newsfirstkannada.com

3 ಲಕ್ಷದ 60 ಸಾವಿರ ಯೋಧರು; ಇಸ್ರೇಲ್‌ನಲ್ಲಿ ದಿಢೀರನೇ ಇಷ್ಟು ದೊಡ್ಡ ಸೇನೆ ರೆಡಿಯಾಗಿದ್ದು ಹೇಗೆ? ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ

Share :

Published October 11, 2023 at 5:26pm

    ಹಮಾಸ್ ಉಗ್ರರಿಗೆ ಪ್ರತ್ಯುತ್ತರ ನೀಡಲು ಲಕ್ಷ, ಲಕ್ಷ ಯೋಧರು ರೆಡಿ

    ರಕ್ತಕ್ಕೆ ರಕ್ತ ಹರಿಸಲು ಮುನ್ನುಗಿರುವ ಇಸ್ರೇಲ್ ಶಸ್ತ್ರ ಸಜ್ಜಿತ ಯೋಧರು

    ಇದುವರೆಗೂ ಯಾವುದೇ ಒಂದು ಯುದ್ಧದಲ್ಲಿ ಇಸ್ರೇಲ್‌ ಸೋತಿಲ್ಲ ಹೇಗೆ?

ಇಸ್ರೇಲ್‌ ದೇಶದೊಳಗೆ ನುಗ್ಗಿದ ಹಮಾಸ್ ಉಗ್ರರು ಸಿಕ್ಕ, ಸಿಕ್ಕವರ ಕೊಂದು ಮಾರಣಹೋಮಕ್ಕೆ ಕಾರಣವಾದರು. ಇಸ್ರೇಲ್‌ನಲ್ಲಿ ಹೆಣಗಳ ಪರ್ವತ ಸೃಷ್ಟಿಸಿದ ಹಮಾಸ್‌ ಉಗ್ರರಿಗೆ ತಕ್ಕ ಪ್ರತ್ಯುತ್ತರ ನೀಡಲು ನಾಗರಿಕರು ಸಜ್ಜಾಗಿದ್ದಾರೆ. ಗಾಜಾ ಪಟ್ಟಿಗೆ ನುಗ್ಗುತ್ತಿರುವ ಇಸ್ರೇಲ್ ಯೋಧರು ರಕ್ತಕ್ಕೆ ರಕ್ತ ಹರಿಸುತ್ತಿದ್ದಾರೆ. ಹಮಾಸ್‌ ಉಗ್ರರ ದಾಳಿಯ ಬಳಿಕ ಇಷ್ಟು ದೊಡ್ಡ ಸಂಖ್ಯೆಯ ಇಸ್ರೇಲ್‌ ಸೇನೆ ರೆಡಿಯಾದ ಸಂಗತಿಯೇ ರೋಚಕವಾಗಿದೆ.

ಇಸ್ರೇಲ್ ದೇಶದಲ್ಲಿ ಇರೋ ಜನಸಂಖ್ಯೆಯೇ ಸುಮಾರು 9 ಲಕ್ಷಕ್ಕೂ ಅಧಿಕ. ಇದರಲ್ಲಿ ಹಮಾಸ್ ಉಗ್ರರಿಗೆ ಪ್ರತ್ಯುತ್ತರ ನೀಡಲು ಇದೀಗ 3 ಲಕ್ಷದ 60 ಸಾವಿರ ಮೀಸಲು ಪಡೆಯ ಯೋಧರು ರೆಡಿಯಾಗಿದ್ದಾರೆ. ಅಬ್ಬಾ.. ಕೇವಲ ಎರಡರಿಂದ ಮೂರು ದಿನದಲ್ಲಿ ಇಸ್ರೇಲ್‌ ದೇಶ ಇಷ್ಟು ದೊಡ್ಡ ಮಟ್ಟದ ಯೋಧರನ್ನು ಸಮರಕ್ಕೆ ಸಜ್ಜುಗೊಳಿಸಿದೆ. ನಿಜಕ್ಕೂ ಇದು ಸಾಮಾನ್ಯವಾದ ವಿಷಯವಲ್ಲ.

ಹಮಾಸ್ ಉಗ್ರರ ಭಯಾನಕ ದಾಳಿಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಕೆರಳಿ ಕೆಂಡವಾಗಿದ್ದಾರೆ. ಏನೇ ಆಗಲಿ ಹಮಾಸ್ ಉಗ್ರರನ್ನು ಮಟ್ಟ ಹಾಕಲು ಪಣತೊಟ್ಟಿರುವ ಬೆಂಜಮಿನ್‌ ಅವರು ಯುದ್ಧಕ್ಕೆ ಸೇನೆಯನ್ನು ಸಜ್ಜುಗೊಳಿಸಿದ್ದಾರೆ. ತರಬೇತಿ ಬಿಟ್ಟು ರಜೆ ಮೇಲೆ ತೆರಳಿದ್ದ ಯೋಧರನ್ನು ಯುದ್ಧಭೂಮಿಗೆ ಕರೆಸಿಕೊಂಡಿದ್ದಾರೆ. ಸಾವಿರಾರು ಸಂಖ್ಯೆಯ ಮೀಸಲು ಪಡೆಯ ಯೋಧರು ಗಾಜಾ ಪಟ್ಟಿಯ ಗಡಿಗೆ ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಪ್ಯಾಲೆಸ್ಟೈನ್​​ ವಿರುದ್ಧ ಯುದ್ಧ; ಹೆತ್ತ ಮಗನನ್ನೇ ಅಖಾಡಕ್ಕಿಳಿಸಿ ದೇಶಪ್ರೇಮ ಮೆರೆದ ಇಸ್ರೇಲ್​ ಪ್ರಧಾನಿ..!

ಇಷ್ಟು ದೊಡ್ಡ ಸೇನೆ ರೆಡಿಯಾಗಿದ್ದು ಹೇಗೆ?

ಇಸ್ರೇಲ್‌ ಒಂದೇ ಒಂದು ಯುದ್ಧದಲ್ಲಿ ಸೋತರೆ ಇಡೀ ದೇಶವೇ ಸರ್ವನಾಶವಾಗುತ್ತೆ. ಹೀಗಾಗಿ ಇದುವರೆಗೂ ಎಂದಿಗೂ ಇಸ್ರೇಲ್‌ ಯುದ್ಧದಲ್ಲಿ ಸೋತಿಲ್ಲ. ಈ ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಸೇನೆಯಲ್ಲಿ ಕೆಲಸ ಮಾಡೋದು ಕಡ್ಡಾಯ. ಪುರುಷರಿಗೆ ಎರಡೂವರೆ ವರ್ಷ, ಯುವತಿಯರಿಗೆ 2 ವರ್ಷ ಸೇನಾ ಸೇವೆ ಕಡ್ಡಾಯವಾಗಿದೆ. ಹೀಗಾಗಿಯೇ 40 ವರ್ಷದೊಳಗಿನವರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಇಸ್ರೇಲ್‌ನ ಡಿಫೆನ್ಸ್ ಪೋರ್ಸ್ ಆಗಾಗ ಯುವಕರಿಗೆ ತರಬೇತಿ, ಕೌಶಲ್ಯ ತರಬೇತಿ ನೀಡುತ್ತಾ ಇರುತ್ತದೆ. ಮೀಸಲು ಪಡೆಯ ಯೋಧರಿಗೂ ಅಲ್ಪಾವಧಿ, ದೀರ್ಘಾವಧಿ ತರಬೇತಿ ನೀಡಲಾಗುತ್ತದೆ.

3 ಲಕ್ಷದ 60 ಸಾವಿರ ಯೋಧರನ್ನು ಸಜ್ಜುಗೊಳಿಸಿರುವ ಇಸ್ರೇಲ್‌ ಸದ್ಯ ಹಮಾಸ್ ದಾಳಿ ನಡೆಸಿದ್ದ ಪ್ರದೇಶಗಳ ಮೇಲೆ ಮರು ನಿಯಂತ್ರಣ ಸಾಧಿಸಿದೆ. ಗಾಜಾ ಪಟ್ಟಿಯನ್ನು ಸಂಪೂರ್ಣ ನೆಲೆಸಮ ಮಾಡುವ ಶಪಥ ಕೈಗೊಂಡು ಮುನ್ನುಗ್ಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

3 ಲಕ್ಷದ 60 ಸಾವಿರ ಯೋಧರು; ಇಸ್ರೇಲ್‌ನಲ್ಲಿ ದಿಢೀರನೇ ಇಷ್ಟು ದೊಡ್ಡ ಸೇನೆ ರೆಡಿಯಾಗಿದ್ದು ಹೇಗೆ? ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ

https://newsfirstlive.com/wp-content/uploads/2023/10/ISRAIL-Army.jpg

Load More