newsfirstkannada.com

ಬೆತ್ತಲೆ ವಿಡಿಯೋ ವೈರಲ್​ ಮಾಡುವೆ ಎಂದು ಬೆದರಿಸಿ ಹಣ ಸುಲಿಗೆ; ಮೂವರು ಅರೆಸ್ಟ್​

Share :

Published August 18, 2023 at 8:48pm

    ಬೆತ್ತಲೆ ವಿಡಿಯೋ ಸ್ಟೇಟಸ್‌ಗೆ ಹಾಕಿ ವೈರಲ್‌ ಮಾಡುತ್ತೇನೆ ಎಂದು ಬೆದರಿಕೆ ಕೇಸ್​​​

    ಬೆದರಿಕೆ ಹಾಕಿ ಪರಾರಿಯಾದ ಮತ್ತಿಬ್ಬರು ಆರೋಪಿಗಳಿಗಾಗಿ ತೀವ್ರ ಹುಡುಕಾಟ

    ಈಗಾಗಲೇ ಸಿಕ್ಕಿಬಿದ್ದ ಮುಭಾ, ಚಂದನ್, ಅಂಕಿತ್ ರಾಜ್ ಎಂಬ ಆರೋಪಿಗಳು!

ಬೆಂಗಳೂರು: ಅಪಹರಣ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಂಪಿಗೆಹಳ್ಳಿ ಪೊಲೀಸರು ಅಧಿಕಾರಿಗಳು ಬಂಧಿಸಿದ್ದಾರೆ. ಮುಭಾ, ಚಂದನ್ ಗೌಡ, ಅಂಕಿತ್ ರಾಜ್ ಬಂಧಿತ ಆರೋಪಿಗಳು.

ಹಣ ಕೊಟ್ಟಿಲ್ಲ ಅಂದರೆ ಡ್ರಗ್‌ ಕೇಸ್​​ನಲ್ಲಿ ಫಿಟ್‌ ಮಾಡಿ ಜೈಲಿಗೆ ಹಾಕಿಸ್ತಿನಿ. ಹೀಗೆ ಹೇಳಿಕೊಂಡು ಜಸೀಲ್‌ ಎಂಬ ಯುವಕನನ್ನು ಥಣಿಸಂದ್ರದ ಮೈದಾನಕ್ಕೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ. ಹಣ ನೀಡದಿದ್ದರೆ ನಿನ್ನ ಮನೆಗೆ ಕರೆ ಮಾಡಿ ಡ್ರಗ್‌ ಕೇಸ್‌ ಆರೋಪಿ ಎಂದು ಹೇಳಿ ಪೊಲೀಸರಿಗೆ ಒಪ್ಪಿಸುತ್ತೇವೆ. ಬೆತ್ತಲೆ ವಿಡಿಯೋ ಮಾಡಿ ಸ್ಟೇಟಸ್‌ಗೆ ಹಾಕಿ ವೈರಲ್‌ ಮಾಡುತ್ತೇನೆ ಎಂದು 30 ಸಾವಿರ ಕೇಳಿದ್ದಾರೆ. ಬಳಿಕ ಯುವಕ ತನಗೆ ನೀಡಿದ ಚಿತ್ರಹಿಂಸೆ ತಡೆಯಲಾಗದೆ  ಸ್ನೇಹಿತರಿಗೆ ಕರೆ ಮಾಡಿ 18 ಸಾವಿರದವರೆಗೆ ಹಣ ಫೋನ್‌ ಮಾಡಿಸಿಕೊಂಡಿದ್ದಾನೆ. ಹಣ ನೀಡಿದ ಬಳಿಕ ಜಸೀಲ್​​ನನ್ನ ಬಿಟ್ಟು ಕಳಿಸಿದ್ದಾರೆ. ನಂತರ ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ.

ಇನ್ನು, ಈ ಕುರಿತು ಸಂಪಿಗೆಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಅಪಹರಣ ಮಾಡಿ ಹಣ ಸುಲಿಗೆ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯ ಪರಾರಿಯಾದ ಇನ್ನಿಬ್ಬರು ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆತ್ತಲೆ ವಿಡಿಯೋ ವೈರಲ್​ ಮಾಡುವೆ ಎಂದು ಬೆದರಿಸಿ ಹಣ ಸುಲಿಗೆ; ಮೂವರು ಅರೆಸ್ಟ್​

https://newsfirstlive.com/wp-content/uploads/2023/08/bng.jpg

Load More