ಚಿಗಳ್ಳಿ ದೀಪ ಆರುವ 14 ದಿನಗಳ ಹಿಂದಷ್ಟೇ ನಡೆದಿತ್ತು ನೋವಿನ ಘಟನೆ.. ಈ ನಂದಾದೀಪದ ಇತಿಹಾಸವೇನು?

author-image
Bheemappa
Updated On
ಚಿಗಳ್ಳಿ ದೀಪ ಆರುವ 14 ದಿನಗಳ ಹಿಂದಷ್ಟೇ ನಡೆದಿತ್ತು ನೋವಿನ ಘಟನೆ.. ಈ ನಂದಾದೀಪದ ಇತಿಹಾಸವೇನು?
Advertisment
  • ನಾಲ್ಕು ದಶಕದಿಂದ ಉರಿಯುತ್ತಿದ್ದ ನಂದಾದೀಪದ ಇತಿಹಾಸವೇನು?
  • ದಶಕಗಳ ಬಳಿಕ ಶಾಂತವಾಗಿರುವ ದೀಪಗಳು ಗ್ರಾಮಸ್ಥರಲ್ಲಿ ಆತಂಕ
  • ಎಣ್ಣೆ, ಬತ್ತಿ ಇಲ್ಲದೇ ಉರಿಯುತ್ತಿದ್ದ ನಂದಾದೀಪಗಳು ಆರಿಹೋಗಿದ್ದೇಕೆ?

ಕಳೆದ 46 ವರ್ಷಗಳಿಂದ ಉರಿಯುತ್ತಿದ್ದ ದೀಪಗಳು ಆರಿ ಹೋಗಿವೆ. ಎಣ್ಣೆ ಹಾಗೂ ಬತ್ತಿಯೇ ಇಲ್ಲದೇ ಉರಿಯುತ್ತಿದ್ದ ದೀಪಗಳು ಇದೀಗ ಶಾಂತವಾಗಿದೆ. ಆರಿಹೋದ ದೀಪಗಳನ್ನ ನೋಡಲು ಬರುತ್ತಿರೋ ಸಾರ್ವಜನಿಕರು. ದೀಪ ಆರಿಹೋಗಿರುವ ಹಿಂದೆ ಊರಿಗೆ ಕೇಡುಗಾಲ ಕಾದಿದೆಯಾ?.

ಕಳೆದ 47 ವರ್ಷಗಳಿಂದ ಎಣ್ಣೆ, ಬತ್ತಿ ಇಲ್ಲದೇ ಉರಿಯುತ್ತಿದ್ದ ದೀಪಗಳು ಮೊನ್ನೆ ಮೊನ್ನೆ ಆರಿ ಹೋಗಿವೆ. ಆರಿದ ದೀಪಗಳಿಂದ ಊರಿಗೆ ಏನಾದರೂ ಕೇಡುಗಾಲ ಇದೆಯಾ ಅನ್ನುವುದು ಯಾರಿಗೂ ತಿಳಿದಿಲ್ಲ. ಆದರೆ ಈ ಆರಿಹೋದ ದೀಪಗಳನ್ನ ನೋಡಲು ಸಾರ್ವಜನಿಕರು ಚಿಗಳ್ಳಿಗೆ ಆಗಮಿಸುತ್ತಿದ್ದಾರೆ.

publive-image

ಇದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಚಿಗಳ್ಳಿಯ ದೀಪನಾಥೇಶ್ವರ ದೇವಸ್ಥಾನದಲ್ಲಿ ಕಳೆದ 46 ವರ್ಷಗಳಿಂದ ಎಣ್ಣೆ, ಬತ್ತಿ ಇಲ್ಲದೇ ಉರಿಯುತ್ತಿದ್ದ 3 ನಂದಾದೀಪಗಳು ಆರಿಹೋಗಿದೆ. ಕಳೆದ 14 ದಿನಗಳ ಹಿಂದೆ ದೇವಸ್ಥಾನವನ್ನ ನಿರ್ವಹಣೆ ಮಾಡ್ತಿದ್ದ ವೆಂಕಟೇಶ್ ದೈವಜ್ಞ ಅನಾರೋಗ್ಯದಿಂದ ಕೊನೆಯುಸಿರು ಎಳೆದಿದ್ದರು. ಅಂದಿನಿಂದ ದೇವಸ್ಥಾನದ ಬಾಗಿಲು ಮುಚ್ಚಲಾಗಿತ್ತು. ಸೂತಕ ಮುಗಿದ ನಂತರ ಬುಧವಾರ ಸಂಜೆ ದೇವಸ್ಥಾನದ ಬಾಗಿಲನ್ನ ತೆರೆದು ನೋಡಿದಾಗ 3 ದೀಪಗಳು ಆರಿ ಹೋಗಿದ್ದನ್ನ ಕಂಡು ಗ್ರಾಮಸ್ಥರು ದಿಗ್ಬ್ರಾಂತರಾಗಿದ್ದಾರೆ.

ಶಾರದಾಬಾಯಿ- ಅಣ್ಣಪ್ಪ ದೈವಭಕ್ತ ದಂಪತಿ

ಹಾಗಿದ್ರೆ ಈ ನಂದಾದೀಪದ ಇತಿಹಾಸವೇನು ಎಂದು ನೋಡೋದಾದ್ರೆ, ಈ ಹಿಂದೆ ಹಲವು ಶರಣ ಹಾಗೂ ಸಂತರು ಚಿಗಳ್ಳಿಯಲ್ಲಿ ವಾಸಿಸ್ತಿದ್ದರು. ಆ ಶರಣರಲ್ಲಿ ಮೂವರು ಕಾಲವಾದ್ರು. 1978ರ ಕಾಲಘಟ್ಟದಲ್ಲಿ ಶಾರದಾಬಾಯಿ ಹಾಗೂ ಅಣ್ಣಪ್ಪ ಅನ್ನೋ ದೈವಭಕ್ತ ದಂಪತಿ ಇಲ್ಲಿ ವಾಸವಿದ್ದರು. ಅಂದಿನ ದಿನಗಳಲ್ಲಿ ವಿದ್ಯುತ್ ಇಲ್ಲದ್ರಿಂದ ಚಿಮಣಿ ದೀಪವೇ ಮನೆಯನ್ನ ಬೆಳಗುತ್ತಿತ್ತು. ಆ ಮೂರು ಶರಣರ ನೆನಪಿಗೆ 1978ರಿಂದ 80ರ ನಡುವಿನ ಅವಧಿಯಲ್ಲಿ ಈ ಮೂರು ದೀಪಗಳನ್ನ ಶಾರದಾಬಾಯಿ ಹಚ್ಚಿದರು.

ಈ ದೀಪಗಳು ಎಣ್ಣೆ ಹಾಗೂ ಬತ್ತಿ ಇಲ್ಲದಿದ್ರೂ ಉರಿಯತೊಡಗಿದವು. ಇದನ್ನು ಕಂಡ ಶಾರದಾದೇವಿಗೆ ಆಶ್ಚರ್ಯವೋ ಆಶ್ಚರ್ಯ. ಇದೆಲ್ಲಾ ಶರಣರ ಪವಾಡ ಅಂದುಕೊಂಡ ದಂಪತಿ ದೀಪಗಳನ್ನ ಬ್ರಹ್ಮ, ವಿಷ್ಣು, ಮಹೇಶ್ವರರ ರೂಪವಾಗಿ ಪೂಜಿಸಲಾರಂಭಿಸಿದ್ದರು. ಅಂದಿನಿಂದ ಇದೊಂದು ಧಾರ್ಮಿಕ ಕ್ಷೇತ್ರವಾಗಿ ರಾಜ್ಯದಲ್ಲಿ ಗುರುತಿಸಿಕೊಂಡಿತ್ತು. ಈ ಸ್ಥಳದಲ್ಲಿ ಗಣಪತಿ, ಈಶ್ವರಲಿಂಗ, ಪಾರ್ವತಿ, ಮತ್ತು ನಂದಿ ದೇವರ ವಿಗ್ರಹಗಳು ಇವೆ. ಈ ಕ್ಷೇತ್ರವನ್ನ ದತ್ತಾತ್ರೇಯ ಅವತಾರವೆಂದು ಸಹ ಹೇಳ್ತಾರೆ.

ಈ ಚಿಗಳ್ಳಿ ಗ್ರಾಮದಲ್ಲಿ ಶಾರದಮ್ಮ ಹಾಗೂ ಅಣ್ಣಪ್ಪ ಎನ್ನುವವರು ಹೋಟೆಲ್ ಇಟ್ಟುಕೊಂಡು ಜೀವನ ಮಾಡುತ್ತಿದ್ದರು. ಅವರಿಗೆ ತುಂಬಾ ದೈವದ ಭಕ್ತಿ ಇತ್ತು. ಸಿರಿಡಿ ಸಾಯಿಬಾಬಾನ ಭಕ್ತರು ಆಗಿದ್ದರು. ಮನೆಯ ಬೆಳಕಿಗಾಗಿ ಹಚ್ಚಿದ ದೀಪ 15 ದಿನಗಳು ಆದರೂ ಆರದೇ ನಿರಂತರವಾಗಿ ಉರಿಯುತ್ತಿದ್ದಾಗ ಶಾರದಮ್ಮಗೆ ವಿಸ್ಮಯ ಆಯಿತು.

ಎಲ್.ಟಿ.ಪಾಟೀಲ್, ಮಾಜಿ ಜಿ.ಪಂ. ಉಪಾಧ್ಯಕ್ಷ

ಈ ಭಕ್ತಿ ದೀಪಗಳ ಆರಿದ ವಿಚಾರ ತಿಳಿದ ಉರವರೆಲ್ಲಾ ಭಯಭೀತರಾಗಿದ್ದಾರೆ. ಇದಕ್ಕೆ ಪರಿಹಾರ ಹುಡುಕಿ ಹೊರಟು ಮಂಗಳೂರಿನ ಜ್ಯೋತಿಷ್ಯರೊಬ್ಬರನ್ನ ಭೇಟಿ ಮಾಡಿದ್ದಾರೆ. ಅವ್ರು ಕುಟುಂಬದ ಕೊನೆಯ ಹೆಣ್ಣುಮಗಳು ಅಲ್ಲಿ 3 ತುಪ್ಪದ ದೀಪಗಳನ್ನ ಹಚ್ಚಬೇಕು ಅನ್ನೋ ಸೂಚನೆ ನೀಡಿದ್ದಾರೆ. ಈ ದೀಪಗಳನ್ನ 48 ದಿನಗಳ ಕಾಲ ಆರದಂತೆ ಕಾಪಾಡಿಕೊಳ್ಳಿ, ಆಮೇಲೆ ನಂದಾದೀಪಗಳಲ್ಲಿ ಎನಾದ್ರೂ ವ್ಯತ್ಯಾಸ ಕಾಣಬಹುದು ಅನ್ನೋದನ್ನ ತಿಳಿಸಿದ್ದಾರೆ.

ಇದನ್ನೂ ಓದಿ: ಎಣ್ಣೆ, ಬತ್ತಿ ಇಲ್ಲದೇ 46 ವರ್ಷದಿಂದ ಉರಿಯುತ್ತಿದ್ದ 3 ದೀಪಗಳು ಆರಿ ಹೋದವು.. ಕರ್ನಾಟಕಕ್ಕೆ ಸಂಕಷ್ಟ ಕಾದಿದ್ಯಾ?

publive-image

ಮಂಗಳೂರಲ್ಲಿ ಜ್ಯೋತಿಷಿಗಳನ್ನು ಕೇಳಿದಾಗ ಮತ್ತೆ ದೀಪಗಳು ಬೆಳಗಬಹುದು. ನಾವು ಹೇಳಿದಂತ ಕಾರ್ಯಕ್ರಮಗಳನ್ನು ಮಾಡಿ. ತುಪ್ಪದ ದೀಪಗಳನ್ನು ಮತ್ತೆ ಹಚ್ಚಿಡಿ. ಹೀಗೆ 48 ದಿನಗಳ ಕಾಲ ಕಾಯಿರಿ. ಇಷ್ಟರೊಳಗೆ ದೀಪ ಶಾಂತವಾದರೂ ತುಪ್ಪ ಹಾಕಿ ಹಚ್ಚಿಡಿ. ಆ ಮೇಲೆ ಏನು ಆಗುತ್ತೆ ಎಂದು ಕಾದು ನೋಡೋಣ ಎಂದಿದ್ದಾರೆ.

ಮಂಜುನಾಥ್ ದೈವಜ್ಞ, ದೀಪ ಹಚ್ಚಿದ್ದ ದೈವಜ್ಞ ಕುಟುಂಬಸ್ಥ

ಈಗ ಅವರ ಸೂಚನೆಯಂತೆ ತುಪ್ಪದ ದೀಪಗಳನ್ನ ಹಚ್ಚಿ, ಅದನ್ನ ಆರದಂತೆ ಕಾಪಾಡಿಕೊಂಡು ಬರಲಾಗ್ತಿದೆ. ಈ ಘಟನೆಯಿಂದಾಗಿ ಊರಿಗೆ ಏನಾದರೂ ಕಂಟಕ ಆಗಬಹುದು ಅನ್ನೋ ಭಯ ಸಾರ್ವಜನಿಕರಲ್ಲಿ ಕಾಡ್ತಿದೆ. ಅದ್ಹೇನೆ ಇರಲಿ, ದೇವರ ಕೃಪೆಯಿಂದ ನಂದಾದೀಪಗಳು ಮತ್ತೆ ಮೊದಲಿನಂತೆ ಉರಿಯುತ್ತೆ ಅನ್ನೋ ಆಶಾಭಾವನೆಯನ್ನ ಸ್ಥಳೀಯರು ವ್ಯಕ್ತಪಡಿಸ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment