ಲಾರಿ ಡಿಕ್ಕಿ ಹೊಡೆದು 3 ಆನೆಗಳ ದಾರುಣ ಸಾವು

author-image
Harshith AS
Updated On
ಲಾರಿ ಡಿಕ್ಕಿ ಹೊಡೆದು 3 ಆನೆಗಳ ದಾರುಣ ಸಾವು
Advertisment
  • ರಾತ್ರೋ ರಾತ್ರಿ ಆನೆಗಳ ಹಿಂಡಿಗೆ ಡಿಕ್ಕಿ ಹೊಡೆದ ಕ್ಯಾಂಟರ್​ ಲಾರಿ
  • ಚಾಲಕನ ತಪ್ಪಿಗೆ ರಸ್ತೆ ಮೇಲೆಯೇ ಉಸಿರು ಚೆಲ್ಲಿದ ಮೂರು ಆನೆಗಳು
  • ಅತಿಯಾದ ವೇಗವೇ ಆನೆಗಳ ಸಾವಿಗೆ ಕಾರಣನಾ? ಈ ಸಾವು ನ್ಯಾಯವೇ?

ಆಂಧ್ರಪ್ರದೇಶ: ಆನೆಗಳ ಹಿಂಡಿನ ಮೇಲೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮೂರು ಆನೆಗಳು ದಾರುಣ ಸಾವನ್ನಪ್ಪಿದ ಘಟನೆ ತಿರುಪತಿ -ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪಲಮನೇರು ಬಳಿ ನಡೆದಿದೆ.

ಲಾರಿ ಬಿಟ್ಟು ಚಾಲಕ ಪರಾರಿ

ಪಲಮನೇರು ಸಮೀಪದ ಜಮರ್ಲ ಅರಣ್ಯದಲ್ಲಿ ಬಳಿ ರಸ್ತೆ ದಾಟುತ್ತಿದ್ದ ಆನೆಗಳಿಗೆ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಗುದ್ಡಿದ ರಭಸಕ್ಕೆ ಪಕ್ಕದ ಕ್ರಾಷ್ ಬ್ಯಾರಿಯರ್​ಗೆ ಆನೆ ಮರಿಗಳು ಎಗರಿ ಬಿದ್ದ್ದಿವೆ. ಅಪಘಾತ ನಡೆದ ಬಳಿಕ ಚಾಲಕ ಲಾರಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.

publive-image

ಅತಿಯಾದ ವೇಗವೇ ಕಾರಣ

ಕೌಂಡಿನ್ಯ ಅಭಯಾರಣ್ಯದ ಎಚ್ಚರಿಕೆ ಬೋರ್ಡ್ ಲಗತ್ತಿಸಿದ್ದರು ಲಾರಿ ಚಾಲಕ ಅತಿ ವೇಗದಲ್ಲಿ ಲಾರಿ ಚಲಾಯಿಸುತ್ತಾ ಬಂದಿದ್ದಾನೆ. ಲಾರಿ ತುಂಬಾ ತರಕಾರಿ ತುಂಬಿಕೊಂಡು ಪಲಮನೇರು ನಿಂದ ಚೆನೈ ಗೆ ಕಡೆಗೆ ತೆರಳಿದ್ದನು. ಆದರೆ ಅತಿಯಾದ ರಭಸದಿಂದ ಕ್ಯಾಂಟರ್ ಲಾರಿ ಮೂರು ಆನೆಗಳಿಗೆ ಗುದ್ದಿದೆ.

ಘಟನಾ ಸ್ಥಳಕ್ಕೆ ಚಿತ್ತೂರು ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿ ಚೈತನ್ಯ ಕುಮಾರ್ ರೆಡ್ಡಿ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಬಳಿಕ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment