆ ಡಬಲ್ ಖುಷಿ ಸಿಕ್ಕಂತೆ ಆಗಿದೆ. ಇದೇ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರಿನಿಂದ ಗೆದ್ದು ಸಂಸದರಾಗಿದ್ದಾರೆ. ಒಟ್ಟಿನಲ್ಲಿ 2024 ರಾಜರಿಗೆ ಒಲಿದು ಬಂದಂತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೈಸೂರು ಅರಮನೆಯಿಂದ ಶುಭ ಸುದ್ದಿ.. ನವರಾತ್ರಿ ಸಂಭ್ರಮದಲ್ಲಿ ಯದುವೀರ್-ತ್ರಿಷಿಕಾ​ ದಂಪತಿಗೆ 2ನೇ ಮಗು ಜನನ

https://newsfirstlive.com/wp-content/uploads/2024/10/MYS_YADHUVEER.jpg

Load More