newsfirstkannada.com

3 ದೇಶ, 6 ದಿನ, 40 ಕಾರ್ಯಕ್ರಮ; ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲಿ ಹಲವು ವಿಶೇಷ

Share :

19-05-2023

    2ನೇ ಮಹಾಯುದ್ಧಕ್ಕೆ ತುತ್ತಾದ ಹಿರೋಷಿಮಾಗೆ ಭೇಟಿ

    ಜಪಾನ್, ಪಪ್ಪುವಾ ನ್ಯೂ ಗಿನಿಯಾ, ಆಸ್ಟ್ರೇಲಿಯಾ

    ಜಾಗತಿಕ ಸಮಸ್ಯೆಗಳಿಗೆ ವಿಶ್ವ ನಾಯಕರ ಪರಿಹಾರ

ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ 6 ದಿನಗಳ ಕಾಲ 3 ದೇಶಗಳ ಪ್ರವಾಸ ಕೈಗೊಂಡಿದ್ದಾರೆ. ಜಪಾನ್, ಪಪ್ಪುವ ನ್ಯೂ ಗಿನಿಯಾ, ಆಸ್ಟ್ರೇಲಿಯಾ ಭೇಟಿ ನೀಡಲಿರುವ ನರೇಂದ್ರ ಮೋದಿ ಸುಮಾರು 40 ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.

ಇಂದು ಬೆಳಗ್ಗೆ 9 ಗಂಟೆಗೆ ಭಾರತದಿಂದ ಹೊರಡಲಿರುವ ಪ್ರಧಾನಿ ಮೋದಿ ಅವರು ಜಪಾನ್ ತಲುಪಲಿದ್ದಾರೆ. ಜಪಾನ್‌ನಲ್ಲಿ ಪ್ರಮುಖವಾಗಿ 2ನೇ ಮಹಾಯುದ್ಧದ ಸಂದರ್ಭದಲ್ಲಿ ಪರಮಾಣು ಬಾಂಬ್ ದಾಳಿಗೆ ತುತ್ತಾದ ಹಿರೋಷಿಮಾ ನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಮೇ 19 ರಿಂದ ಮೇ 21ರವರೆಗೂ ಜಪಾನ್‌ನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಜಪಾನ್‌ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು 7 ರಾಷ್ಟ್ರಗಳ ಪ್ರತಿನಿಧಿಗಳ G7 ಕ್ವಾಡ್ ಶೃಂಗಸಭೆಯಲ್ಲೂ ಭಾಗವಹಿಸಲಿದ್ದಾರೆ. ಈ ವೇಳೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್, ಜಪಾನ್ ಪ್ರಧಾನಿ, ಆಸ್ಟ್ರೇಲಿಯಾ ಪ್ರಧಾನಿಗಳ ನಿಯೋಗ ಕೂಡ ಭಾಗವಹಿಸಲಿದೆ. ಈ ಶೃಂಗಸಭೆಯಲ್ಲಿ ಜಾಗತಿಕ ಆರ್ಥಿಕ ಸವಾಲುಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ವಿಶ್ವದ ಪ್ರಮುಖ ನಾಯಕ ದ್ವಿಪಕ್ಷೀಯ ಮಾತಕತೆಗಳು ಬಹಳಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಜಪಾನ್ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೇ 22ರಂದು ಪಪ್ಪುವಾ ನ್ಯೂ ಗಿನಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಭಾರತ ಹಾಗೂ ಪಪ್ಪುವಾ ನ್ಯೂ ಗಿನಿಯಾ ಪ್ರಧಾನಿ ಜೇಮ್ಸ್ ಮಾರ್ಪೆ ಜೊತೆ ದ್ವೀಪ ರಾಷ್ಟ್ರಗಳ ಒಪ್ಪಂದಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಕೊನೆಯದಾಗಿ ಮಾರ್ಚ್ 23ರಂದು ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾ ದೇಶಕ್ಕೆ ಭೇಟಿ ನೀಡಲಿದ್ದು, ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೆಸ್ ಜೊತೆ ಮಹತ್ವದ ಸಭೆಗಳನ್ನ ನಡೆಸುತ್ತಿದ್ದಾರೆ. 6 ದಿನಗಳ ಕಾಲ 3 ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೇನಿಯಾ ಸದ್ದು ಮಾಡಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

3 ದೇಶ, 6 ದಿನ, 40 ಕಾರ್ಯಕ್ರಮ; ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲಿ ಹಲವು ವಿಶೇಷ

https://newsfirstlive.com/wp-content/uploads/2023/05/PM-Modi.jpg

Load More