newsfirstkannada.com

ರಾಮ ಮಂದಿರ ಉದ್ಘಾಟನೆಗೆ 3 ದಿನ ಬಾಕಿ.. ಕೆಲವು ರಾಜ್ಯಗಳಲ್ಲಿ ರಜೆ ಘೋಷಣೆ; ಕರ್ನಾಟಕದಲ್ಲಿ?

Share :

Published January 19, 2024 at 6:32am

Update January 19, 2024 at 6:33am

  ದೇವಭೂಮಿ ಅಯೋಧ್ಯೆಗೆ ಹರಿದು ಬರ್ತಿದೆ ಭಕ್ತಸಾಗರ!

  ಉತ್ತರ ಪ್ರದೇಶದಲ್ಲಿ ರಾಮೋತ್ಸವ.. ಭಕ್ತಿಯ ಭಜನೆಗೆ ರಜೆ

  ಪ್ರಾಣ ಪ್ರತಿಷ್ಠೆಯಂದು ಕೇಂದ್ರ ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ

ಅಯೋಧ್ಯೆಯಲ್ಲಿ ಇದೇ ಜನವರಿ 22ರಂದು ಭವ್ಯ ರಾಮಮಂದಿರದ ಲೋಕಾರ್ಪಣೆ ಆಗ್ತಿದೆ. ಆ ಶುಭ ದಿನಕ್ಕೆ ಕೋಟ್ಯಾನುಕೋಟಿ ಭಾರತೀಯರು, ದೇಶ, ವಿದೇಶದ ಭಕ್ತರು ಕಾಯ್ತಿದ್ದಾರೆ. ಇನ್ನು 3 ದಿನ ಕಳೆದ್ರೆ ಸಾಕು, ಮಂದಿರ ಉದ್ಘಾಟನೆ ಸೌಭಾಗ್ಯಕ್ಕೆ ದೇವಭೂಮಿ ಅಯೋಧ್ಯೆ ಸಾಕ್ಷಿ ಆಗಲಿದೆ.

ಭಾರತದ ದಶ ದಿಕ್ಕಿನಲ್ಲೂ ಶುರುವಾಯ್ತು ರಾಮೋತ್ಸವ!

ಕೇವಲ ಮೂರು ದಿನವಷ್ಟೇ ಬಾಕಿ. ಜನವರಿ 22. ಶುಭ ಸೋಮವಾರ. ಅಯೋಧ್ಯೆಯಲ್ಲಿ ದಶರಥ ನಂದನ ಉತ್ಸವ ನಡೆಯಲಿದೆ. ಅಲಂಕೃತ ದೇವಾಲಯದ ಪ್ರಾಂಗಣ, ರಾಮನ ಆಗಮನಕ್ಕೆ ಸಜ್ಜಾಗಿ ಕೂತಿದೆ. ಗರ್ಭಗುಡಿಯ ಪವಿತ್ರೀಕರಣಕ್ಕಾಗಿ ಶತಕೋಟಿ ಹಿಂದೂಗಳು ಕಾಯ್ತಿದ್ದಾರೆ. 5 ಆಗಸ್ಟ್ 2020 ರಂದು, ಕೋಟಿಗಟ್ಟಲೆ ಜನ, ಮಂದಿರದ ಭೂಮಿ ಪೂಜೆ ವೀಕ್ಷಿಸಿದ್ದರು. 198 ಚಾನಲ್​​ಗಳಲ್ಲಿ 17 ಕೋಟಿ ಜನ, ಈ ಕಾರ್ಯಕ್ರಮದ ನೇರಪ್ರಸಾರ ನೋಡಿದ್ದರು. ಈಗ ಆ ದಾಖಲೆಗಳು ಇತಿಹಾಸದ ಪುಟ ಸೇರೋ ಸಾಧ್ಯತೆ ಇದೆ.

ಕೇಂದ್ರ ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆಯ ಸಿಹಿ ಸುದ್ದಿ

ದೇಶದ ಪ್ರತಿಯೊಬ್ಬ ರಾಮಭಕ್ತನೂ ಈ ಸಮಾರಂಭವನ್ನ ಭಕ್ತಿ-ಭಾವದಲ್ಲಿ ನೋಡುವಂತೆ ಸಿದ್ಧತೆ ಆಗಿದೆ. ಜನವರಿ 22 ರಂದು ಯುಪಿಯಲ್ಲಿ ಎಲ್ಲಾ ಕಚೇರಿಗಳು ಬಂದ್​​​ ಆಗಲಿವೆ. ಜೊತೆಗೆ ಉತ್ತರ ಪ್ರದೇಶದ ಎಲ್ಲಾ ಶಾಲೆಗಳು ಮತ್ತು ಕಾಲೇಜುಗಳಿಗೆ ಆ ದಿನ ರಜೆ ಘೋಷಣೆ ಮಾಡಲಾಗಿದೆ. ಇಡೀ ಉತ್ತರ ಪ್ರದೇಶದಲ್ಲಿ ಆ ದಿನ ಮಾಂಸ ಮತ್ತು ಮದ್ಯದ ಅಂಗಡಿಗಳು ಬಂದ್​​​ ಆಗಿರಲಿವೆ. ಅಷ್ಟಕ್ಕೂ ಯಾವ್ಯಾವ ರಾಜ್ಯಗಳಲ್ಲಿ ಸದ್ಯ ರಜೆ ಘೋಷಿಸಲಾಗಿದೆ ಎಂದು ನೋಡೋದಾದ್ರೆ,

ಯಾವೆಲ್ಲಾ ರಾಜ್ಯಗಳಲ್ಲಿ ರಜೆ?

ಮಧ್ಯಪ್ರದೇಶ : ಪ್ರಾಣ ಪ್ರತಿಷ್ಠೆಯ ದಿನದಂದು ಶಾಲೆಗಳಿಗೆ ರಜೆ
ಛತ್ತೀಸ್‌ಗಢ : ಎಲ್ಲಾ ಶಾಲೆಗಳಿಗೆ ಸರ್ಕಾರದಿಂದ ರಜೆ ಘೋಷಣೆ
ಗೋವಾ : ಶಾಲೆಗಳು, ಕಛೇರಿಗಳಿಗೆ ಸರ್ಕಾರಿ ರಜೆ ಇರಲಿದೆ
ಹರಿಯಾಣ : ಶಾಲೆಗಳಿಗೆ ರಜೆ ಘೋಷಣೆ ಮಾಡಿರುವ ಸರ್ಕಾರ
ಒಡಿಶಾ : ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ
ಗುಜರಾತ್ : ಜನವರಿ 22ರಂದು ಅರ್ಧ ದಿನ ಎಂದು ಘೋಷಣೆ

ಇನ್ನು ಇವತ್ತು ಬಿಜೆಪಿ ಆಡಳಿತವಿರುವ ಬೇರೆ ರಾಜ್ಯಗಳಲ್ಲೂ ರಜೆ ಘೋಷಣೆ ಆಗೋ ಸಾಧ್ಯತೆ ಇದೆ. ಇತ್ತ, ಪ್ರಾಣಪ್ರತಿಷ್ಠಾ ಸಮಾರಂಭವನ್ನ ನೇರಪ್ರಸಾರ ವೀಕ್ಷಿಸಲು ಕೇಂದ್ರ ಸರ್ಕಾರ ಸಹ ಜನವರಿ 22ರ ಮಧ್ಯಾಹ್ನ 2.30ರವರೆಗೆ ರಜೆ ಘೋಷಣೆ ಮಾಡಿದೆ.

ಇತ್ತ, ರಾಜ್ಯದಲ್ಲೂ ಇದೇ ಆಗ್ರಹ ಕೇಳಿ ಬರ್ತಿದೆ. ಜನವರಿ 22 ರಂದು ದಕ್ಷಿಣ ಕನ್ನಡ ಜಿಲ್ಲೆ ಎಲ್ಲಾ ಖಾಸಗಿ ಸಂಸ್ಥೆಗಳಿಗೆ‌ ರಜೆ ಘೋಷಿಸಲು ಮನವಿ ವಿಶ್ವ ಹಿಂದೂ ಪರಿಷತ್​​ ಒತ್ತಾಯಿಸಿದೆ. ಜಿಲ್ಲೆಯಾದ್ಯಂತ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನರಿಗೆ ಭಾಗವಹಿಸಲು ಅನುವು ಮಾಡುವಂತೆ ಮನವಿ ಮಾಡಿದೆ..

ಅಯೋಧ್ಯೆಯ ರಾಮಮಂದಿರ ಬಳಿ ಲೇಸರ್​ ಶೋ

ಅಯೋಧ್ಯೆಯಲ್ಲಿ ಜನ, ರಾಮಭಕ್ತಿಯಲ್ಲಿ ಮಿಂದೇಳ್ತಿದ್ದಾರೆ. ಪ್ರತಿದಿನವೂ ಲೇಸರ್ ಶೋನಲ್ಲಿ ರಾಮನ ಚರಿತ್ರೆ ಅರಳ್ತಿದೆ. ಸರಯೂ ನದಿ ತೀರದಲ್ಲಿ ನಿನ್ನೆ ಲೇಸರ್ ಶೋ ಆಯೋಜಿಸಲಾಗಿತ್ತು.. ರಾಮನೂರಲ್ಲಿ ಬಣ್ಣಬಣ್ಣದ ಲೈಟಿಂಗ್ಸ್​ ಚಿತ್ತಾರ ಮೂಡಿಸಿದ್ವು.

ಇನ್ನು, ಅಯೋಧ್ಯೆಯಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ವಾದ್ಯ ನುಡಿಸಲು ಕರ್ನಾಟಕದಿಂದ ಮಂಗಳವಾದ್ಯ ತಂಡ ತೆರಳ್ತಿದೆ. 48 ದಿನಗಳ ಕಾಲ ಅಯೋಧ್ಯೆಯಲ್ಲಿ ಬಾಲ ರಾಮನಿಗೆ ರಾಗ ಸೇವೆ ನೀಡಲಿದ್ದಾರೆ. ರಾಮನಗರ ಜಿಲ್ಲೆಯ ವಿಜಿಕುಮಾರ್ ಮತ್ತವರ ವಾದ್ಯ ತಂಡ ಅಯೋಧ್ಯೆಗೆ ತೆರಳ್ತಿದೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮ ಮಂದಿರ ಉದ್ಘಾಟನೆಗೆ 3 ದಿನ ಬಾಕಿ.. ಕೆಲವು ರಾಜ್ಯಗಳಲ್ಲಿ ರಜೆ ಘೋಷಣೆ; ಕರ್ನಾಟಕದಲ್ಲಿ?

https://newsfirstlive.com/wp-content/uploads/2024/01/Ayodhya-Ramamandira.jpg

Load More