/newsfirstlive-kannada/media/post_attachments/wp-content/uploads/2024/12/bhavya-gowda.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಕನ್ನಡ ಕಿರುತೆರೆಯ ಗೀತಾ ಸೀರಿಯಲ್ ಮೂಲಕವೇ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡು ಬಿಗ್ಬಾಸ್ಗೆ ಎಂಟ್ರಿ ಕೊಟ್ಟು ಕಮಾಲ್ ಮಾಡುತ್ತಿದ್ದಾರೆ ಭವ್ಯಾ ಗೌಡ.
ಇದನ್ನೂ ಓದಿ:ನನ್ನ ತಲೆಗೆ ಪೊಲೀಸರು ಹೊಡೆದ್ರು- ಕೋರ್ಟ್ನಲ್ಲಿ ಆಘಾತಕಾರಿ ವಿಚಾರ ತಿಳಿಸಿದ ಸಿಟಿ ರವಿ
ಬಿಗ್ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿರೋ ಭವ್ಯಾ ಗೌಡ ಎರಡನೇ ಬಾರಿಗೆ ಕ್ಯಾಪ್ಟನ್ ಆಗಿ ಹೊರ ಹೊಮ್ಮಿದ್ದಾರೆ. ಕ್ಯಾಪ್ಟನ್ ಪಟ್ಟಕ್ಕಾಗಿ ಬಿಗ್ಬಾಸ್ ಸ್ಪರ್ಧಿಗಳು ನಾ ಮುಂದು ತಾ ಮುಂದು ಅಂತ ಒದ್ದಾಡುತ್ತಾ ಇರುತ್ತಾರೆ. ಆದ್ರೆ ಈ ಬಾರಿ ಸರ್ಪ್ರೈಸ್ ಎಂಬಂತೆ 13ನೇ ವಾರಕ್ಕೆ ಬಿಗ್ಬಾಸ್ ಮನೆಯ ಕ್ಯಾಪ್ಟನ್ ಆಗಿ ಭವ್ಯಾ ಗೌಡ ಆಯ್ಕೆಯಾಗಿದ್ದಾರೆ. ಇನ್ನೂ ನಿನ್ನೆಯ ಸಂಚಿಕೆಯಲ್ಲಿ ಬಿಗ್ಬಾಸ್ ಸ್ಪರ್ಧಿಗಳಿಗೆ ಕ್ಯಾಪ್ಟನ್ಸಿ ಟಾಸ್ಕ್ವೊಂದನ್ನು ನೀಡುದ್ದರು.
ಅದರಲ್ಲಿ ಗೌತಮಿ, ಐಶ್ವರ್ಯಾ, ಭವ್ಯಾ ಗೌಡ, ಚೈತ್ರಾ ಕುಂದಾಪುರ ಹಾಗೂ ಧನರಾಜ್ ಆಯ್ಕೆಯಾಗಿದ್ದರು. ಅದರ ಪೈಕಿ ಕೊನೆಯ ಕ್ಷಣದಲ್ಲಿ ಐಶ್ವರ್ಯಾ ಹಾಗೂ ಭವ್ಯಾ ಗೌಡ ಕ್ಯಾಪ್ಟನ್ಸಿ ಓಟಕ್ಕೆ ಸೆಲೆಕ್ಟ್ ಆಗಿದ್ದರು. ಇದಾದ ಬಳಿಕ ಇಂದು ರಾತ್ರಿ 9.30ರ ಎಪಿಸೋಡ್ನಲ್ಲಿ ಬಿಗ್ಬಾಸ್ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾದ ಸ್ಪರ್ಧಿಗಳಿಗೆ ಯಾವ ಟಾಸ್ಕ್ ನೀಡಿದ್ದರು ಅಂತ ಗೊತ್ತಾಗಲಿದೆ.
ಅಲ್ಲದೇ ಈ ಬಾರಿ ಕ್ಯಾಪ್ಟನ್ಸಿ ಪಟ್ಟ ಸ್ವೀಕರಿಸಿದ ಭವ್ಯಾ ಗೌಡ ಗೌಡಗೆ ಮುಂದೆ ಸರ್ಪ್ರೈಸ್ ಕಾದಿರಬಹುದು. ಅಲ್ಲದೇ ಮುಂದಿನ ವಾರದವರೆಗೂ ಭವ್ಯಾ ಗೌಡ ನಾಮಿನೇಷನ್ನಿಂದ ಪಾರಾಗಲಿದ್ದಾರೆ. ಅಲ್ಲದೇ ಬಿಗ್ಬಾಸ್ ಮನೆಯಲ್ಲಿ ಭವ್ಯಾ ಗೌಡ, ತ್ರಿವಿಕ್ರಮ್ ಎರಡನೇ ಬಾರಿಗೆ ಕ್ಯಾಪ್ಟನ್ ಆಗಿದ್ದಾರೆ. ಈಗ ಭವ್ಯಾ ಗೌಡ ಕ್ಯಾಪ್ಟನ್ಸಿ ಅವಕಾಶವನ್ನು ಹೇಗೆ ಸದುಪಯೋಗ ಮಾಡಿಕೊಳ್ಳಲಿದ್ದಾರೆ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ