ಮಂಡ್ಯದಲ್ಲಿ 3 ವರ್ಷದ ಮಗು ದುರಂತ.. ಸ್ಥಳದಲ್ಲಿದ್ದ ಮೂವರು ಟ್ರಾಫಿಕ್‌ ಪೊಲೀಸರಿಗೆ ಸಸ್ಪೆಂಡ್ ಶಿಕ್ಷೆ

author-image
Veena Gangani
Updated On
ಮಂಡ್ಯದಲ್ಲಿ 3 ವರ್ಷದ ಮಗು ದುರಂತ.. ಸ್ಥಳದಲ್ಲಿದ್ದ ಮೂವರು ಟ್ರಾಫಿಕ್‌ ಪೊಲೀಸರಿಗೆ ಸಸ್ಪೆಂಡ್ ಶಿಕ್ಷೆ
Advertisment
  • ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ಯಡವಟ್ಟಿಗೆ ಮಗು ಬಲಿ
  • ಶವಗಾರಕ್ಕೆ ಮೃತದೇಹ ರವಾನೆ ಮಾಡಿದ ಪೋಷಕರು
  • ಪೊಲೀಸರ ಭರವಸೆಗೆ ಪ್ರತಿಭಟನೆ ಕೈ ಬಿಟ್ಟ ಕುಟುಂಬಸ್ಥರು

ಮಂಡ್ಯ: ಟ್ರಾಫಿಕ್ ಪೊಲೀಸರ ಯಡವಟ್ಟಿಗೆ ಮಗು ಬಲಿಯಾಗಿರೋ ಘಟನೆಗೆ ಸಂಬಂಧಿಸಿದ್ದಂತೆ ಸ್ಥಳದಲ್ಲಿದ್ದ ಎಲ್ಲಾ 3 ಪೊಲೀಸರನ್ನು ಸಸ್ಪೆಂಡ್‌ ಮಾಡಲಾಗಿದೆ.

ಇದನ್ನೂ ಓದಿ: ಮಗುಗೆ ಕಚ್ಚಿದ್ದ ನಾಯಿ.. ಆಸ್ಪತ್ರೆಗೆ ಹೋಗುವಾಗ ಬೈಕ್ ಅಡ್ಡಗಟ್ಟಿದ್ದಕ್ಕೆ ದುರಂತ

publive-image

ಹೌದು, ನಾಯಿ ಕಚ್ಚಿದ್ದ ಪರಿಣಾಮ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ಟ್ರಾಫಿಕ್​ ಪೊಲೀಸರು ಅಡ್ಡಗಟ್ಟಿದ್ದರಿಂದ ಆಯತಪ್ಪಿ ಮಗು ಕೆಳಗೆ ಬಿದ್ದು ಮೃತಪಟ್ಟಿದೆ. ಹೀಗಾಗಿ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಂತೆ ಪೊಲೀಸ್ ಇಲಾಖೆಯೂ ಟ್ರಾಫಿಕ್ ಪೊಲೀಸರ ತಲೆದಂಡಕ್ಕೆ ಮುಂದಾಗಿತ್ತು. ಸ್ಥಳದಲ್ಲಿ ಯಾರು ಇದ್ದರು ಎಂದು ಪ್ರಾಥಮಿಕ ವರದಿ ತರುವಂತೆ ಸೂಚಿಸಿದ್ದರು. ಘಟನೆ ನಡೆದ ಸ್ಥಳದಲ್ಲಿ ಇದ್ದ ಎಲ್ಲಾ ಪೊಲೀಸರ ಸಸ್ಪೆಂಡ್‌ಗೆ ತಯಾರಿ ಕೂಡ ನಡೆಸಲಾಗುತ್ತು. ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಕೊಟ್ಟ ಮಾತಿನಂತೆ ಸ್ಥಳದಲ್ಲಿದ್ದ 6 ಮಂದಿ ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ. ಅಲ್ಲದೇ ಎಎಸ್‌ಐಗಳಾದ ನಾಗರಾಜು, ಜಯರಾಂ, ಗುರುದೇವ್ ಸಮ್ಮುಖದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಮೂವರು ಎಎಸ್‌ಐಗಳ ಜೊತೆಗಿದ್ದ ಮೂರು ಸಿಬ್ಬಂದಿಗಳು ಸೇರಿ ಒಟ್ಟು ಆರು ಮಂದಿಯನ್ನು ಸಸ್ಪೆಂಡ್ ಮಾಡೋದಕ್ಕೆ ತಯಾರಿ ನಡೆಸಲಾಗುತ್ತಿದೆ.

publive-image

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಟ್ರಾಫಿಕ್ ಪೊಲೀಸರ ತಪ್ಪಿದ್ದರೇ ಅವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ಮೃತ ಮಗು ಕುಟುಂಬಕ್ಕೆ ಅಗತ್ಯ ಪರಿಹಾರದ ಭರವಸೆ ನೀಡುತ್ತೇವೆ ಎಂದು ಎಎಸ್ಪಿ ಗಂಗಾಧರಸ್ವಾಮಿ ಹೇಳಿದ್ದಾರೆ. ಹೀಗಾಗಿ ಪ್ರತಿಭಟನೆಯನ್ನು ಕೈ ಬಿಟ್ಟ ಪೋಷಕರು ಮರಣೋತ್ತರ ಪರೀಕ್ಷೆಗೆಂದು ಮಗುವಿನ ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ಸದ್ಯ ಮಂಡ್ಯ ಮಿಮ್ಸ್ ಆಸ್ಪತ್ರೆ ಶವಾಗಾರದಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment