/newsfirstlive-kannada/media/post_attachments/wp-content/uploads/2025/07/BIG_3_CHILDRENS.jpg)
ಬೆಂಗಳೂರು: ತನ್ನ ಅಣ್ಣನ ಮೂವರು ಮಕ್ಕಳ ಮೇಲೆ ಕ್ರೂರವಾಗಿ ದಾಳಿ ಮಾಡಿದ ತಮ್ಮ ಇಬ್ಬರ ಜೀವ ಬಲಿ ಪಡೆದಿದ್ದಾನೆ. ಇನ್ನೊಬ್ಬ ಬಾಲಕ ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮಸಂದ್ರದಲ್ಲಿ ಈ ಘಟನೆ ನಡೆದಿದೆ.
ಕಮ್ಮಸಂದ್ರದದ ಚಾಂದ್ ಪಾಷಾ ಅವರ ಮಕ್ಕಳಾದ ಮಹಮ್ಮದ್ ಇಶಾಕ್ (9) ಮಹಮ್ಮದ್ ಜುನೇದ್ (7) ಜೀವ ಸ್ಥಳದಲ್ಲೇ ಹೋಗಿದೆ. ಇನ್ನೊಬ್ಬ ಬಾಲಕ ಮಹಮದ್ ರೋಷನ್ (5) ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ. ಈ ಮಕ್ಕಳ ಚಿಕ್ಕಪ್ಪನಾದ ಖಾಸೀಂ (35) ಜೀವ ತೆಗೆದ ಆರೋಪಿ. ಖಾಸೀಂ ಮೂವರು ಮಕ್ಕಳ ಮೇಲೆ ಮನಬಂದಂತೆ ದಾಳಿ ಮಾಡಿದ್ದಾನೆ. ಇದರಿಂದ ಸ್ಥಳದಲ್ಲೇ ಇಬ್ಬರು ಮಕ್ಕಳು ಉಸಿರು ಚೆಲ್ಲಿದ್ದಾರೆ. ಇನ್ನೊಂದು ಮಗು ತೀವ್ರವಾಗಿ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿನ ಸ್ಥಿತಿ ಚಿಂತಾಜನಕವಾಗಿದೆ.
ಮನೆಯಲ್ಲಿ ಯಾರು ಇರಲಿಲ್ಲ. ಪೋಷಕರು ಕೆಲಸಕ್ಕೆ ಹೋಗಿದ್ದರು. ಅಜ್ಜಿಯೂ ತರಕಾರಿ ತರಲೆಂದು ಮಾರ್ಕೆಟ್ಗೆ ಹೋಗಿದ್ದಾಗ ಆರೋಪಿ ಈ ಕೃತ್ಯ ಎಸಗಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ. ಹೆಬ್ಬಗೋಡಿ ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಖಾಸೀಂನನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ದರ್ಶನ್ ಜಾಮೀನು ರದ್ದು ಆದ್ರೆ ಮುಂದಿನ ಆಯ್ಕೆ ಏನು.. ಮತ್ತೆ ಜೈಲು ಸೇರೋ ಸ್ಥಿತಿ ಬಂದ್ರೆ ಸಿನಿಮಾಗಳ ಕಥೆ?
ಮಕ್ಕಳ ಕಳೆದುಕೊಂಡ ತಂದೆ ಚಾಂದ್ ಪಾಷಾ ಮಾತನಾಡಿ, ನನ್ನ ತಮ್ಮ ಮಾನಸಿಕ ಅಸ್ವಸ್ಥನಂತೆ ವರ್ತನೆ ಮಾಡುತ್ತಿದ್ದನು. ಮನೆಯಲ್ಲಿ ಯಾರು ಇಲ್ಲದಾಗ ಏನಾಯಿತೋ ಏನೋ ಗೊತ್ತಿಲ್ಲ ಮೂವರು ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಇದರಲ್ಲಿ ಇಬ್ಬರು ಜೀವ ಹೋಗಿದೆ. ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ