ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್.. ಜೂನ್ 20 ದ್ರಾವಿಡ್, ಗಂಗೂಲಿ, ಕೊಹ್ಲಿಗೆ ಮರೆಯಲಾಗದ ದಿನ..! ಏನದು?

author-image
Ganesh
Updated On
ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್.. ಜೂನ್ 20 ದ್ರಾವಿಡ್, ಗಂಗೂಲಿ, ಕೊಹ್ಲಿಗೆ ಮರೆಯಲಾಗದ ದಿನ..! ಏನದು?
Advertisment
  • ಇಂಡೋ-ಇಂಗ್ಲೆಂಡ್​ ಟೆಸ್ಟ್​ ಕದನ ಆರಂಭಕ್ಕೆ ಕೌಂಟ್​ಡೌನ್​
  • ಕೊಹ್ಲಿ, ದ್ರಾವಿಡ್, ಗಂಗೂಲಿ ಲಿಸ್ಟ್​ಗೆ ಸೇರ್ತಾರೆ ಮತ್ತೊಬ್ಬ ಸ್ಟಾರ್?
  • ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯ ಆಡಲಿರುವ ಭಾರತ

ಇಂಡೋ-ಇಂಗ್ಲೆಂಡ್​ ಟೆಸ್ಟ್​ ಕದನ ಆರಂಭಕ್ಕೆ ಕೌಂಟ್​ಡೌನ್​ ಶುರುವಾಗಿದೆ. ಇಂದಿನಿಂದ ಲೀಡ್ಸ್​​ನಲ್ಲಿ ಮೊದಲ ಟೆಸ್ಟ್​ ಫೈಟ್​ ಆರಂಭವಾಗಲಿದ್ದು, ಅಖಾಡಕ್ಕಿಳಿಯಲು ಟೀಮ್​ ಇಂಡಿಯಾ ತುದಿಗಾಲಲ್ಲಿ ನಿಂತಿದೆ.

ಅಂದ್ಹಾಗೆ ಇವತ್ತು ಜೂನ್ 20. ಟೀಂ ಇಂಡಿಯಾ ಪಾಲಿಗೆ ಮಹತ್ವದ ದಿನ. ಮೂವರು ದಿಗ್ಗಜರು ಇದೇ ದಿನ ಟೀಂ ಇಂಡಿಯಾ ಟೆಸ್ಟ್​ಗೆ ಪದಾರ್ಪಣೆ ಮಾಡಿದ ದಿನವಾಗಿದೆ.

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಬಲಿಷ್ಠ ಪ್ಲೇಯಿಂಗ್-11; ಆಯ್ಕೆಯ ಗೊಂದಲ ಇರೋದು ಎಲ್ಲಿ..?

  • ಜೂನ್ 20, 1996 ರಲ್ಲಿ ರಾಹುಲ್ ದ್ರಾವಿಡ್ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ
  •  ಜೂನ್ 20, 1996ರಲ್ಲಿ ಸೌರವ್ ಗಂಗೂಲಿ ಟೆಸ್ಟ್​ ಕ್ರಿಕಟ್​​ಗೆ ಪದಾರ್ಪಣೆ
  •  ಜೂನ್ 20, 2011 ರಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್​​ಗೆ ಪದಾರ್ಪಣೆ

ಈ ದಿನ ಟೆಸ್ಟ್​ ಕ್ರಿಕೆಟ್​​ಗೆ ಡೆಬ್ಯು ಮಾಡಿರುವ ಮೂವರು ಆಟಗಾರರು ಟೀಂ ಇಂಡಿಯಾದ ದಂತಕತೆಗಳಾಗಿ ಉಳಿದುಕೊಂಡಿದ್ದಾರೆ. ಭಾರತದ ಪರ ನೂರಕ್ಕು ಹೆಚ್ಚು ಟೆಸ್ಟ್​ ಪಂದ್ಯಗಳನ್ನು ಆಡಿರುವ ಅವರು, ವಿಶ್ವ ಕ್ರಿಕೆಟ್​ಗೆ ಮರೆಯಲಾಗದ ಕೊಡುಗೆ ನೀಡಿದ್ದಾರೆ.

ಇಂದು ಮತ್ತೊಬ್ಬ ಡೆಬ್ಯೂ..?

ಇವತ್ತು ಇಂಗ್ಲೆಂಡ್ ವಿರುದ್ಧ ನಡೆಯುವ ಮೊದಲ ಟೆಸ್ಟ್​ನಲ್ಲಿ ಸಾಯಿ ಸುದರ್ಶನ್ ಟೆಸ್ಟ್​ ಕ್ರಿಕೆಟ್​​ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಐಪಿಎಲ್​ ಹಾಗೂ ದೇಸಿಯ ಪಂದ್ಯಗಳಲ್ಲಿ ಮಿಂಚಿನ ಆಟ ಪ್ರದರ್ಶನ ನೀಡಿರುವ ಸುದರ್ಶನ್ ಮೇಲೆ ಸಾಕಷ್ಟು ನಂಬಿಕೆ ಇದೆ. ಜೂನ್ 20 ರಂದು ಟೆಸ್ಟ್​ ಕ್ರಿಕೆಟ್​ಗೆ ಡೆಬ್ಯು ಮಾಡಿದರೆ, ದ್ರಾವಿಡ್, ಗಂಗೂಲಿ, ಕೊಹ್ಲಿ ಲಿಸ್ಟ್​​ನಲ್ಲಿ ಸೇರಲಿದ್ದಾರೆ. ಆದರೆ, ಈ ಮೂವರು ದಿಗ್ಗಜರ ಸಾಲಿಗೆ ಸೇರಬೇಕು ಅಂದರೆ ಸಾಯಿ ಸುದರ್ಶನ್ ಆಟದ ಮೂಲಕ ಅದನ್ನು ನಿರೂಪಿಸಬೇಕಿದೆ.

ಇದನ್ನೂ ಓದಿ: RCB ಗೆದ್ದರೆ ಪತಿಗೆ ಇನ್ನೊಂದು ಮದುವೆ ಮಾಡಿಸ್ತೀನಿ ಎಂದಿದ್ದ ಪತ್ನಿಗೆ ಫಜೀತಿ; ಈಗ ಆಗಿದ್ದೇನು..?

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment