newsfirstkannada.com

ಗರ್ಭ ಧರಿಸಿಲ್ಲ, ಮರಿನೂ ಹಾಕಿಲ್ಲ.. ಆದ್ರೂ ಹಾಲು ಕೊಡುತ್ತೆ ಈ 3 ತಿಂಗಳ ಮೇಕೆ ಮರಿ..!

Share :

Published July 15, 2024 at 9:11am

    ಮೇಕೆ ಮರಿ ಹಾಲು ಕೊಡುತ್ತಿರುವುದಕ್ಕೆ ಗ್ರಾಮಸ್ಥರಿಗೆಲ್ಲ ಆಶ್ಚರ್ಯ

    ಕೇವಲ 3 ತಿಂಗಳು ಮೇಕೆ ಮರಿ ಹಾಲು ಕೊಡಲು ಮುಖ್ಯ ಕಾರಣ?

    ಜೀವನೋಪಾಯಕ್ಕಾಗಿ ಮೇಕೆ ಸಾಕಾಣಿಕೆ ಮಾಡುತ್ತಿರುವ ನಿವಾಸಿ

ಬೆಳಗಾವಿ: ಮೂರು ತಿಂಗಳ ಮೇಕೆ ಮರಿಯೊಂದು ಗರ್ಭ ಧರಿಸದೇ, ಮರಿಯನ್ನೂ ಹಾಕದೇ ದಿನಕ್ಕೆ ಅರ್ಧ ಲೀಟರ್​ನಷ್ಟು ಹಾಲು ಕೊಡುತ್ತಿರುವುದು ಗ್ರಾಮಸ್ಥರಿಗೆ ಆಶ್ಚರ್ಯ ಮೂಡಿಸಿದೆ.

ಇದನ್ನೂ ಓದಿ: ಶಾಲಾ-ಕಾಲೇಜುಗಳಿಗೆ ರಜೆ.. ಧಾರಾಕಾರ ಮಳೆ, ಜಲಾಶಯಗಳಿಗೆ ಜೀವ ಕಳೆ, ಇನ್ನೂ 4 ದಿನ ವರುಣಾರ್ಭಟ..!

ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ ನಿವಾಸಿ ಈಶ್ವರಪ್ಪ ಮಾದಿಗರ ಎಂಬುವರಿಗೆ ಸೇರಿದ ಮೇಕೆ ಮರಿಗೆ ಇನ್ನು ಕೇವಲ 3 ತಿಂಗಳು. ಇದುವರೆಗೂ ಗರ್ಭವನ್ನೂ ಧರಿಸಿಲ್ಲ, ಯಾವುದೇ ಮರಿಯನ್ನು ಕೂಡ ಹಾಕಿಲ್ಲ. ಆದರೂ ಈ ಮರಿ ಹಾಲು ಕೊಡುತ್ತಿದೆ. ಎರಡುವರೆ ತಿಂಗಳಲ್ಲೇ ಇದು ಕೆಚ್ಚಲು ಮಾಡಿತ್ತು. ಇದನ್ನು ಗಮನಿಸಿದ ಮಾಲೀಕನಿಗೆ ಆಶ್ಚರ್ಯವಾಗಿದೆ.

ಇದನ್ನೂ ಓದಿ: ಅಧಿವೇಶನದಲ್ಲಿ ಕಾಡಲಿದೆ 4 ಮಾಜಿ ಸಿಎಂಗಳ ಅನುಪಸ್ಥಿತಿ.. BSY, HDK ಸ್ಥಾನ ತುಂಬುತ್ತಾರಾ ಅಶೋಕ್, ವಿಜಯೇಂದ್ರ?

ಇದೇನಿದು ಇನ್ನು ಇದು ಗರ್ಭ ಧರಿಸಿಲ್ಲದೇ ಕೆಚ್ಚಲು ದೊಡ್ಡದಾಗಿವೆಯಲ್ಲ ಎಂದು ಹಾಲು ಕರೆದಿದ್ದಾನೆ. ಅಂದಿನಿಂದ ಇಂದಿನವರೆಗೂ ಮೇಕೆ ಮರಿ ದಿನಕ್ಕೆ ಅರ್ಧ ಲೀಟರ್​ನಷ್ಟು ಹಾಲು ಕೊಡುತ್ತಿದೆ. ಈ ವಿಸ್ಮಯವನ್ನು ಕೇಳಿದಂತಹ ಸುತ್ತಮುತ್ತದ ಗ್ರಾಮಸ್ಥರು ಮೇಕೆ ನೋಡಲು ಬಂದು ಹೋಗುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗರ್ಭ ಧರಿಸಿಲ್ಲ, ಮರಿನೂ ಹಾಕಿಲ್ಲ.. ಆದ್ರೂ ಹಾಲು ಕೊಡುತ್ತೆ ಈ 3 ತಿಂಗಳ ಮೇಕೆ ಮರಿ..!

https://newsfirstlive.com/wp-content/uploads/2024/07/BGM_GOAT.jpg

Load More