ಜಮ್ಮು ಕಾಶ್ಮೀರದಿಂದ ಆಘಾತಕಾರಿ ಸುದ್ದಿ; ಹುತಾತ್ಮರಾದ ಐವರಲ್ಲಿ ಮೂವರು ಕನ್ನಡಿಗರು

author-image
Veena Gangani
Updated On
ಜಮ್ಮು ಕಾಶ್ಮೀರದಿಂದ ಆಘಾತಕಾರಿ ಸುದ್ದಿ; ಹುತಾತ್ಮರಾದ ಐವರಲ್ಲಿ ಮೂವರು ಕನ್ನಡಿಗರು
Advertisment
  • ಟ್ರಕ್​ ಅಪಘಾತದಲ್ಲಿ ಕರ್ನಾಟಕ ಮೂಲದ 3 ಯೋಧರು ಹುತಾತ್ಮ
  • 25 ವರ್ಷದ ಬಾಗಲಕೋಟೆ ಮೂಲದ ಯೋಧ ಮಹೇಶ್ ನಿಧನ
  • ದುರಂತದಲ್ಲಿ ಚಿಕ್ಕೋಡಿ ತಾಲೂಕಿನ ಯೋಧ ದಯಾನಂದ್ ಇನ್ನಿಲ್ಲ

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದ ಬಲ್ನೋಯಿ ಪ್ರದೇಶದಲ್ಲಿ ಸೇನಾ ವಾಹನ ಕಮರಿಗೆ ಉರುಳಿ ಬಿದ್ದಿದ್ದೆ. ಪರಿಣಾಮ ಐವರು ಯೋಧರು ಮೃತಪಟ್ಟಿದ್ದು, ಇನ್ನೂ ಐವರಿಗೆ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

publive-image

ಸೇನಾ ವಾಹನ ಕಮರಿಗೆ ಉರುಳಿಬಿದ್ದ ಪರಿಣಾಮ ಮೃತಪಟ್ಟ ಐವರಲ್ಲಿ ಮೂವರು ಕರ್ನಾಟಕ ಮೂಲದವರು ಎಂದು ತಿಳಿದುಬಂದಿದೆ. ಸೇನಾ ವಾಹನಲ್ಲಿ 18 ಯೋಧರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇವರಲ್ಲಿ 5 ಮಂದಿ ಹುತಾತ್ಮರಾಗಿದ್ದಾರೆ. ಉಳಿದವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಸೇನಾಧಿಕಾರಿಗಳು ಆಗಮಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಅತಿಥಿ ಮಂಜು ಕಾಟಕ್ಕೆ ಕಣ್ಣೀರಿಟ್ಟ ಮ್ಯಾನೇಜರ್ ಭವ್ಯ ಗೌಡ; ರಿವೇಂಜ್ ಇದೆ ಎಂದು ರಜತ್ ವಾರ್ನಿಂಗ್

ಸೇನಾ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ಕಂದಕಕ್ಕೆ ಬಿದ್ದಿದೆ. ಈ ಟ್ರಕ್​ನಲ್ಲಿ ಮೂವರು ಕರ್ನಾಟಕ ಮೂಲದ ಯೋಧರು ಕೂಡ ಪ್ರಯಾಣಿಸುತ್ತಿದ್ದರು. ಈ ದುರಂತದಲ್ಲಿ ಕರ್ನಾಟಕ ಮೂಲದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಪ್ಪನವಾಡಿ ಗ್ರಾಮದ ದಯಾನಂದ್ ಎಂಬುವವರು ಹುತಾತ್ಮರಾಗಿದ್ದಾರೆ.

publive-image

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಪ್ಪನವಾಡಿ ಗ್ರಾಮದ ದಯಾನಂದ್ ಎಂಬುವವರು ಹುತಾತ್ಮರಾಗಿದ್ದಾರೆ. ಮೃತ ಯೋಧ ದಯಾನಂದ್ ಮಣಿಪೂರದ ಬೊಂಬಾಲಾ ಕ್ಷೇತ್ರದಲ್ಲಿ‌ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಇದೇ ಕಾರ್ಯ ನಿರ್ವಹಣೆ ಮಾಡುವಾಗ ಏಕಾಏಕಿ ಗುಡ್ಡ ಕುಸಿತಗೊಂಡಿದೆ. ಪರಿಣಾಮ ಸೇನೆಯ 2.5 ಡೈಟನ್ ವಾಹನ‌ ಪಲ್ಟಿಯಾಗಿದೆ. ವಾಹನದಲ್ಲಿ ಒಟ್ಟು 6 ಯೋಧರು ಪ್ರಯಾಣ ಮಾಡುತ್ತಿದ್ದರಂತೆ. ಇದೇ ವೇಳೆ ಯೋಧ ದಯಾನಂದ್ ​ಹುತಾತ್ಮರಾಗಿದ್ದಾರೆ. ಇವರಿಗೆ ಇಬ್ಬರು ಗಂಡು‌ ಮಕ್ಕಳಿದ್ದಾರೆ.

ಇದನ್ನೂ ಓದಿ: ಆಯತಪ್ಪಿ ಕಂದಕಕ್ಕೆ ಬಿದ್ದ ಸೇನೆಯ ಟ್ರಕ್​; ಚಿಕ್ಕೋಡಿ ಮೂಲದ ಸೈನಿಕ ಧರ್ಮರಾಜ್ ಹುತಾತ್ಮ!

ಈ ವಿಚಾರ ತಿಳಿಯುತ್ತಿದ್ದಂತೆ ದಯಾನಂದ್ ಮನೆಯಲ್ಲಿ ನೀರವಮೌನ ಆವರಿಸಿದೆ. ಅಲ್ಲದೇ ನಿನ್ನೆ ಮರಣೋತ್ತರ ಪರೀಕ್ಷೆಗೆ ತಡವಾದ ಹಿನ್ನೆಲೆಯಲ್ಲಿ ಯೋಧ ದಯಾನಂದ್ ಅವರ ಪಾರ್ಥಿವ ಶರೀರ ನಾಳೆ ಮಧ್ಯಾಹ್ನ ಸ್ವ-ಗ್ರಾಮ ಕುಪ್ಪನವಾಡಿಗೆ ಬಂದು ತಲುಪಲಿದೆ. ಯೋಧನ ಪಾರ್ಥಿವ ಶರೀರ ಗೋವಾಗೆ ಬಂದು ಗೋವಾದಿಂದ ರಸ್ತೆ ಮೂಲಕ ಕುಪ್ಪವಾಡ ಗ್ರಾಮಕ್ಕೆ ಬರಲಿದೆ. ಈಗಾಗಲೇ ಸ್ವ ಗ್ರಾಮದಲ್ಲಿ‌ ಅಂತ್ಯಕ್ರಿಯೆಗೆ ಗ್ರಾಮಸ್ಥರು ಸಕಲ ಸಿದ್ದತೆ ನಡೆಸಿಕೊಳ್ಳುತ್ತಿದ್ದಾರೆ.

publive-image

ಇದೇ ದುರಂತದಲ್ಲಿ ಮತ್ತೊಬ್ಬ ಬಾಗಲಕೋಟೆ ಮೂಲದ ಯೋಧ ಮಹೇಶ್ ನಾಗಪ್ಪ ಮಾರಿಗೊಂಡ (25) ಮೃತಪಟ್ಟಿದ್ದಾರೆ. ಇವರು ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ನಿವಾಸಿಯಾಗಿದ್ದಾರೆ. ಸೇನಾವಾಹನ ಪ್ರಪಾತಕ್ಕೆ ಬಿದ್ದು ಐದು ಯೋಧರಲ್ಲಿ ಮಹೇಶ್ ನಾಗಪ್ಪ ಮಾರಿಗೊಂಡ ಒಬ್ಬರು. 11ನೆ ಮರಾಠಾ ರೆಜಿಮೆಂಟ್​ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೆಂಡರ್ ಎಂಬ ಪ್ರದೇಶಕ್ಕೆ ಕರ್ತವ್ಯಕ್ಕೆ ಹೊರಟಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

publive-image

ಮೃತರಲ್ಲಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಬಿಜಾಡಿಯ ಯೋಧ ಅನೂಪ್ ಕೂಡ ಒಬ್ಬರಾಗಿದ್ದಾರೆ. ಮೃತ ಯೋಧ ಅನೂಪ್​ ಕಳೆದ 13 ವರ್ಷಗಳಿಂದ ಸೇನೆಯಲ್ಲಿದ್ದರು. ಇವರಿಗೆ ಎರಡು ವರ್ಷದ ಪುಟ್ಟ ಇದೆ. ಅನೂಪ್ ಅವರ ಸಾವಿನ ಬಗ್ಗೆ ಕುಟುಂಬದವರಿಗೆ ಈಗಷ್ಟೇ ಮಾಹಿತಿ ತಿಳಿದಿದೆ.

ಅಲ್ಲದೇ ಮಣಿಪುರದಲ್ಲಿ ಮತ್ತೊಂದು ಸೇನಾ ವಾಹನದ ಮೇಲೆ ಗುಡ್ಡ ಕುಸಿತಕೊಂಡಿದೆ. ಈ ಅಪಘಾತ ಇಬ್ಬರು ಯೋಧರ ಸಾವನ್ನಪ್ಪಿದ್ದಾರೆ. ಇವರಲ್ಲಿ ಕರ್ನಾಟಕದ ಓರ್ವ ಯೋಧ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭವ್ಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment