/newsfirstlive-kannada/media/post_attachments/wp-content/uploads/2025/06/JAISWAL.jpg)
- ಲೀಡನ್ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್
- 96 ರನ್‌ಗಳ ಮುನ್ನಡೆ ಸಾಧಿಸಿರುವ ಭಾರತ ತಂಡ
- ಗಿಲ್ ಪಡೆ ಮಾಡಿರುವ ಮೂರು ತಪ್ಪುಗಳು ಯಾವುದು?
ಇಂಗ್ಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ 6 ರನ್​ಗಳ ಅಲ್ಪ ಮುನ್ನಡೆ ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 471 ರನ್ ಗಳಿಸಿತ್ತು. ಇನ್ನು, ಇಂಗ್ಲೆಂಡ್ ತಂಡವು 465 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ.
ಓಲಿ ಪೋಪ್ ಮತ್ತು ಹ್ಯಾರಿ ಬ್ರೂಕ್ ಹೊರತುಪಡಿಸಿ ಇಂಗ್ಲೆಂಡ್‌ನ ಯಾವುದೇ ಬ್ಯಾಟ್ಸ್‌ಮನ್ ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ. ಹೀಗಿದ್ದೂ ಭಾರತ ತಂಡ ತಪ್ಪುಗಳ ಮೇಲೆ ತಪ್ಪು ಮಾಡಿ ಅದಕ್ಕೆ ತಕ್ಕ ಬೆಲೆಯನ್ನು ತೆತ್ತಿದೆ.
ಹ್ಯಾರಿ ಬ್ರೂಕ್ ಶೋನ್ಯಕ್ಕೆ ಔಟ್ ಆಗಿದ್ದರು.. ಆದರೆ
48 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ ಇಂಗ್ಲೆಂಡ್ 206 ರನ್ ಗಳಿಸಿತ್ತು. ಹ್ಯಾರಿ ಬ್ರೂಕ್ ಕ್ರೀಸ್‌ಗೆ ಬಂದಿದ್ದರು. 49ನೇ ಓವರ್‌ನಲ್ಲಿ ಬ್ರೂಕ್ ಅವರ ಹಡೆದ ಬಾಲ್​​ ಅನ್ನು ಸಿರಾಜ್ ಅದ್ಭುತವಾಗಿ ಕ್ಯಾಚ್ ಆಗಿ ಕನ್ವರ್ಟ್ ಮಾಡಿದ್ದರು. ಬ್ರೂಕ್ ಯಾವುದೇ ರನ್​ ಗಳಿಸದೇ ಶೂನ್ಯಕ್ಕೆ ಹೋಗಬೇಕಾಗಿತ್ತು. ಆದರೆ ಅಂಪೈರ್​ ಬುಮ್ರಾ ಎಸೆದಿರುವ ಬಾಲ್ ನೋ ಬಾಲ್ ಅಂತಾ ತೀರ್ಪು ನೀಡಿದರು. ಪರಿಣಾಮ ಬ್ರೂಕ್ 99 ರನ್​ಗಳಿಸಿ ಔಟ್ ಆದರು.
ಇದನ್ನೂ ಓದಿ: ಕೈಕೊಟ್ಟ ಜೈಸ್ವಾಲ್, ಸಾಯಿ.. ಟೀಂ ಇಂಡಿಯಾಗೆ ಕನ್ನಡಿಗ KL ರಾಹುಲ್ ಆಸರೆ, ಭರವಸೆ..!
6 ಕ್ಯಾಚ್ ಕೈಚೆಲ್ಲಿದ ಭಾರತ
ಟೀಂ ಇಂಡಿಯಾ ಕಳಪೆ ಫೀಲ್ಡಿಂಗ್​ ವಿಚಾರದಲ್ಲಿ ಮತ್ತೆ ಸುದ್ದಿಯಾಗಿದೆ. ಟೀಂ ಇಂಡಿಯಾದ ಕಳಪೆ ಫೀಲ್ಡಿಂಗ್​ನಿಂದಲೇ ಇಂಗ್ಲೆಂಡ್​ 465 ರನ್​ಗಳಿಸಿದೆ. ಹ್ಯಾರಿ ಬ್ರೂಕ್ ಶೂನ್ಯಕ್ಕೆ ಔಟಾಗದಂತೆ ಪಾರಾದರು. ಅದೇ ಇನ್ನಿಂಗ್ಸ್‌ನಲ್ಲಿ ಬ್ರೂಕ್ ಅವರ ಮತ್ತೊಂದು ಕ್ಯಾಚ್ ಡ್ರಾಪ್ ಮಾಡಿದರು. 106 ರನ್‌ಗಳ ಇನ್ನಿಂಗ್ಸ್ ಆಡಿದ ಓಲ್ಲಿ ಪೋಪ್​ಗೆ 2 ಜೀವದಾನ ನೀಡಿದರು. ಜೇಮೀ ಸ್ಮಿತ್ ಮತ್ತು ಬೆನ್ ಡಕೆಟ್ ಅವರ ತಲಾ ಒಂದು ಕ್ಯಾಚ್ ಸಹ ಕೈಚೆಲ್ಲಿದರು.
ಶಾರ್ದೂಲ್ ಠಾಕೂರ್ ಮೇಲೆ ನಂಬಿಕೆ ಇಲ್ಲ
ಶಾರ್ದೂಲ್ ಠಾಕೂರ್ ಸಂದರ್ಭಕ್ಕೆ ಹೊಸ ಮತ್ತು ಅರೆಬರೆ ಹೊಸ ಬಾಲ್​ನಲ್ಲಿ ಬೌಲಿಂಗ್ ಮಾಡಲು ಹೆಸರುವಾಸಿ. ಮೊದಲ ಇನ್ನಿಂಗ್ಸ್​ನಲ್ಲಿ 20 ಓವರ್​ಗಳಾದ ನಂತರ ಬೌಲಿಂಗ್ ಮಾಡಲು ಹೇಳಬೇಕಾಗಿತ್ತು. ಆದರೆ ಟೀಂ ಇಂಡಿಯಾದ 40 ಓವರ್​ ಮುಗಿದ ನಂತರ ಗಿಲ್, ಠಾಕೂರ್​ಗೆ ಬಾಲ್ ನೀಡಿದರು. ಅಷ್ಟೊತ್ತಿಗೆ ಬಾಲ್ ಸಂಪೂರ್ಣ ಹಳೆಯದಾಗಿತ್ತು. ನಾಯಕ ಗಿಲ್, ಠಾಕೂರ್ ಅವರ ಸಾಮರ್ಥ್ಯಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಅವರಿಂದ ಕೇವಲ 6 ಓವರ್ ಮಾತ್ರ ಮಾಡಿಸಿದರು.
ಇದನ್ನೂ ಓದಿ: KL ರಾಹುಲ್​ಗೆ ಕ್ರಿಕೆಟ್ ಮೇಲಿರುವ ಪ್ರೀತಿಗೆ ಸೋತ ಅಭಿಮಾನಿಗಳು.. ಜರ್ಸಿಯೊಳಗೆ ಬ್ಯಾಟ್, ಆಗಿದ್ದೇನು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ