/newsfirstlive-kannada/media/post_attachments/wp-content/uploads/2023/06/SSLC_RESULT.jpg)
ಬೆಂಗಳೂರು: ಇಷ್ಟು ದಿನ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದರು. ಅದರಂತೆ ಇಂದು 12.30ಕ್ಕೆ ಕರ್ನಾಟಕ ಪರೀಕ್ಷಾ ಮಂಡಳಿ SSLC ಫಲಿತಾಂಶ ಪ್ರಕಟ ಮಾಡಿದೆ. ಅದರಲ್ಲಿ SSLC ಪರೀಕ್ಷೆಯಲ್ಲಿ ಈ ಬಾರಿ ಬರೋಬ್ಬರಿ 22 ಮಕ್ಕಳು 625ಕ್ಕೆ 625 ಅಂಕವನ್ನು ತೆಗೆದು ಗಮನ ಸೆಳೆದಿದ್ದಾರೆ.
ಇದನ್ನೂ ಓದಿ:SSLC ಫಲಿತಾಂಶ: ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ: 625ಕ್ಕೆ 625 ತೆಗೆದ ಮಕ್ಕಳು ಎಷ್ಟು?
ಇಂದು ಪ್ರಕಟವಾಗಿರೋ ಎಸ್ಎಸ್ಎಲ್ಸಿ -1ರ ಫಲಿತಾಂಶದಲ್ಲಿ ಪರೀಕ್ಷೆಗೆ ಹಾಜರಾದ ಗಂಡು ಮಕ್ಕಳಲ್ಲಿ 58.07%, ಹೆಣ್ಣು ಮಕ್ಕಳು 74.00% ರಷ್ಟು ಪಾಸ್ ಆಗಿದ್ದಾರೆ. ಆದ್ರೆ ಈ ಬಾರಿ ರಾಜ್ಯದಲ್ಲಿ ಬರೋಬ್ಬರಿ 3 ಲಕ್ಷ 17 ಸಾವಿರದ 189 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ. ಹೀಗಾಗಿ ಫೇಲಾದ ವಿದ್ಯಾರ್ಥಿಗಳು ಬೇಸರ ಆಗಿಬೇಡಿ. ನಿಮಗಾಗಿಯೇ ಶಿಕ್ಷಣ ಇಲಾಖೆ ಡಬಲ್ ಅವಕಾಶವನ್ನು ಕೊಟ್ಟಿದ್ದಾರೆ.
ಹೌದು, ಈ ಬಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳು ಮತ್ತೆ ಎರಡು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಒಂದು ಮೇ 26ರಿಂದ ಜೂನ್ 2ಕ್ಕೆ ಮುಕ್ತಾಯಗೊಳ್ಳಲಿವೆ. ಅದಾದ ಬಳಿಕವೇ ಈ ಪರೀಕ್ಷೆಯಲ್ಲೂ ಫೇಲಾದ ವಿದ್ಯಾರ್ಥಿಗಳಿ ಮತ್ತೆ ಜೂನ್ 23ರಿಂದ 30ರವರೆಗೆ ಪರೀಕ್ಷೆ ನಡೆಯಲಿವೆ. ಹೀಗಾಗಿ ಈ ಬಾರಿ SSLC ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಪಾಸ್ ಮಾಡಿಕೊಳ್ಳಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ