/newsfirstlive-kannada/media/post_attachments/wp-content/uploads/2024/07/Sex-Life.jpg)
ದೆಹಲಿ: ಭಾರತದಲ್ಲಿ ಮದುವೆಗೆ ಮೊದಲು ಸಂಬಂಧ ಬೆಳೆಸುವುದು ದೊಡ್ಡ ಅಪರಾಧ. ಅದೇ ರೀತಿ ವಿವಾಹ ನಂತರ ಬೇರೆ ವ್ಯಕ್ತಿ ಜೊತೆ ಸಂಬಂಧ ಬೆಳೆಸುವುದು ಅಷ್ಟೇ ತಪ್ಪು ಎಂದು ಭಾವಿಸಲಾಗುತ್ತದೆ. ಮದುವೆ ಆದ್ಮೇಲೆ ವಿವಾಹೇತರ ಸಂಬಂಧ ಬೆಳೆಸುವುದು, ಡಿವೋರ್ಸ್ ನೀಡುವುದು ಎಲ್ಲವೂ ಫಾರೀನ್ ಕಲ್ಚರ್. ಈ ಕಲ್ಚರ್ ಈಗ ಭಾರತದಲ್ಲೂ ಶುರುವಾಗಿದೆ ಎನ್ನುವುದು ಶಾಕಿಂಗ್ ವಿಚಾರ.
ಹೌದು, ಇತ್ತೀಚೆಗೆ ಭಾರತದಲ್ಲಿ ವಿಚ್ಛೇದನ ಮಾತ್ರವಲ್ಲ ವಿವಾಹೇತರ ಸಂಬಂಧ ಕೂಡ ವಿಪರೀತವಾಗಿದೆ. ಅದ್ರಲ್ಲೂ ಬೆಂಗಳೂರು ಮುಂದು ಎಂಬುದು ಆಘಾತಕಾರಿ ಸುದ್ದಿ. ಈ ಆಘಾತಕಾರಿ ಸುದ್ದಿ ಬಹಿರಂಗ ಪಡಿಸಿದ್ದು ಒಂದು ಡೇಟಿಂಗ್ ಅಪ್ಲಿಕೇಶನ್.
ಡೇಟಿಂಗ್ ಅಪ್ಲಿಕೇಶನ್ ಡೇಟಾ ಏನು ಹೇಳುತ್ತೆ?
ವಿವಾಹೇತರ ಡೇಟಿಂಗ್ ಅಪ್ಲಿಕೇಶನ್ ಗ್ಲೀಡೆನ್ ಪ್ರಕಾರ 2024ರಲ್ಲಿ ಭಾರತದಲ್ಲಿ 30 ಲಕ್ಷಕ್ಕೂ ಹೆಚ್ಚು ಜನರು ವಿವಾಹೇತರ ಸಂಬಂಧ ಹೊಂದಿದ್ದಾರೆ. 2023ರಲ್ಲಿ ಈ ಅಪ್ಲಿಕೇಶನ್ 20 ಮಿಲಿಯನ್ ಮಂದಿ ಯೂಸರ್ಸ್ ಇದ್ದರು. ಈ ಬಳಕೆದಾರರಲ್ಲಿ ಸುಮಾರು ಶೇಕಡಾ 20ರಷ್ಟು ಬೆಂಗಳೂರಿಗರು. ಮುಂಬೈ ಶೇ. 19 ಮತ್ತು ಕೋಲ್ಕತ್ತಾ ಶೇ. 18 ಹಾಗೂ ದೆಹಲಿ ಶೇ. 15ರಷ್ಟು ಬಳಕೆದಾರರು ಇದ್ದಾರೆ.
ಅತ್ಯಂತ ಆಸಕ್ತಿದಾಯಕ ವಿಷಯ ಎಂದರೆ ದೊಡ್ಡ ಸಿಟಿಗಳ ಜತೆಗೆ ಸಣ್ಣ ನಗರಗಳ ಜನ ಕೂಡ ಇದ್ದಾರೆ. ಎಂಜಿನಿಯರ್‌ಗಳಿಂದ ವೈದ್ಯರವರೆಗೆ ಎಲ್ಲರೂ ಈ ಅಪ್ಲಿಕೇಶನ್ ಬಳಸುತ್ತಿದ್ದಾರೆ.
ಮಹಿಳೆಯರು ಹೆಚ್ಚು
ಇಷ್ಟೇ ಅಲ್ಲ ಬಳಕೆದಾರರ ಪೈಕಿ ಶೇಕಡಾ 58 ರಷ್ಟು ಮಹಿಳೆಯರು. ಇವರು ಸುಮಾರು 45 ನಿಮಿಷಗಳ ಕಾಲ ಈ ಆ್ಯಪ್ನಲ್ಲಿ ಸಮಯ ಕಳೆಯುತ್ತಿದ್ದಾರೆ. ಎಲ್ಲಾ ವಯಸ್ಸಿನ ಪುರುಷರು ಮತ್ತು ಮಹಿಳೆಯರು ಈ ಅಪ್ಲಿಕೇಶನ್ ಬಳಸುತ್ತಿದ್ದಾರೆ ಎಂಬುದು ಮತ್ತೊಂದು ಅಚ್ಚರಿ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಮಹಿಳೆಯರು ಶೇಕಡಾ 128ರಷ್ಟು ಹೆಚ್ಚಾಗಿದ್ದಾರೆ.
ಕಾರಣವೇನು?
ದಾಂಪತ್ಯ ದ್ರೋಹ, ಬೇಸರ, ದುಃಖ, ಗಂಡ ಅಥವಾ ಹೆಂಡತಿ ನಿರ್ಲಕ್ಷ್ಯವೇ ವಿವಾಹೇತರ ಸಂಬಂಧಕ್ಕೆ ಕಾರಣ. ಬಹುತೇಕರು ಈ ಕಾರಣದಿಂದಲೇ ವಿವಾಹೇತರ ಸಂಬಂಧದ ಮೊರೆ ಹೋಗಿದ್ದಾರೆ ಎಂದರು ಗ್ಲೀಡೆನ್ ಅಪ್ಲಿಕೇಶನ್ ಮ್ಯಾನೇಜರ್.
ಇದನ್ನೂ ಓದಿ:ಆರ್ಸಿಬಿಗೆ ಸ್ಫೋಟಕ ಬ್ಯಾಟರ್ ಎಂಟ್ರಿ; ಈ ಸ್ಟಾರ್ ಪ್ಲೇಯರ್ ವಿಲ್ ಜಾಕ್ಸ್ಗಿಂತಲೂ ಭಾರೀ ಡೇಜರ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್