newsfirstkannada.com

ಸರ್ಕಾರಿ ಹಾಸ್ಟೆಲ್​ನಲ್ಲಿ ವಾಸ್ತವ್ಯ.. PUCಯಲ್ಲಿ ರಾಜ್ಯಕ್ಕೆ Rank ಬಂದ ವಿದ್ಯಾರ್ಥಿನಿಯ ಯಶೋಗಾಥೆ ಕೇಳಿದ್ರಾ

Share :

Published April 10, 2024 at 11:53am

Update April 10, 2024 at 11:56am

    ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ, ಸರ್ಕಾರಿ ಹಾಸ್ಟೆಲ್​ನಲ್ಲಿ ವಾಸ್ತವ್ಯ

    ಖಾಸಗಿ ಶಾಲೆಗೆ ಪೈಪೋಟಿ ಕೊಟ್ಟ ಸರ್ಕಾರಿ ಶಾಲಾ ವಿದ್ಯಾರ್ಥಿನಿ ಈಕೆ

    ಯಾವುದೇ ಟ್ಯೂಷನ್ ಇಲ್ಲದೇ ರಾಜ್ಯಕ್ಕೆ ಱಂಕ್​ ಬಂದ ವಿದ್ಯಾರ್ಥಿನಿ

ಧಾರವಾಡ: ಪಿಯುಸಿ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿಯೂ ಯುವತಿಯರೇ ಮೇಲೂಗೈ ಸಾಧಿಸಿದ್ದಾರೆ. ಇದರ ನಡುವೆ ಸರ್ಕಾರಿ ಹಾಸ್ಟೆಲ್​ನಲ್ಲಿ ಉಳಿದುಕೊಂಡು ಪರೀಕ್ಷೆಗೆ ಓದಿದ ಯುವತಿಯೊಬ್ಬಳು ರಾಜ್ಯಕ್ಕೆ  ರ‌್ಯಾಂಕ್ ಬರುವ ಮೂಲಕ ತನ್ನ ಸಾಮರ್ಥ್ಯ ತೋರಿಸಿಕೊಟ್ಟಿದ್ದಾಳೆ. ಅಂದಹಾಗೆಯೇ ಆ ವಿದ್ಯಾರ್ಥಿನಿ ಯಾರು ಗೊತ್ತಾ?

ಹೆಸರು ರವೀನಾ ಲಮಾಣಿ. ಈಕೆ ಧಾರವಾಡ ಕೆಇ ಬೋರ್ಡ್ ಕಾಲೇಜಿನ ವಿದ್ಯಾರ್ಥಿನಿ. ಈಕೆ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡು, ಸರ್ಕಾರಿ ಹಾಸ್ಟೇಲ್ ನಲ್ಲಿ ಉಳಿದು, ಅಲ್ಲೇ ಕಲಿತು, ಇಂದು ಪಿಯುಸಿಯಲ್ಲಿ ರ‌್ಯಾಂಕ್ ಪಡೆದಿದ್ದಾಳೆ.

ಹೌದು. ಕಲಾ ವಿಭಾಗದಲ್ಲಿ ರವೀನಾ ಲಮಾಣಿ ರಾಜ್ಯಕ್ಕೆ ನಾಲ್ಕನೇ ರ‌್ಯಾಂಕ್ ಪಡೆದಿದ್ದಾಳೆ. ಮೂಲತ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದ ರವೀನಾ ಧಾರವಾಡದ ಸರ್ಕಾರಿ ಹಾಸ್ಟೇಲ್ ನಲ್ಲಿ ಪಿಯುಸಿ ಪರೀಕ್ಷೆ ಓದಿ ತಯಾರಾಗಿದ್ದಳು. ಅಚ್ಚರಿ ಸಂಗತಿ ಎಂದರೆ ಯಾವುದೇ ಟ್ಯೂಷನ್ ಇಲ್ಲದೇ ಕಲಾ ವಿಭಾಗದಲ್ಲಿ 595 ಅಂಕ ಪಡೆದು ಇಂದು ತಾನು ಓದಿದ ಸರ್ಕಾರಿ ಶಾಲೆಗೂ, ಸರ್ಕಾರಿ ಹಾಸ್ಟೆಲ್​ಗೆ ದೊಡ್ಡ ಘನತೆ ತಂದುಕೊಟ್ಟಿದ್ದಾಳೆ.

ಸಾಮಾನ್ಯವಾಗಿ ಪಿಯುಸಿ ಓದಲು ಮಕ್ಕಳನ್ನು ಪೋಷಕರು ಖಾಸಗಿ ಶಾಲೆಗೆ ಕಳುಹಿಸುವ ಕಾಲಘಟ್ಟದಲ್ಲಿ ರವೀನಾ ಲಮಾಣಿ ಸರ್ಕಾರಿ ಶಾಲೆಯಲ್ಲಿ ಓದಿ, ಯಾವುದೇ ಟ್ಯೂಷನ್​ ಪಡೆಯದೆ ಮತ್ತು ಸರ್ಕಾರಿ ಹಾಸ್ಟೆಲ್​ನಲ್ಲಿ ಓದಿಕೊಂಡು ಇಂದು ಖಾಸಗಿ ಶಾಲೆಯವರಿಗೆ ತಾನು ಏನು ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾಳೆ.

ಪಿಯುಸಿ ರಿಸಲ್ಟ್ ನೋಡಲು​ https://karresults.nic.in ಸೈಟ್​ಗೆ ಭೇಟಿ ನೀಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರ್ಕಾರಿ ಹಾಸ್ಟೆಲ್​ನಲ್ಲಿ ವಾಸ್ತವ್ಯ.. PUCಯಲ್ಲಿ ರಾಜ್ಯಕ್ಕೆ Rank ಬಂದ ವಿದ್ಯಾರ್ಥಿನಿಯ ಯಶೋಗಾಥೆ ಕೇಳಿದ್ರಾ

https://newsfirstlive.com/wp-content/uploads/2024/04/Ravina-Lumani.jpg

Load More