/newsfirstlive-kannada/media/post_attachments/wp-content/uploads/2024/05/Bangalore-Rains-1.jpg)
ಬೆಂಗಳೂರು: ಕೊರೆವ ಚಳಿಗೆ ನಡುಗುತ್ತಿರುವ ಸಿಲಿಕಾನ್ ಸಿಟಿ ಜನರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮತ್ತೆ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯ ಹವಾಮಾನ ಇಲಾಖೆ ಮುಂದಿನ 3 ದಿನ ರಾಜ್ಯದಲ್ಲಿ ಎಲ್ಲೆಲ್ಲಿ ಮಳೆಯಾಗುವ ನಕ್ಷೆಯನ್ನ ಬಿಡುಗಡೆ ಮಾಡಿದೆ.
21.12.2024 ರಂತೆ ಮುಂದಿನ ಮೂರು ದಿನಗಳ ರಾಜ್ಯದ #ಮಳೆ#ಮುನ್ಸೂಚನೆ ನಕ್ಷೆ:@KarnatakaVarthe#KSNDMC
Next 3 days #rainfall#forecast maps as of 21.12.2024: #karnatakarainspic.twitter.com/QwD632TqRX— Karnataka State Natural Disaster Monitoring Centre (@KarnatakaSNDMC)
21.12.2024 ರಂತೆ ಮುಂದಿನ ಮೂರು ದಿನಗಳ ರಾಜ್ಯದ #ಮಳೆ#ಮುನ್ಸೂಚನೆ ನಕ್ಷೆ:@KarnatakaVarthe#KSNDMC
Next 3 days #rainfall#forecast maps as of 21.12.2024: #karnatakarainspic.twitter.com/QwD632TqRX— Karnataka State Natural Disaster Monitoring Centre (@KarnatakaSNDMC) December 21, 2024
">December 21, 2024
ಹವಾಮಾನ ಇಲಾಖೆ ನೀಡಿರೋ ಮಾಹಿತಿ ಪ್ರಕಾರ ಮುಂದಿನ 3 ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಡಿಸೆಂಬರ್ 23ರಿಂದ ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
/newsfirstlive-kannada/media/post_attachments/wp-content/uploads/2024/10/RAIN-RAIN-1.jpg)
ಬಂಗಾಳಕೊಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಬೆಂಗಳೂರು, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಮಂಡ್ಯ, ಕೊಡಗು, ಶಿವಮೊಗ್ಗ, ಚಿತ್ರದುರ್ಗ ದಾವಣಗೆರೆ ಹಾಗೂ ಕೋಲಾರದಲ್ಲಿ ಭಾರೀ ಮಳೆ ಆಗುವ ಮುನ್ಸೂಚನೆ ನೀಡಿಲಾಗಿದೆ.
ಇನ್ನು, ವಿಜಯನಗರ, ತುಮಕೂರು, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡದಲ್ಲಿ ಒಣಹವೆ ಇರಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಪೋಷಕರೇ ಎಚ್ಚರ.. ಬೆಂಗಳೂರಿನಲ್ಲಿ ದಿಢೀರ್ ಹವಾಮಾನ ಬದಲಾವಣೆ; ಮಕ್ಕಳ ತಜ್ಞರಿಂದ 7 ಸಲಹೆಗಳು
ಆರೋಗ್ಯದ ಬಗ್ಗೆ ಎಚ್ಚರ!
ಡಿಸೆಂಬರ್ ಚಳಿ ಈಗಾಗಲೇ ರಾಜ್ಯದ ಜನರನ್ನ ಕಾಡಲು ಆರಂಭಿಸಿದೆ. ಕೊರೆವ ಚಳಿ, ಮಳೆ, ಒಣಹವೆ, ಬಿಸಿಲು ಹೀಗೆ ಹವಮಾನದ ವೈಪರಿತ್ಯ ಮುಂದುವರಿಯಲಿದೆ. ಡಿಸೆಂಬರ್ ಅಂತ್ಯದವರೆಗೂ ಹವಮಾನದಲ್ಲಿ ಬದಲಾವಣೆ ಆಗುತ್ತಿದ್ದು, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಶೀತ, ಕೆಮ್ಮು, ನೆಗಡಿ, ಜ್ವರ ಬಾಧಿಸುವ ಸಾಧ್ಯತೆ ಹೆಚ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us