newsfirstkannada.com

ಬಾಂಬ್​ ಬ್ಲಾಸ್ಟ್​ಗೆ 3 ತಿಂಗಳಿಂದ ಪ್ರೀ ಪ್ಲಾನ್​? ಸರಿಯಾದ ಸಮಯ ನೋಡಿ ಉಡೀಸ್​ ಮಾಡಿಬಿಟ್ಟ ಬಾಂಬರ್​

Share :

Published March 3, 2024 at 7:27am

Update March 3, 2024 at 7:35am

    ಬಾಂಬ್ ಬ್ಲಾಸ್ಟ್‌ಗೆ ಶಂಕಿತ ಉಗ್ರರು ನಡಿಸಿದ್ರಾ ಪ್ಲಾನ್‌

    ಕಳೆದ ಮೂರು ತಿಂಗಳಿಂದ ರೆಕ್ಕಿ ಮಾಡಿರುವ ಶಂಕಿತ ಉಗ್ರ

    ಮುಖ ಚಹರೆ ಬಿಟ್ಟು ಕೊಡದ, ಸಿಸಿ ಕ್ಯಾಮೆರಾದಿಂದ ತಪ್ಪಿಸಿಕೊಂಡ ಬಾಂಬರ್‌

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್​ ಪ್ರಕರಣದ ತನಿಖೆಯನ್ನ ಪೊಲೀಸರು ಎಲ್ಲಾ ರೀತಿಯ ಆಯಾಮಗಳಲ್ಲೂ ಮಾಡ್ತಿದ್ದಾರೆ. ಈ ಮಧ್ಯೆ ರಾಮೇಶ್ವರಂ ಕೆಫೆಯನ್ನೇ ಶಂಕಿತ ಉಗ್ರ ಟಾರ್ಗೆಟ್ ಮಾಡಿದ್ಯಾಕೆ ಅನ್ನೋ ಪ್ರಶ್ನೆ ಶುರುವಾಗಿದೆ. ಇದೀಗ ಶಂಕಿತ ಉಗ್ರ ಬಾಂಬ್ ಬ್ಲಾಸ್ಟ್‌ ಮಾಡೋಕೆ ಪಕ್ಕಾ ಪ್ರೀಪ್ಲಾನ್ ಮಾಡಿರೋದು ಬೆಳಕಿದೆ ಬಂದಿದೆ.

ಬೆಂಗಳೂರು ರಾಮೇಶ್ವರಂ ಕೆಫೆ ಬ್ಲಾಸ್ಟ್​ ಕೇಸ್​ ಸದ್ಯ ರಾಜ್ಯ ರಾಜಧಾನಿಯನ್ನ ಬೆಚ್ಚಿ ಬೀಳಿಸಿದೆ. ಆರೋಪಿಗಳನ್ನು ಹೆಡೆಮುರಿಕಟ್ಟಲು ಎಲ್ಲೆಡೆ ತಪಾಸಣೆ ಶುರು ಮಾಡಿದ್ದಾರೆ. ಈ ವೇಳೆ ಕೆಫೆಯಲ್ಲಿ ಆರೋಪಿಗಳು ಬಾಂಬ್ ಬ್ಲಾಸ್ಟ್​ ಮಾಡಲು ಏನೆಲ್ಲಾ ಪ್ರೀ ಪ್ಲಾನ್ ಮಾಡಿದ್ರು ಅನ್ನೋದು ತನಿಖೆಯಲ್ಲಿ ಬಯಲಾಗಿದೆ.

ಕೆಫೆಯ ಸಂಪೂರ್ಣ ಮಾಹಿತಿ ಸಂಗ್ರಹಿಸಿರುವ ಶಂಕಿತರು

ತಲೆಗೆ ಹ್ಯಾಟ್​.. ಕಣ್ಣಿಗೆ ಗ್ಲಾಸ್​.. ಮುಖಕ್ಕೆ ಮಾಸ್ಕ್​ ಹಾಕ್ಕೊಂಡು ಆರೋಪಿ ಅವಸರವಾಗಿ ಹೋಗ್ತಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಈತ ಬಿಎಂಟಿಸಿ ಓಲ್ವೋ ಬಸ್​ನಲ್ಲಿ ರಾಮೇಶ್ವರಂ ಕೆಫೆಗೆ ಬಂದಿದ್ದಾನೆ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಹೀಗೆ ಬಂದಿರೋ ದುಷ್ಕರ್ಮಿ ಪಕ್ಕಾ ಪ್ರೀ ಪ್ಲಾನ್ ಮಾಡಿ ಬಾಂಬ್ ಸ್ಫೋಟಿಸಿರೋ ಮಾಹಿತಿ ತಿಳಿದುಬಂದಿದೆ. ರಾಮೇಶ್ವರಂ ಕೆಫೆಯ ಸಂಪೂರ್ಣ ಮೂಮೆಂಟ್ ಬಗ್ಗೆ ಕಣ್ಣಿಟ್ಟು ಕೊನೆಗೂ ಬಾಂಬ್ ಸ್ಫೋಟಿಸಿದ್ದಾನೆ.

ಪಕ್ಕಾ ಪ್ರೀಪ್ಲಾನ್ ಬ್ಲಾಸ್ಟ್‌

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್‌ಗೂ ಮುನ್ನ ಇಡೀ ಸ್ಥಳದ ಬಗ್ಗೆ ಶಂಕಿತ ಉಗ್ರ ರೆಕ್ಕಿ ಮಾಡಿದ್ದಾರೆ ಅನ್ನೋದು ತನಿಖೆಯಲ್ಲಿ ತಿಳಿದುಬಂದಿದೆ. ಕಳೆದ ಮೂರು ತಿಂಗಳಿಂದ ರೆಕ್ಕಿ ಅಂದ್ರೆ ಚಲನವಲನಗಳ ಮೇಲೆ ಶಂಕಿತ ಉಗ್ರ ಕಣ್ಣಿಟ್ಟಿರೋದು ತಿಳಿದುಬಂದಿದೆ. ಕೆಫೆಯಲ್ಲಿ ಯಾವಾಗ ಹೆಚ್ಚು ಜನರ ಮೂಮೆಂಟ್ ಇರುತ್ತದೆ, ಕೆಫೆಗೆ ಬರುವಾಗ ಹೋಗುವಾಗ ಎಲ್ಲೆಲ್ಲಿ ಸಿಸಿ ಕ್ಯಾಮರಾ ಇದೆ. ಸಿಸಿ ಕ್ಯಾಮರಾದಿಂದ ಹೇಗೆ ಸೇಫ್‌ ಅಗಿ ಎಕ್ಸಿಟ್ ಅಗಬೇಕು. ಎಲ್ಲೆಲ್ಲಿ ಪೊಲೀಸ್ ಠಾಣೆಗಳು ಸಿಗುತ್ತವೆ. ಎಲ್ಲೆಲ್ಲಿ ಇಂಟೆಲಿಜೆನ್ಸಿ ಹೆಚ್ಚಾಗಿ ಆಕ್ಟಿವ್ ಅಗಿದೆ ಅನ್ನೊ ಬಗ್ಗೆ ಕಂಪ್ಲೀಟ್ ರೆಕ್ಕಿ ಮಾಡಿದ್ದಾನೆ. ಅಲ್ಲದೇ ಬಾಂಬ್ ತಯಾರಿಕೆ, ಬ್ಯಾಗ್ ತರುವವನು, ಎಸ್ಕೇಪ್ ಆಗೋದು, ಎಲ್ಲಿ ತಲೆಮರೆಸಿಕೊಳ್ಳಬೇಕು ಎಲ್ಲಾ ಪ್ಲಾನ್ ಮಾಡಲಾಗಿರುತ್ತೆ ಅನ್ನೋದು ತನಿಖೆಯಲ್ಲಿ ಗೊತ್ತಾಗಿದೆ.. ಅಲ್ಲದೇ ಪೊಲೀಸರ ಕೈಗೆ ಸಿಕ್ಕಿಬಿದ್ರೆ ಉಳಿದವರ ಮಾಹಿತಿ ಸಿಗದಂತೆ ಪ್ಲಾನ್ ಮಾಡಿರ್ತಾರೆ ಎಂಬ ಸಂಗತಿ ಬಯಲಾಗಿದೆ.

ಇನ್ನೂ ಬಾಂಬರ್‌ ಎಲ್ಲಿಯೂ ತನ್ನ ಮುಖ ಚಹರೆಯನ್ನ ಬಿಟ್ಟು ಕೊಟ್ಟಿಲ್ಲ. ಮುಖ ಚಹರೆ ಸಂಪೂರ್ಣವಾಗಿ ಯಾವ ಸಿಸಿ ಕ್ಯಾಮಾರದಲ್ಲೂ ಸೆರೆಯಾಗಿಲ್ಲ. ಉಗ್ರನ ಸೆರೆ ಹಿಡಿಯಲು ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಈ ಮಧ್ಯೆ ಬಾಂಬ್‌ ಬ್ಲಾಸ್ಟ್‌ ನಡೆದಿರೋ ರಾಮೇಶ್ವರಂ ಕೆಫೆಯಲ್ಲಿ ಪೊಲೀಸರು ಕ್ರೈಂ ಸೀನ್ ಪ್ರೊಟೆಕ್ಟ್ ಮಾಡಿದ್ರು. ಇದೀಗ ನಿನ್ನೆ ಸಂಜೆ ಕ್ಲೀನ್ ಇಡೀ ಹೋಟೆಲ್‌ನ ಕ್ಲೀನ್ ಮಾಡಲಾಗಿದೆ. 20ಕ್ಕೂ ಹೆಚ್ಚು ಸಿಬ್ಬಂದಿ ಕರೆಸಿ ಕೆಫೆ ಮಾಲೀಕ ರಾಘವೇಂದ್ರ ರಾವ್ ಸ್ವಚ್ಚತೆ ಮಾಡಿಸಿದ್ದಾರೆ. ಇದೇ ವೇಳೆ ನಮಗೆ ಯಾವುದೇ ವ್ಯವಹಾರಿಕ ದ್ವೇಷವಿಲ್ಲ ಅಂತ ರಾಘವೇಂದ್ರ ರಾವ್ ತಿಳಿಸಿದ್ದಾರೆ.

ಅದೇನೆ ಹೇಳಿ. 9 ವರ್ಷಗಳ ಬಳಿಕ ರಾಜ್ಯ ರಾಜಾಧಾನಿ ಬೆಂಗಳೂರಲ್ಲಿ ವಿಧ್ವಂಸಕ ಕೃತ್ಯ ನಡೆದಿದ್ದು, ಪಟ್ಟಣದ ಮಂದಿಯನ್ನ ದಿಗ್ಭ್ರಾಂತರನ್ನಾಗಿಸಿರೋದಂತು ನಿಜ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಂಬ್​ ಬ್ಲಾಸ್ಟ್​ಗೆ 3 ತಿಂಗಳಿಂದ ಪ್ರೀ ಪ್ಲಾನ್​? ಸರಿಯಾದ ಸಮಯ ನೋಡಿ ಉಡೀಸ್​ ಮಾಡಿಬಿಟ್ಟ ಬಾಂಬರ್​

https://newsfirstlive.com/wp-content/uploads/2024/03/rameshwaram.jpg

Load More