ಬೆಂಗಳೂರಲ್ಲಿ ಹೌಸಿಂಗ್ ಬೋರ್ಡ್​​ನಿಂದ 3 BHK ಡ್ಯೂಪ್ಲೆಕ್ಸ್ ಹೊಸ ಮನೆಗಳ ಮಾರಾಟ.. ಬೆಲೆ ಎಷ್ಟು?

author-image
Bheemappa
Updated On
ಬೆಂಗಳೂರಲ್ಲಿ ಹೌಸಿಂಗ್ ಬೋರ್ಡ್​​ನಿಂದ 3 BHK ಡ್ಯೂಪ್ಲೆಕ್ಸ್ ಹೊಸ ಮನೆಗಳ ಮಾರಾಟ.. ಬೆಲೆ ಎಷ್ಟು?
Advertisment
  • ಒಂದು ಸಾವಿರ ಸೈಟ್​ಗಳಲ್ಲಿ ಮನೆಗಳ ನಿರ್ಮಾಣ ಉದ್ದೇಶ
  • ಡ್ಯೂಪ್ಲೆಕ್ಸ್ ಮನೆಗಳ ದರ ಈಗ ಎಷ್ಟು ನಿಗದಿ ಮಾಡಲಾಗಿದೆ?
  • ಮನೆ ಸಿಗದಿದ್ರೆ ಪೂರ್ಣ ಹಣ ಮರುಪಾವತಿ ಮಾಡಲಾಗುತ್ತೆ

ಬೆಂಗಳೂರಿನ ಉಪನಗರಗಳಾದ ಸೂರ್ಯನಗರ, ಕೆಂಗೇರಿ ಮತ್ತು ಯಲಹಂಕದಲ್ಲಿ ಕರ್ನಾಟಕ ಹೌಸಿಂಗ್ ಬೋರ್ಡ್, ಪ್ರೀಮಿಯಂ 3 BHK ಫ್ಲಾಟ್‌ಗಳು ಮತ್ತು ಡ್ಯೂಪ್ಲೆಕ್ಸ್ ಮನೆಗಳನ್ನು ಒಳಗೊಂಡ ಪ್ರಮುಖ ವಸತಿ ಯೋಜನೆಯನ್ನು ಪ್ರಾರಂಭಿಸಿದೆ. ಕೆಎಸ್​​ಬಿ ಅಧ್ಯಕ್ಷ ಮತ್ತು ಶಾಸಕ ಕೆ.ಎಂ ಶಿವಲಿಂಗೇಗೌಡ ಅವರು ಈ ತೀರ್ಮಾನ ಪ್ರಕಟಿಸಿದ್ದಾರೆ. 100 ಡ್ಯೂಪ್ಲೆಕ್ಸ್‌ಗಳ ಪ್ರಾಯೋಗಿಕ ಹಂತದೊಂದಿಗೆ ಪ್ರಾರಂಭವಾಗುತ್ತದೆ.

35x40 ಅಡಿ ಡ್ಯೂಪ್ಲೆಕ್ಸ್ ಮನೆಗಳಿಗೆ 99 ಲಕ್ಷ ರೂಪಾಯಿ, 35x50 ಅಳತೆಯ ಮನೆಗಳಿಗೆ 1.4 ಕೋಟಿ ರೂಪಾಯಿ ಮತ್ತು 60x40 ಅಳತೆಯ ಮನೆಗಳಿಗೆ 1.8 ಕೋಟಿ ಬೆಲೆ ನಿಗದಿಪಡಿಸಲಾಗಿದೆ. ಇದು ಮಾರುಕಟ್ಟೆ ಏರಿಳಿತಕ್ಕನುಗುಣವಾಗಿ ಬೆಲೆ ಏರಿಸಲ್ಲ. ಈಗ ಮೊದಲಿಗೆ ಮಾರುಕಟ್ಟೆ ಬೇಡಿಕೆಯ ಸಮೀಕ್ಷೆ ಮಾಡಲಾಗುತ್ತೆ. ಬಳಿಕ ಡ್ಯೂಪ್ಲೆಕ್ಸ್ ಮನೆ ಹಂಚಿಕೆಗೆ ಅರ್ಜಿ ಆಹ್ವಾನಿಸಲಾಗುತ್ತೆ.

publive-image

ಲಾಟರಿ ಮೂಲಕ ಮನೆಗಳ ಹಂಚಿಕೆ

ಹೌಸಿಂಗ್ ಬೋರ್ಡ್ 1 ಸಾವಿರ ಸೈಟ್​ಗಳಲ್ಲಿ ಮನೆಗಳನ್ನು ನಿರ್ಮಿಸುವ ಉದ್ದೇಶ ಇದೆ. ಮೊದಲಿಗೆ 100 ಡ್ಯೂಪ್ಲೆಕ್ಸ್ ಮನೆ ನಿರ್ಮಿಸಿ, ಪೈಲಟ್ ಪ್ರಾಜೆಕ್ಟ್ ಆಗಿ ಜಾರಿಗೆ ತರಲಾಗುವುದು. ಪೈಲಟ್ ಪ್ರಾಜೆಕ್ಟ್ ವೇಳೆಯಲ್ಲೇ ಸಾರ್ವಜನಿಕರ ಬೇಡಿಕೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತೆ. ಮನೆ ಹಂಚಿಕೆಗಳನ್ನು ಪಾರದರ್ಶಕ ಲಾಟರಿ ವ್ಯವಸ್ಥೆಯ ಮೂಲಕ ಮಾಡಲಾಗುತ್ತದೆ. ಪೂರ್ತಿ ಹಣ ಪಾವತಿ ಮಾಡಿದವರ ಹೆಸರನ್ನು ಲಾಟರಿಗೆ ಹಾಕಲಾಗುತ್ತೆ. ಲಾಟರಿ ಮೂಲಕ ಮನೆಗಳನ್ನು ಹಂಚಿಕೆ ಮಾಡಲಾಗುತ್ತೆ.

ಮನೆ ಸಿಗದ ಅರ್ಜಿದಾರರಿಗೆ ಪೂರ್ಣ ಹಣ ಮರುಪಾವತಿ ಮಾಡಲಾಗುತ್ತೆ. ಈ ಪ್ರಕ್ರಿಯೆಯಲ್ಲಿ ನ್ಯಾಯಯುತತೆ ಮತ್ತು ಸಾರ್ವಜನಿಕ ನಂಬಿಕೆಯನ್ನು ಖಚಿತಪಡಿಸಿಕೊಳ್ಳುವುದು ಗುರಿಯಾಗಿದೆ. ಸಮುದಾಯ ಮೂಲಸೌಕರ್ಯಕ್ಕೆ ಗಮನಾರ್ಹ ಉತ್ತೇಜನವಾಗಿ, ಸೂರ್ಯನಗರವು ವಿಶ್ವ ದರ್ಜೆಯ ಬಹು- ಕ್ರೀಡಾಂಗಣವನ್ನು ಸಹ ಹೊಂದಿರುತ್ತದೆ ಎಂದು ಕೆಎಚ್‌ಬಿ ಅಧ್ಯಕ್ಷ ಕೆ.ಎಂ ಶಿವಲಿಂಗೇಗೌಡ ಹೇಳಿದ್ದಾರೆ.

ಇದನ್ನೂ ಓದಿ:ಒಂದೇ ಒಂದು ದಿನ.. ಕರ್ನಾಟಕದ ಈ ಜಿಲ್ಲೆಗಳಲ್ಲಿ ಹೃದಯಾಘಾತಕ್ಕೆ 8 ಮಂದಿ ಬಲಿ

publive-image

ಮಾಜಿ ಸೈನಿಕರು, ಪತ್ರಕರ್ತರಿಗೆ ಮೀಸಲು ಇದೆ

ಕೆಎಚ್‌ಬಿ ಹೌಸಿಂಗ್ ಹಂಚಿಕೆಯಲ್ಲಿ ಮಾಜಿ ಸೈನಿಕರು, ಶಾಸಕರು, ಸ್ವಾತಂತ್ರ್ಯ ಹೋರಾಟಗಾರರು, ಸರ್ಕಾರಿ ನೌಕರರು, ಪತ್ರಕರ್ತರು ಮತ್ತು ಇತರ ಗುಂಪುಗಳಿಗೆ ಮೀಸಲಾಗಿರುವ ವಿವೇಚನಾ ಕೋಟಾದ ಅಸ್ತಿತ್ವದಲ್ಲಿರುವ ಮಾನದಂಡ ಪರಿಷ್ಕರಿಸಲು ಯೋಜಿಸಿದೆ. ಇದಕ್ಕೆ ರಾಜ್ಯದ ಕ್ಯಾಬಿನೆಟ್​ನ ಒಪ್ಪಿಗೆ ಬೇಕಾಗಿದೆ. ಪ್ರಸ್ತುತ ಇರುವ ನಿಯಮಗಳ ಪ್ರಕಾರ, ಮಾಜಿ ಸೈನಿಕರು, ಪತ್ರಕರ್ತರು, ಇತರೆ ಗುಂಪುಗಳಿಗೆ ಶೇ.5 ರಷ್ಟು ಮನೆಗಳನ್ನು ಹಂಚಿಕೆ ಮಾಡಲು ಅವಕಾಶ ಇದೆ.

ಇದನ್ನು ಪರಿಷ್ಕರಿಸಲು ಮತ್ತಷ್ಟು ಹೆಚ್ಚಿಸಲು ಹೌಸಿಂಗ್ ಬೋರ್ಡ್ ಉದ್ದೇಶಿಸಿದೆ. ಬೆಂಗಳೂರಿನಲ್ಲಿ ಗುಣಮಟ್ಟದ, ಕೈಗೆಟುಕುವ ವಸತಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಕಾರ್ಯತಂತ್ರದ ಭಾಗವಾಗಿ ಈ ಹೊಸ ಯೋಜನೆ ರೂಪಿಸಲಾಗಿದೆ ಎಂದು ಕರ್ನಾಟಕ ಹೌಸಿಂಗ್ ಬೋರ್ಡ್ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment